Holi 2024: ಬೀಟ್ ರೂಟ್ ಹಾಗೂ ಕಿತ್ತಳೆ ಹಣ್ಣಿನಿಂದ ಮನೆಯಲ್ಲೇ ಈ ರೀತಿ ತಯಾರಿಸಿ ನೈಸರ್ಗಿಕ ಗುಲಾಲ ಬಣ್ಣ!

Homemade Colours For Holi 2024: ಹೋಳಿ ಹಬ್ಬದ ಆಚರಣೆಗೆ ದಿನಗಣನೆ ಆರಂಭಗೊಂಡಿದೆ. ಈ ಬಾರಿಯ ಹೋಳಿ ಆಚರಣೆಯಲ್ಲಿ ಬೀಟ್ರೂಟ್, ಮಾರಿಗೋಲ್ಡ್ ಮತ್ತು ಕಿತ್ತಳೆ ಸಿಪ್ಪೆಗಳಿಂದ ನೈಸರ್ಗಿಕ ಬಣ್ಣಗಳನ್ನು ತಯಾರಿಸಿ ನೀವು ಬಳಕೆ ಮಾಡಬಹುದು. ಸುಲಭ ರೀತಿಯಲ್ಲಿ ಮನೆಯಲ್ಲಿಯೇ ಬಣ್ಣಗಳನ್ನು (How to make natural colours from flowers) ತಯಾರಿಸುವ ಮೂಲಕ ಆರೋಗ್ಯಕರ ಹೋಳಿ ಹಬ್ಬವನ್ನು ಸಡಗರ, ಸಂಭ್ರಮ ಮತ್ತು ಸಂತೋಷದಿಂದ ಆಚರಿಸಿ. ಬನ್ನಿ ಮನೆಯಲ್ಲಿಯೇ ನೈಸರ್ಗಿಕ ಬಣ್ಣ ಹೇಗೆ ತಯಾರಿಸಬೇಕು ತಿಳಿದುಕೊಳ್ಳೋಣ. (Lifestyle News In Kannada)  

Written by - Nitin Tabib | Last Updated : Mar 18, 2024, 01:16 PM IST
  • ಹೋಳಿಗೆ ಹಳದಿ ಬಣ್ಣ ತಯಾರಿಸಲು ನೀವು ಬಯಸುತ್ತಿದ್ದರೆ, ನೀವು ಚೆಂಡು ಹೂವುಗಳನ್ನು ಒಣಗಿಸಿ ಮತ್ತು ಪುಡಿಮಾಡಿ ಈ ಪುಡಿಯನ್ನು ಬಟ್ಟೆಯಿಂದ ಫಿಲ್ಟರ್ ಮಾಡಿ. ಫಿಲ್ಟರ್ ಮಾಡಿ ಉಳಿದ ಮೇದುವಾದ ಪುಡಿ ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಮತ್ತು ಚರ್ಮಕ್ಕೆ ಸುರಕ್ಷಿತವಾಗಿದೆ, ಇದು ಹೋಳಿ ಹಬ್ಬದ ಮೋಜನ್ನು ಮತ್ತಷ್ಟು ಹೆಚ್ಚಿಸುತ್ತದೆ.
Holi 2024: ಬೀಟ್ ರೂಟ್ ಹಾಗೂ ಕಿತ್ತಳೆ ಹಣ್ಣಿನಿಂದ ಮನೆಯಲ್ಲೇ ಈ ರೀತಿ ತಯಾರಿಸಿ ನೈಸರ್ಗಿಕ ಗುಲಾಲ ಬಣ್ಣ!  title=

