Mens Health: ಇತ್ತೀಚಿನ ದಿನಗಳಲ್ಲಿ ಜನರು ಊಟದ ಅಥವಾ ಆಹಾರದ ರುಚಿಯನ್ನು ಹೆಚ್ಚಿಸಲು ಊಟದ ಜೊತೆಗೆ ಚಟ್ನಿ ಮತ್ತು ಉಪ್ಪಿನಕಾಯಿಗಳನ್ನು ಸೇವಿಸುತ್ತಾರೆ, ಆದರೆ ಉಪ್ಪಿನಕಾಯಿಯನ್ನು ಅತಿಯಾಗಿ ಸೇವಿಸುವುದು ಪುರುಷರಿಗೆ ಹಾನಿಕಾರಕ ಸಾಬೀತಾಗಬಹುದು ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೇಗೆ ತಿಳಿದುಕೊಳ್ಳೋಣ ಬನ್ನಿ
ಉಪ್ಪಿನಕಾಯಿಯನ್ನು ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದಲ್ಲಿ ಮಾತ್ರ ಸೇವಿಸುತ್ತಾರೆ, ನೋಡಿದರೆ ಉಪ್ಪಿನಕಾಯಿಯೇ ಒಂದು ಆಹಾರ ಪದಾರ್ಥವಾಗಿದೆ, ಇದು ಎಲ್ಲಾ ರೀತಿಯ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ, ಆದರೆ ಉಪ್ಪಿನ ಕಾಯಿಯೇ ತಮ್ಮ ಪಾಲಿಗೆ ಸರ್ವಸ್ವ ಎನ್ನುವಂತೆ ಅನೇಕ ಜನರು ಅದನ್ನು ಅತಿಯಾಗಿ ಸೇವಿಸಲು ಪ್ರಾರಂಭಿಸುತ್ತಾರೆ. ನಿಮಗೂ ಕೂಡ ಅತಿಯಾಗಿ ಉಪ್ಪಿನ ಕಾಯಿ ಸೇವನೆಯ ಹುಚ್ಚು ಇದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ.
ಗ್ಯಾಸ್ಟ್ರಿಕ್ ಕ್ಯಾನ್ಸರ್
ವಿವಿಧ ಅಧ್ಯಯನಗಳ ಪ್ರಕಾರ, ಹೆಚ್ಚು ಉಪ್ಪಿನಕಾಯಿ ತಿನ್ನುವ ಜನರಲಿ ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಪಾಯ ಹೆಚ್ಚಾಗಿರುತ್ತದೆ ಮತ್ತು ಇದೇ ವೇಳೆ, ಹೆಚ್ಚಿನ ಪ್ರಮಾಣದ ಉಪ್ಪಿನಿಂದಾಗಿ, ಇದು ರಕ್ತದೊತ್ತಡ ರೋಗಿಗಳಿಗೆ ಮತ್ತು ನಂತರ ಅಧಿಕ ರಕ್ತದೊತ್ತಡ ರೋಗಿಗಳಿಗೆ ಇದು ತುಂಬಾ ಅಪಾಯಕಾರಿ ಎಂದು ಸಾಬೀತಾಗಬಹುದು.
ನೀವು ಮಾರುಕಟ್ಟೆಯಿಂದ ಖರೀಸಿಸುವ ಉಪ್ಪಿನಕಾಯಿಗಳು ಹೆಚ್ಚು ಸಂರಕ್ಷಕಗಳನ್ನು ಹೊಂದಿರುತ್ತವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಮಾರುಕಟ್ಟೆಯಲ್ಲಿ ಸಿಗುವ ಉಪ್ಪಿನಕಾಯಿಯಲ್ಲಿ ಹೆಚ್ಚು ಅಸಟಾಮಿಪ್ರಿಡ್ ಇರುತ್ತದೆ ಮತ್ತು ಅದು ನಮ್ಮ ಆರೋಗ್ಯಕ್ಕೆ ಹಾನಿಕಾರಕ ಸಾಬೀತಾಗುತ್ತದೆ. ಅಸಟಾಮಿಪ್ರಿಡ್ ಒಂದು ರೀತಿಯ ಕಾರ್ಬನ್ ಎಂಬುದು ನಿಮಗೆ ಗೊತ್ತಿರಲಿ. ಇದು ನಿಮ್ಮ ವೈವಾಹಿಕ ಜೀವನವನ್ನು ಹಾಳು ಮಾಡಬಹುದು. ಆದ್ದರಿಂದ ಉಪ್ಪಿನಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ.
ಇದನ್ನೂ ಓದಿ-Be Careful: ಈ 2 ವಿಷಯಗಳನ್ನು ನಿರ್ಲಕ್ಷಿಸುವುದು ಹೃದಯಾಘಾತಕ್ಕೆ ಕಾರಣವಾಗಬಹುದು..!
ಕೊಲೆಸ್ಟ್ರಾಲ್ ಅಪಾಯ ಹೆಚ್ಚಾಗುತ್ತದೆ
ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಲು ಪ್ರಯತ್ನಿಸಿ, ಏಕೆಂದರೆ ಮಾರುಕಟ್ಟೆಯಲ್ಲಿ ದೊರೆಯುವ ಉಪ್ಪಿನಕಾಯಿಗಳನ್ನು ತಯಾರಿಸುವಾಗ, ಅವುಗಳನ್ನು ರುಚಿಯಾಗಿಸಲು ಹೆಚ್ಚು ಎಣ್ಣೆ ಮತ್ತು ಹೆಚ್ಚಿನ ಮಸಾಲೆಗಳನ್ನು ಬಳಸಲಾಗುತ್ತದೆ, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದಲ್ಲ. ಈ ಉಪ್ಪಿನಕಾಯಿಯಲ್ಲಿ ಬಳಸಲಾಗುವ ಹೆಚ್ಚಿನ ಪ್ರಮಾಣದ ಎಣ್ಣೆ ಮತ್ತು ಅವುಗಳಲ್ಲಿ ಬಳಸಲಾಗುವ ಮಸಾಲೆಗಳಿಂದ ಕೊಲೆಸ್ಟ್ರಾಲ್ ಮತ್ತು ಇತರ ದೈಹಿಕ ಸಮಸ್ಯೆಗಳು ಉದ್ಭವಿಸುತ್ತವೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.