ದೇಹದಲ್ಲಿ ಕಂಡು ಬರುವ Vitamin C ಕೊರತೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಲೇಬಾರದು

Vitamin C Deficiency: ನಾವು ಆರೋಗ್ಯವಂತರಾಗಿರಲು ಇತರ ಎಲ್ಲಾ ಪೋಷಕಾಂಶಗಳಂತೆ ವಿಟಮಿನ್ ಸಿ ಕೂಡ ನಮ್ಮ ದೇಹಕ್ಕೆ ತುಂಬಾ ಅಗತ್ಯ.  ದೇಹದಲ್ಲಿ ವಿಟಮಿನ್ ಸಿ ಕೊರತೆ ಉಂಟಾದಾಗ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.   

Written by - Yashaswini V | Last Updated : Nov 6, 2023, 09:19 AM IST
  • ವಿಟಮಿನ್ ಸಿ ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವುದರ ಜೊತೆಗೆ ನಮ್ಮ ದೇಹವನ್ನು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ.
  • ವಿಟಮಿನ್ ಸಿ ಚರ್ಮ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ವಿಶೇಷವಾಗಿ ಮುಖ್ಯವಾಗಿದೆ.
  • ವಿಟಮಿನ್ ಸಿ ಕೊರತೆಯು ದೇಹದಲ್ಲಿ ಹಲವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ದೇಹದಲ್ಲಿ ಕಂಡು ಬರುವ Vitamin C ಕೊರತೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಲೇಬಾರದು  title=

Vitamin C Deficiency: ಉತ್ತಮ ಆರೋಗ್ಯಕ್ಕಾಗಿ ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶಗಳ ಅಗತ್ಯವಿದೆ. ದೇಹದಲ್ಲಿ ಯಾವುದೇ ಪೋಷಕಾಂಶದ ಕೊರತೆ ಆದರೂ ಇದು ಹಲವು ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಲ್ಲಿ ವಿಟಮಿನ್ ಸಿ ತುಂಬಾ ಅಗತ್ಯ ಪೋಷಕಾಂಶವಾಗಿದೆ. 

ವಿಟಮಿನ್ ಸಿ ಪ್ರಯೋಜನಗಳು: 
ವಿಟಮಿನ್ ಸಿ ನಮ್ಮ ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುವ ಅಗತ್ಯ ಪೋಷಕಾಂಶವಾಗಿದೆ. ಇದು ದೇಹದಲ್ಲಿ  ರೋಗನಿರೋಧಕ ಶಕ್ತಿ ವೃದ್ಧಿಸುವುದರ ಜೊತೆಗೆ ನಮ್ಮ ದೇಹವನ್ನು ಹಾನಿಕಾರಕ ಸ್ವತಂತ್ರ ರಾಡಿಕಲ್ಗಳಿಂದ ರಕ್ಷಿಸುತ್ತದೆ. ಇದಲ್ಲದೆ, ಅಂಗಾಂಶಗಳು ಮತ್ತು ಅಂಗಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಪ್ರೋಟೀನ್ ಆಗಿರುವ ಕಾಲಜನ್ ಉತ್ಪಾದನೆಗೆ ಇದು ತುಂಬಾ ಅವಶ್ಯಕ. ಹಾಗಾಗಿ ದೇಹಕ್ಕೆ ಅಗತ್ಯವಾಗಿರುವ ಈ ಪೋಷಕಾಂಶದ ಕೊರತೆಯು ವಿಟಮಿನ್ ಸಿ ನಮ್ಮ ದೇಹವು ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ- ಉಗುರುಬೆಚ್ಚಗಿನ ನೀರಿನಲ್ಲಿ ಈ 4 ವಸ್ತುಗಳನ್ನು ಬೆರೆಸಿ ಕುಡಿದು ನೋಡಿ...!

ವೈದ್ಯರ ಪ್ರಕಾರ, ನಮ್ಮ ದೇಹದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೆಲವು ಆರೋಗ್ಯ ಸಮಸ್ಯೆಗಳು ವಿಟಮಿನ್ ಸಿ ಕೊರತೆಯ ಲಕ್ಷಣಗಳು ಸಹ ಆಗಿರಬಹುದು. ಇವುಗಳನ್ನು ನಿರ್ಲಕ್ಷಿಸುವುದರಿಂದ ಭವಿಷ್ಯದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ. 