Holi 2024 Special: ಬಣ್ಣಗಳ ಹಬ್ಬ ಹೋಳಿ ಹುಣ್ಣಿಮೆ ತನ್ನೊಂದಿಗೆ ಸಾಕಷ್ಟು ಸಂತೋಷ ಹಾಗೂ ಉತ್ಸಾಹವನ್ನೂ ತರುತ್ತದೆ. ಆದರೆ ಈ ಹಬ್ಬದಲ್ಲಿ ಬಳಕೆಯಾಗುವ ಹಾಗೂ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳು ನಮ್ಮ ಚರ್ಮ ಮತ್ತು ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಈ ಬಾರಿಯ ಹೋಳಿ ಹಬ್ಬದಲ್ಲಿ ನಾವು ಮನೆಯಲ್ಲಿ ನೈಸರ್ಗಿಕ ಬಣ್ಣಗಳನ್ನು ಏಕೆ ತಯಾರಿಸಲು ಯತ್ನಿಸಬಾರದು?  ಹೌದು, ಬೀಟ್ರೂಟ್, ಚೆಂಡು ಹೂವು ಹಾಗೂ ಕಿತ್ತಳೆ ಸಿಪ್ಪೆ ಬಾಳನ್ನು ಬಳಸಿ ಮನೆಯಲ್ಲಿಯೇ  ನೈಸರ್ಗಿಕ ಬಣ್ಣವನ್ನು ಸುಲಭವಾಗಿ ತಯಾರಿಸಬಹುದು. ಈ ಬಣ್ಣಗಳನ್ನು ತಯಾರಿಸುವುದು ತುಂಬಾ ಸುಲಭವಾಗಿರುವುದರ ಜೊತೆಗೆ, ಅವು ಚರ್ಮದ ಆರೋಗ್ಯಕ್ಕೂ ಕೂಡ ಸಂಪೂರ್ಣವಾಗಿ ಸುರಕ್ಷಿತವಾಗಿದೆ (How to make natural colours from flowers). ಬನ್ನಿ, ಈ ಹೋಳಿ ಹಬ್ಬವನ್ನು ಮತ್ತಷ್ಟು ಸ್ಪೆಷಲ್ ಆಗಿಸುವುದು ಹೇಗೆ ತಿಳಿದುಕೊಳ್ಳೋಣ, (Lifestyle News In Kannada)

ಬೀಟ್ರೂಟ್ನಿಂದ ಗುಲಾಲ್ ತಯಾರಿಸುವುದು ಹೇಗೆ? (How To Make Gulal From Beetroot)
ಹೋಳಿ ಹಬ್ಬ
ಬಂತೆಂದರೆ ನಾವೆಲ್ಲ ಬಣ್ಣಗಳ ಸಿದ್ಧತೆ ಆರಂಭಿಸುತ್ತೇವೆ. ಈ ಬಾರಿ ನಮ್ಮ ಕೈಯಿಂದಲೇ ಗುಲಾಲ್ ಬಣ್ಣವನ್ನು  ಮನೆಯಲ್ಲಿಯೇ ತಯಾರಿಸೋಣ, ಬೀಟ್ ರೂಟ್ ನಿಂದ ಈ ನೈಸರ್ಗಿಕ ಬಣ್ಣವನ್ನು ತಯಾರಿಸುವ ವಿಧಾನ ಕೂಡ ಸುಲಭವಾಗಿದೆ. ಮೊದಲನೆಯದಾಗಿ, ಬೀಟ್ರೂಟ್ ಅನ್ನು ಚೆನ್ನಾಗಿ ತೊಳೆಯಿರಿ, ನಂತರ ಅದನ್ನು ಕತ್ತರಿಸಿ, ಸ್ಮ್ಯಾಶ್ ಮಾಡಿ. ಇದರ ನಂತರ, ಅದರಿಂದ ಬಿಡುಗಡೆಯಾದ ರಸವನ್ನು ಫಿಲ್ಟರ್ ಮಾಡಿ ಮತ್ತು ಸ್ವಚ್ಛವಾದ ಮೇಲ್ಮೈಯಲ್ಲಿ ತೆಳುವಾದ ಬಟ್ಟೆಯಲ್ಲಿ  ಹರಡಿ ಮತ್ತು ಅದನ್ನು ಸಂಪೂರ್ಣವಾಗಿ ಒಣಗಲು ಬಿಡಿ. ಇದು ಒಣಗಿದ ನಂತರ, ಈ ಒಣಗಿದ ಬೀಟ್ರೂಟ್ ರಸದಿಂದ ಪುಡಿ ತೆಗೆಯಿರಿ, ನೈಸರ್ಗಿಕ ಗುಲಾಬಿ ಗುಲಾಲ್ ಸಿದ್ಧವಾಗಿದೆ.

