ನವದೆಹಲಿ : ಪ್ರಸ್ತುತ ಯುಗದಲ್ಲಿ ಬೆನ್ನು ನೋವು (Back pain) ಸಾಮಾನ್ಯ ಸಮಸ್ಯೆಯಾಗಿದೆ. ವಯಸ್ಸು ಹೆಚ್ಚಾದಂತೆ ಈ ಸಮಸ್ಯೆ ಕೂಡಾ ಹೆಚ್ಚುತ್ತಾ ಹೋಗುತ್ತದೆ. ಕೆಳ ಬೆನ್ನಿನಲ್ಲಿ (Lower back pain) ಕಾಣಿಸಿಕೊಳ್ಳುವ ನೋವು ಸಾಮಾನ್ಯವಾಗಿ 4 ರಿಂದ 12 ವಾರಗಳವರೆಗೆ ಇರುತ್ತದೆ. ಈ ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ, ಬೆನ್ನು ನೋವನ್ನು ಗುಣಪಡಿಸಬಹುದು.
ಬೆನ್ನು ನೋವು ಏಕೆ ಕಾಣಿಸಿಕೊಳ್ಳುತ್ತದೆ ?
ಬೆನ್ನು ನೋವು (Back pain) ಅನೇಕ ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಹೆಚ್ಚುತ್ತಿರುವ ವಯಸ್ಸು, ಸಣ್ಣ ಅಥವಾ ಪ್ರಮುಖ ಸ್ಲಿಪ್ ಡಿಸ್ಕ್ (Slip disk) ಸೇರಿದಂತೆ ಹಲವು ಕಾರಣಗಳಿಂದ ಬೆನ್ನು ನೋವು ಉಂಟಾಗಬಹುದು. ಇದಲ್ಲದೇ ಅನೇಕ ಬಾರಿ ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳದೆ ಇರುವುದರಿಂದ ಅಥವಾ ಮಲಗುವುದರಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ : Hair Fall: ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಪಡೆಯಲು ಯೋಗವೇ ಮದ್ದು
ಬೆನ್ನುನೋವಿಗೆ ಪರಿಹಾರಗಳು ಯಾವುವು?
ಬೆನ್ನು ನೋವಿನ ನಿವಾರಣೆಗೆ ಅನೇಕ ಮಾರ್ಗಗಳಿವೆ. ಬೆನ್ನು ನೋವಿನ ಸಮಸ್ಯೆ ಇದ್ದರೆ, ಸಾಮಾನ್ಯವಾಗಿ ಹೀಟಿಂಗ್ ಪ್ಯಾಡ್ ( Heating pad) ಅಥವಾ ಐಸ್ ಪ್ಯಾಡ್ ಅನ್ನು ಬಳಸಲಾಗುತ್ತದೆ.
ಐಸ್ ಪ್ಯಾಡ್ ನಿಂದ ಪರಿಹಾರ ಹೇಗೆ ?
ನೋವು ಅಥವಾ ಗಾಯವು ಸಂಭವಿಸಿದಾಗ ತಕ್ಷಣವೇ ಐಸ್ ಪ್ಯಾಡ್ (Ice pad) ಬಳಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಇದರಿಂದ ತ್ವರಿತ ಪರಿಹಾರ ಸಿಗುತ್ತದೆ. ಅನೇಕ ಬಾರಿ ವ್ಯಾಯಾಮದ ನಂತರ ಸಾಕಷ್ಟು ನೋವು ಕಾಣಿಸಿಕೊಳ್ಳುತ್ತದೆ. ಹೀಗಿರುವಾಗ ಐಸ್ ಪ್ಯಾಡ್ ಬಳಸುವುದರಿಂದ (benefits of ice pad) ನೋವು ನಿವಾರಣೆಯಾಗುತ್ತದೆ.
ಐಸ್ ಪ್ಯಾಡ್ ಅನ್ನು ಬಳಸುವುದು ಹೇಗೆ ?
ಐಸ್ ಪ್ಯಾಡ್ ಅನ್ನು ಬಳಸುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ ಮತ್ತು ಅಪಧಮನಿಗಳು ಸಹ ಸಂಕುಚಿತಗೊಳ್ಳುತ್ತವೆ. ಈ ಕಾರಣದಿಂದಾಗಿ, ಊತವು ಸಹ ನಿವಾರಣೆಯಾಗುತ್ತದೆ. ದಿನಕ್ಕೆ 10 ರಿಂದ 20 ನಿಮಿಷಗಳ ಕಾಲ ಐಸ್ ಪ್ಯಾಡ್ ಬಳಸಬಹುದು. ದೀರ್ಘಕಾಲದವರೆಗೆ ಇದನ್ನು ಬಳಸದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಹಾನಿ ಸಂಭವಿಸಬಹುದು.
ಇದನ್ನೂ ಓದಿ : Protein: ಮೊಟ್ಟೆ, ಪನ್ನೀರ್ ತಿನ್ನದವರಿಗೆ, ಈ ಕಾಳುಗಳೇ ಪ್ರೋಟೀನ್‌ನ ನಿಧಿa
ನೋವಿನಿಂದ ಪರಿಹಾರ ನೀಡುತ್ತದೆ ಹೀಟಿಂಗ್ ಪ್ಯಾಡ್ :
ಹೀಟಿಂಗ್ ಪ್ಯಾಡ್ ಮೂಲಕ ರಕ್ತ ಪರಿಚಲನೆ ಉತ್ತಮವಾಗಿರುತ್ತದೆ (Benefits og heating pad). ಇದು ಅತ್ಯಂತ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಟಿಂಗ್ ಥೆರಪಿಯನ್ನು 20 ರಿಂದ 30 ನಿಮಿಷಗಳ ಕಾಲ ಬಳಸಬೇಕು. ಹೀಟಿಂಗ್ ಪ್ಯಾಡ್ ಬಳಸುವಾಗ ಪ್ಯಾಡ್‌ನ ತಾಪಮಾನ ಹೆಚ್ಚು ಇರಬಾರದು ಎನ್ನುವುದು ನೆನಪಿನಲ್ಲಿರಲಿ.
ನೋವು ಕಡಿಮೆಯಾಗದಿದ್ದರೆ ಏನು ಮಾಡಬೇಕು ?
ಅನೇಕ ಬಾರಿ ಐಸ್ ಪ್ಯಾಡ್ ಅಥವಾ ಹೀಟಿಂಗ್ ಪ್ಯಾಡ್ ಬಳಸಿದ ನಂತರವೂ ಕೆಳ ಬೆನ್ನುನೋವು ಕಡಿಮೆಯಾಗುವುದಿಲ್ಲ. ಒಂದು ವೇಳೆ ಹಾಗಾದಾಗ, ಅವುಗಳನ್ನು ಹೆಚ್ಚು ಬಳಸುವ ಬದಲು ವೈದ್ಯರನ್ನು ಸಂಪರ್ಕಿಸಿ. ನೋವಿಗೆ ಪ್ರಮುಖ ಕಾರಣವನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆ ಪಡೆಯಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.