Health Tips: ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತೆ ಗೊತ್ತಾ?

ಆರೋಗ್ಯದ ಮೇಲೆ ಚಹಾದ ಅಡ್ಡಪರಿಣಾಮಗಳು: ಭಾರತದಲ್ಲಿನ ಪ್ರತಿಯೊಂದು ಕಾಯಿಲೆಗೆ ಚಹಾವೇ ಮದ್ದು. ಆದರೆ ಕೆಲವರು ತಪ್ಪಾದ ಸಮಯದಲ್ಲಿ ಮತ್ತು ತಪ್ಪಾದ ರೀತಿಯಲ್ಲಿ ಚಹಾವನ್ನು ಕುಡಿಯುತ್ತಾರೆ. ಇದರಿಂದ ಆರೋಗ್ಯ ಹದಗೆಡುವ ಸಾಧ್ಯತೆ ಇರುತ್ತದೆ. ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ಬಿಪಿ ರೋಗಿಗಳಿಗೆ ಏನಾದರೂ ಗಂಭೀರ ಸಮಸ್ಯೆ ಉಂಟಾಗಬಹುದೇ ಎಂಬುದರ ಬಗ್ಗೆ ತಿಳಿಯಿರಿ.

Written by - Puttaraj K Alur | Last Updated : Nov 18, 2023, 11:20 AM IST
  • ಅಧಿಕ ಬಿಪಿ ಇರುವವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬೇಕೋ ಬೇಡವೋ?
  • ನೀವು ಅಧಿಕ ಬಿಪಿ ರೋಗಿಗಳಾಗಿದ್ದರೆ ಯಾವಾಗಲೂ ಹಾಲಿನೊಂದಿಗೆ ಟೀ ಕುಡಿಯಿರಿ
  • ಅಧಿಕ ಬಿಪಿ ರೋಗಿಗಳಿಗೆ ಗ್ರೀನ್ ಟೀ ಉತ್ತಮ ಆಯ್ಕೆಯಾಗಿದೆ
Health Tips: ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿದರೆ ಏನಾಗುತ್ತೆ ಗೊತ್ತಾ?   title=
ಆರೋಗ್ಯದ ಮೇಲೆ ಚಹಾದ ಅಡ್ಡಪರಿಣಾಮ!

ನವದೆಹಲಿ: ಭಾರತದಲ್ಲಿ ಪ್ರತಿಯೊಬ್ಬರೂ ಚಹಾ ಸೇವಿಸಲು ಇಷ್ಟಪಡುತ್ತಾರೆ. ಪ್ರತಿದಿನ ಬೆಳಗ್ಗೆ ಒಂದು ಕಪ್ ಚಹಾ ಸೇವಿಸಿಯೇ ಬಹುತೇಕ ಜನರು ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಚಹಾ ತಲೆನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ, ಇನ್ನೂ ಕೆಲವೊಮ್ಮೆ ಕೆಲವು ಸಮಸ್ಯೆಗಳಿಗೆ ಸಂಬಂಧಿಸಿದ ಒತ್ತಡವನ್ನು ನಿವಾರಿಸುತ್ತದೆ. ಮಳೆಗಾಲದಲ್ಲಿ ಜನರು ತುಂಬಾ ಉತ್ಸಾಹದಿಂದ ಟೀ ಸೇವಿಸುತ್ತಾ ಪಕೋಡಗಳನ್ನು ಸವಿಯುತ್ತಾರೆ. ಅದೇ ರೀತಿ ಶೀತ ಋತುವಿನಲ್ಲಿ ಚಹಾ ಸೇವನೆ ಹೆಚ್ಚಾಗುತ್ತದೆ. ಶೀತವನ್ನು ತಪ್ಪಿಸಲು ಜನರು ಪ್ರತಿದಿನ ಶುಂಠಿ ಚಹಾವನ್ನು ಸೇವಿಸುತ್ತಾರೆ. 

ಕೆಲವರು ಚಹಾವನ್ನು ತಪ್ಪಾದ ರೀತಿಯಲ್ಲಿ ಸೇವಿಸುತ್ತಾರೆ. ಕೆಲವೊಮ್ಮೆ ನಾವು ಹೆಚ್ಚು ಚಹಾ ಕುಡಿಯುತ್ತೇವೆ. ಕೆಲವೊಮ್ಮೆ ನಾವು ಖಾಲಿ ಹೊಟ್ಟೆಯಲ್ಲಿಯೇ ಚಹಾವನ್ನು ಕುಡಿಯುತ್ತೇವೆ. ಕೆಲವರು ಆಹಾರವನ್ನು ಸೇವಿಸಿದ ನಂತರ ರಾತ್ರಿ ವೇಳೆ ಚಹಾವನ್ನು ಕುಡಿಯುತ್ತೇವೆ. ಚಹಾವು ಅನೇಕ ಸಣ್ಣ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಆದರೆ ತಪ್ಪಾದ ರೀತಿಯಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ಅಪಾಯಕಾರಿ. ನೀವೂ ಕೂಡ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಿದ್ದರೆ ತಪ್ಪದೇ ಕೆಲವು ವಿಷಯಗಳನ್ನು ತಿಳಿದುಕೊಳ್ಳಬೇಕು.

