ಸಕ್ಕರೆಗಿದೆ ವಾಸಿಯಾಗದ ಗಾಯಗಳನ್ನೂ ಗುಣಪಡಿಸುವ ಶಕ್ತಿ !

   

Last Updated : Nov 19, 2017, 06:32 PM IST
ಸಕ್ಕರೆಗಿದೆ ವಾಸಿಯಾಗದ ಗಾಯಗಳನ್ನೂ ಗುಣಪಡಿಸುವ ಶಕ್ತಿ ! title=

    

ಹೆಚ್ಚು ಸಕ್ಕರೆ ಸೇವಿಸುವುದರಿಂದ ಮಧುಮೇಹ ಮತ್ತು ಸ್ಥೂಲಕಾಯದಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಹೇಳುವುದು ಸಾಮಾನ್ಯ. ಆದರೆ ಸಕ್ಕರೆಯು ಬಹಳಷ್ಟು ಗಾಯಗಳು ಮತ್ತು ಹುಣ್ಣುಗಳನ್ನು ವಾಸಿಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರೆ ಅಚ್ಚರಿಯಾಗುತ್ತದೆಯಲ್ಲವೇ? ಆದರೂ ಇದು ಸತ್ಯ.

ಲಂಡನ್ ಮತ್ತು ಪಾಕಿಸ್ತಾನದ ಸಂಶೋಧಕರು ಇತ್ತೀಚೆಗೆ ನಡೆಸಿದ ಜಂಟಿ ಅಧ್ಯಯನದ ಪ್ರಕಾರ ಸಕ್ಕರೆಯು ವಯಸ್ಸಾದವರಲ್ಲಿ ಮಧುಮೇಹದಿಂದ ಉಂಟಾದ ವಾಸಿಯಾಗದ ಹುಣ್ಣುಗಳು ಮತ್ತು ಗಾಯಗಳನ್ನು ಗುಣಪಡಿಸಲು ಸಹಕಾರಿಯಾಗಿದೆ ಎಂಬುದು ತಿಳಿದುಬಂದಿದೆ.ಅದರಂತೆ ಆಂಜಿಯೋಜೆನೆಸಿಸ್ ಎಂದು ಕರೆಯಲಾಗುವ ಹೊಸ ರಕ್ತನಾಳ ರಚನೆಯಲ್ಲಿ ಈ ಸಕ್ಕರೆಯು ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ. 

ರಕ್ತನಾಳಗಳು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸಲು ದೇಹದಾದ್ಯಂತ ರಕ್ತವನ್ನು ಪೂರೈಸುವುದರಿಂದ, ಗಾಯಗಳ ಗುಣಪಡಿಸುವಿಕೆಯಲ್ಲಿ ಹೊಸ ರಕ್ತನಾಳಗಳ ರಚನೆಯನ್ನು ಅಗತ್ಯತೆಯನ್ನು ಮನಗಂಡ ಸಂಶೋಧಕರು ಇದನ್ನು ಉತ್ತೇಜಿಸಲು ಸಕ್ಕರೆಯನ್ನು ಒಂದು ಹೈಡ್ರೋಜೆಲ್ ಬ್ಯಾಂಡೇಜ್ಗೆ ಸೇರಿಸಿ ಪ್ರಯೋಗ ಮಾಡಿದ್ದಾರೆ. 

ಹೊಸದಾಗಿ ಬಳಸಲಾದ ಸಕ್ಕರೆಯು ವಯಸ್ಸು, ದುರ್ಬಲ ರಕ್ತ ಪೂರೈಕೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಗುಣವಾಗದ ಚರ್ಮದ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಆರೋಗ್ಯ ರಕ್ಷಣೆ ಒದಗಿಸುವವರಿಗೆ ಆರ್ಥಿಕವಾಗಿ ಲಾಭದಾಯಕವೆಂದು ಸಂಶೋಧಕರು ತಿಳಿಸಿದ್ದಾರೆ.

"ಪ್ರಪಂಚದಾದ್ಯಂತ, ವಯಸ್ಸು, ದುರ್ಬಲ ರಕ್ತ ಪೂರೈಕೆ ಮತ್ತು ಮಧುಮೇಹಕ್ಕೆ ಸಂಬಂಧಿಸಿದ ಗುಣವಾಗದ ಗಾಯಗಳನ್ನು ಜನರು ಅನುಭವಿಸುತ್ತಿದ್ದು, ಇವುಗಳ ಚಿಕಿತ್ಸಾ ವೆಚ್ಚವು ಅತ್ಯಂತ ದುಬಾರಿಯಾಗಿದೆ. ಅದಕ್ಕಾಗಿ ಕಾರ್ಮಕ್ಕೆ ಸಂಬಂಧಿಸಿದ ಗಾಯಗಳನ್ನು ಗುಣಪಡಿಸಲು ಈ ವಿನೂತನ ಸರಳ ಸಕ್ಕರೆ ಬಳಸುವ ವಿಧಾನವು ಸಹಕಾರಿಯಾಗಲಿದೆ'' ಎಂದು ಷೆಫೀಲ್ಡ್ ವಿಶ್ವವಿದ್ಯಾಲಯದ ಪ್ರೊಫೆಸರ್ ಶೀಲಾ ಮೆಕ್ನೀಲ್ ಹೇಳಿದ್ದಾರೆ.

ವಯಸ್ಸಾದವರಲ್ಲಿ ಕಂಡುಬರುವ ಮಧುಮೇಹ ಹುಣ್ಣುಗಳಲ್ಲಿ ವಾಸಿಯಾಗದ ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದ ಸರಳವಾದ, ದೃಢವಾದ ಮತ್ತು ಕಡಿಮೆ ವೆಚ್ಚದ ಗಾಯದ ಡ್ರೆಸ್ಸಿಂಗ್ಗಳನ್ನು ಅಭಿವೃದ್ಧಿಪಡಿಸಲು ಈ ಸಂಶೋಧನೆಯು ಒಂದು ಪ್ರಮುಖ ಹಂತವಾಗಿದೆ.

ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಇಲಾಖೆ ಮತ್ತು ಷೆಫೀಲ್ಡ್ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಕ್ಲಿನಿಕಲ್ ಡೆಂಟಿಸ್ಟ್ರಿ ಮತ್ತು ಲಾಹೋರ್ನ COMSATS ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿಯಲ್ಲಿನ ಬಯೋಮೆಡಿಕಲ್ ಮೆಟೀರಿಯಲ್ಸ್ ರಿಸರ್ಚ್ನಲ್ಲಿನ ಅಂತರಶಿಕ್ಷಣ ಸಂಶೋಧನಾ ಕೇಂದ್ರದಿಂದ ನಡೆಸಿದ ಸಂಶೋಧನೆಯಲ್ಲಿ ಈ ಅಂಶಗಳು ತಿಳಿದುಬಂದಿದ್ದು, 'ಮೆಟೀರಿಯಲ್ಸ್ ಟುಡೇ ಕಮ್ಯುನಿಕೇಷನ್' ಜರ್ನಲ್ ನಲ್ಲಿ ಪ್ರಕಟವಾಗಿದೆ. 

Trending News