ದೇಹದಲ್ಲಿ ಕಂಡು ಬರುವ ವಿಟಮಿನ್ ಸಿ ಕೊರತೆಯ ಈ ಲಕ್ಷಣಗಳನ್ನು ನಿರ್ಲಕ್ಷಿಸಲೇಬಾರದು:- 
ಆಯಾಸ/ದೌರ್ಬಲ್ಯ: 

ನಿಮಗೆ ಆಗಾಗ್ಗೆ ತುಂಬಾ ಆಯಾಸ, ದೌರ್ಬಲ್ಯ ಕಾಣಿಸಿಕೊಳ್ಳುತ್ತಿದ್ದರೆ ಇದು ಕೂಡ ವಿಟಮಿನ್ ಸಿ ಕೊರತೆಯ ಲಕ್ಷಣವಾಗಿರುತ್ತದೆ. ವಾಸ್ತವವಾಗಿ, ವಿಟಮಿನ್ ಸಿ ಪೋಷಕಾಂಶವು ನಮ್ಮ ದೇಹವು ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. 

ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ: 
ನೀವು ಪದೇ ಪದೇ ಶೀತ, ಕೆಮ್ಮು ಸೇರಿದಂತೆ ಇತರ ಸೋಂಕಿನ ಅಪಾಯಕ್ಕೆ ಸಿಲುಕುತ್ತಿದ್ದರೆ ಅದು ಕೂಡ ವಿಟಮಿನ್ ಸಿ ಕೊರತೆಯ ಲಕ್ಷಣ ಎಂಬುದನ್ನೂ ನೆನಪಿನಲ್ಲಿಡಿ. ದೇಹದಲ್ಲಿ ವಿಟಮಿನ್ ಸಿ ಕೊರತೆ ಇದ್ದಾಗ ದೇಹವು ಸೋಂಕಿನ ವಿರುದ್ಧ ಹೋರಾಡಲು ಅಗತ್ಯವಾಗಿರುವ  ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿರುತ್ತದೆ. 

ಸ್ಕಿನ್ ಡ್ರೈ ಆಗುವುದು:
ಮೊದಲೇ ತಿಳಿಸಿದಂತೆ ದೇಹಕ್ಕೆ ಅಗತ್ಯ ಪ್ರೋಟೀನ್ ಆಗಿರುವ ಕಾಲಜನ್ ಉತ್ಪಾದನೆಗೆ ವಿಟಮಿನ್ ಸಿ ಬೇಕೇ ಬೇಕು. ಇದು ಆರೋಗ್ಯಕರ ಚರ್ಮವನ್ನು ಬೆಂಬಲಿಸುತ್ತದೆ. ಆದರೆ, ವಿಟಮಿನ್ ಸಿ ಕೊರತೆಯಿಂದಾಗಿ ದೇಹದಲ್ಲಿ ಕಾಲಿಜಿನ್ ಉತ್ಪಾದನೆ ಕಡಿಮೆ ಆಗುತ್ತದೆ. ಇದು ಡ್ರೈ ಸ್ಕಿನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ. 

ಇದನ್ನೂ ಓದಿ- ಇನ್ಮುಂದೆ ತಟ್ಟೆ ಬದಲು ಬಾಳೆ ಎಲೆಯಲ್ಲಿ ಊಟ ಮಾಡಿ- ಈ ಮಾರಕ ಕಾಯಿಲೆಗೆ ಸಿಗುತ್ತೆ ಪರ್ಮನೆಂಟ್ ಪರಿಹಾರ!

ಕೀಲು ನೋವು: 
ನಮ್ಮ ದೇಹವು ಉರಿಯೂತದ ವಿರುದ್ಧ ಹೋರಾಡಲು  ವಿಟಮಿನ್ ಸಿ  ಶಕ್ತಿಯುತವಾದ ಉರಿಯೂತವನ್ನು ಹೆಚ್ಚಿಸುತ್ತದೆ. ಆದರೆ, ವಿಟಮಿನ್ ಸಿ ಕೊರತೆ ಉಂಟಾದಾಗ ಕೀಲು ನೋವು, ಸಂಧಿವಾತದಂತಹ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. 

ನಿಮ್ಮಲ್ಲೂ ಈ ಮೇಲೆ ಉಲ್ಲೇಖಿಸಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ತಡಮಾಡದೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಿರಿ. ಇದರ ಜೊತೆಗೆ ನಿಮ್ಮ ದೈನಂದಿನ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಹಣ್ಣು-ತರಕಾರಿಗಳನ್ನು ಹೆಚ್ಚಾಗಿ ಬಳಸಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News