ಚೆಂಡು ಹೂವಿನಿಂದ ಹಳದಿ ಬಣ್ಣ ತಯಾರಿಸುವುದು ಹೇಗೆ? (How To Make Yellow Colour)
ಹೋಳಿಗೆ ಹಳದಿ ಬಣ್ಣ ತಯಾರಿಸಲು ನೀವು ಬಯಸುತ್ತಿದ್ದರೆ, ನೀವು ಚೆಂಡು ಹೂವುಗಳನ್ನು ಒಣಗಿಸಿ ಮತ್ತು ಪುಡಿಮಾಡಿ ಈ ಪುಡಿಯನ್ನು ಬಟ್ಟೆಯಿಂದ ಫಿಲ್ಟರ್ ಮಾಡಿ. ಫಿಲ್ಟರ್ ಮಾಡಿ ಉಳಿದ ಮೇದುವಾದ ಪುಡಿ ಸಂಪೂರ್ಣವಾಗಿ ನೈಸರ್ಗಿಕವಾಗಿದೆ ಮತ್ತು ಚರ್ಮಕ್ಕೆ ಸುರಕ್ಷಿತವಾಗಿದೆ, ಇದು ಹೋಳಿ ಹಬ್ಬದ ಮೋಜನ್ನು ಮತ್ತಷ್ಟು ಹೆಚ್ಚಿಸುತ್ತದೆ. 

ಇದನ್ನೂ ಓದಿ-Diabetes ಸೇರಿದಂತೆ ಈ ಐದು ಸಮಸ್ಯೆಗಳ ಅಪಾಯ ಹೆಚ್ಚಿಸುತ್ತೆ ನಿದ್ರಾಹೀನತೆ!

ಕಿತ್ತಳೆ ಸಿಪ್ಪೆಯಿಂದ ಕಿತ್ತಳೆ ಬಣ್ಣ ತಯಾರಿಸುವುದು ಹೇಗೆ? (How To Make Orange Colour)
ಒಣಗಿದ ಕಿತ್ತಳೆ ಸಿಪ್ಪೆಗಳನ್ನು ರುಬ್ಬುವ ಮೂಲಕ ನೀವು ಕಿತ್ತಳೆ ಬಣ್ಣವನ್ನು ತಯಾರಿಸಬಹುದು. ಈ ಪುಡಿಯು ಸುಂದರವಾಗಿ ಕಾಣುವುದಲ್ಲದೆ, ಅದರ ಆಕರ್ಷಕ ಸುಗಂಧವು ಹೋಳಿಯ ಮೋಜನ್ನು ದ್ವಿಗುಣಗೊಳಿಸುತ್ತದೆ. ಇದು ಸಂಪೂರ್ಣವಾಗಿ ನೈಸರ್ಗಿಕ ಮತ್ತು ಚರ್ಮಕ್ಕೆ ಸುರಕ್ಷಿತವಾಗಿದೆ. ಈ ನೈಸರ್ಗಿಕ ಬಣ್ಣಗಳನ್ನು ಬಳಸುವುದರ ಮೂಲಕ, ನೀವು ಸುರಕ್ಷಿತ ಹೋಳಿ ಹಬ್ಬವನ್ನು ಆಚರಿಸಬಹುದು. ಅದರ ಜೊತೆಗೆ ನೀವು ಪರಿಸರವನ್ನು ರಕ್ಷಣೆಯಲ್ಲಿಯೂ ಕೂಡ ಕೊಡುಗೆ ನೀಡಬಹುದು. ಈ ಬಾರಿ ಹೋಳಿಯಲ್ಲಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಮನೆಯಲ್ಲಿ ತಯಾರಿಸಿದ ಬಣ್ಣಗಳಿಂದ ಆಚರಿಸಿ ಮತ್ತು ಆನಂದಿಸಿ. 

ಇದನ್ನೂ ಓದಿ-Green Tea Side Effects: ಅತಿಯಾದ ಗ್ರೀನ್ ಟೀ ಸೇವನೆಯಿಂದಲೂ ದೇಹಕ್ಕೆ ಈ ಹಾನಿ ತಲುಪುತ್ತದೆ!

(Disclaimer- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News