ಇದನ್ನೂ ಓದಿ: ಪಿರಿಯಡ್ಸ್ ಸಮಯದಲ್ಲಿ ಸಂಗಾತಿಗೆ ʼಲಿಪ್‌ ಕಿಸ್‌ʼ ಕೊಟ್ರೆ ಏನಾಗುತ್ತೆ ಗೊತ್ತೆ..? ʼಚುಂಬನ ರಹಸ್ಯʼ

ಅಧಿಕ ಬಿಪಿ ಮತ್ತು ಹೃದಯಾಘಾತ ರೋಗಿಗಳು ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯಬಹುದೇ ಎಂಬ ಗೊಂದಲದಲ್ಲಿರುತ್ತಾರೆ? ಅಧಿಕ ಬಿಪಿ ರೋಗಿಗಳಿಗೆ ಇದು ಹಾನಿಕಾರಕವೇ? ಇಂದು ಅನೇಕರು ಅಧಿಕ ಬಿಪಿ ಮತ್ತು ಹೃದ್ರೋಗದಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣ ಬದಲಾದ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿ. ಹೀಗಾಗಿ ಹೆಚ್ಚಿನ ಜನರು ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ. ಅಧಿಕ ಬಿಪಿ ಇರುವವರು ಮತ್ತು ಹೃದ್ರೋಗಿಗಳೂ ಕೂಡ ಚಹಾ ಸೇವಿಸುವುದನ್ನು ರೂಢಿಸಿಕೊಂಡಿರುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಹೈ ಬಿಪಿ ರೋಗಿಗಳಿಗೆ ಎಚ್ಚರಿಕೆ ಗಂಟೆಯೇ ಎಂಬ ಪ್ರಶ್ನೆ ಮೂಡಿದೆ.  

ಅಧಿಕ ಬಿಪಿ ಇರುವವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬೇಕೋ ಬೇಡವೋ?

ನೀವು ಅಧಿಕ ಬಿಪಿ ರೋಗಿಗಳಾಗಿದ್ದರೆ ಯಾವಾಗಲೂ ಹಾಲಿನೊಂದಿಗೆ ಟೀ ಕುಡಿಯಿರಿ. ಏಕೆಂದರೆ ಹಾಲಿನೊಂದಿಗೆ ಟೀ ಕುಡಿದರೆ ಅದು ಬಿಪಿಯನ್ನು ಕಡಿಮೆ ಮಾಡುವ ಬದಲು ಹೆಚ್ಚಿಸಬಹುದು. ಅಲ್ಲದೆ ಹಾಲಿನೊಂದಿಗೆ ಚಹಾವನ್ನು ಕುಡಿಯುವುದು ಗ್ಯಾಸ್ ಮತ್ತು ರಕ್ತನಾಳಗಳ ಕಿರಿದಾಗುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಹಾಲಿನೊಂದಿಗೆ ಚಹಾವನ್ನು ಕುಡಿಯುವುದನ್ನು ಆದಷ್ಟು ತಪ್ಪಿಸಿ.

ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ತೂಕ ಇಳಿಕೆಗೆ ಈ ಲಡ್ಡು ನಿಮ್ಮ ದೈನಂದಿನ ಆಹಾರದಲ್ಲಿರಲಿ!

ಯಾವ ಚಹಾವನ್ನು ಕುಡಿಯಬೇಕು?

ನೀವು ಬೆಳಗ್ಗೆ ಮೊದಲು ಚಹಾ ಕುಡಿಯಲು ಇಷ್ಟಪಡುತ್ತಿದ್ದರೆ, ಅಧಿಕ ಬಿಪಿ ರೋಗಿಗಳಿಗೆ ಗ್ರೀನ್ ಟೀ ಉತ್ತಮ ಆಯ್ಕೆಯಾಗಿದೆ. ಇದರಿಂದ ನಿಮ್ಮ ಅಧಿಕ ಬಿಪಿ ಸಮಸ್ಯೆ ಕಡಿಮೆಯಾಗುತ್ತದೆ. ಹಸಿರು ಚಹಾವು ಉತ್ಕರ್ಷಣ ನಿರೋಧಕಗಳು ಮತ್ತು ಕ್ಯಾಟೆಚಿನ್‌ಗಳಲ್ಲಿ ಸಮೃದ್ಧವಾಗಿದೆ. ಇದರಿಂದ ರಕ್ತ ಪರಿಚಲನೆಯೂ ಸುಧಾರಿಸುತ್ತದೆ. ಇದಲ್ಲದೆ, ನೀವು ಕಪ್ಪು ಚಹಾವನ್ನು ಸಹ ಸೇವಿಸಬಹುದು.

(ಗಮನಿಸಿರಿ: ಇಲ್ಲಿ ನೀಡಲಾದ ಮನೆಮದ್ದುಗಳು ಕೇವಲ ನಿಮ್ಮ ಮಾಹಿತಿಗಾಗಿ. ಈ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News