ಉತ್ತಮ ಆರೋಗ್ಯಕ್ಕೆ ವಿಶ್ರಾಂತಿ ಬಹಳ ಮುಖ್ಯ, ಅದಕ್ಕಾಗಿಯೇ ಪ್ರತಿಯೊಬ್ಬ ಆರೋಗ್ಯ ತಜ್ಞರು ಆರೋಗ್ಯವಂತ ವಯಸ್ಕರಿಗೆ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಲು ಸಲಹೆ ನೀಡುತ್ತಾರೆ. ಇದು ದಿನದ ಆಯಾಸವನ್ನು ಹೋಗಲಾಡಿಸುತ್ತದೆ ಮತ್ತು ನೀವು ತಾಜಾತನವನ್ನು ಅನುಭವಿಸುತ್ತೀರಿ. ಕಡಿಮೆ ನಿದ್ರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ಅತಿಯಾದ ನಿದ್ರೆ ನಿಮ್ಮ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ನಿಮಗೆ ತಿಳಿದಿದೆಯೇ. ಕುಂಭಕರ್ಣ ನಿದ್ದೆ ಮಾಡುವುದರಿಂದ ಆಗುವ ಅನಾನುಕೂಲಗಳನ್ನು ನೋಡೋಣ ಬನ್ನಿ..
1. ಹೃದಯ ರೋಗ
ಉತ್ತಮ ನಿದ್ರೆಯು ದೇಹಕ್ಕೆ ಒಳ್ಳೆಯದು. ಆರೋಗ್ಯ ದೃಷ್ಟಿಯಿಂದಲೂ ಉತ್ತಮ. ದೇಹವನ್ನು ಆರೋಗ್ಯವಾಗಿಡಲು ಅನೇಕ ವೈದ್ಯಕೀಯ ತಜ್ಞರು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಮಲಗಲು ಹೇಳ್ತಾರೆ. ನಿದ್ರಾಹೀನತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಂತ ಅತಿಯಾದ ನಿದ್ದೆಯೂ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಚ್ಚರ..!
ನಿಮ್ಮ ಮೆದುಳು ಹೆಚ್ಚು ನಿದ್ರೆ ಮಾಡುವ ಮೂಲಕ ಯಾವುದೇ ರೀತಿಯ ಕೆಲಸವನ್ನು ಮಾಡುವುದಿಲ್ಲ. ಹೀಗಾಗಿ ಉದ್ವೇಗವನ್ನು ಹೆಚ್ಚಿಸುವ ಅಪಾಯವಿದೆ. ವಿಶೇಷವಾಗಿ ಹಗಲಿನಲ್ಲಿ ಹೆಚ್ಚು ನಿದ್ದೆ ಮಾಡುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.