ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಈ ನಾಲ್ಕು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ!

Weight Loss Diet: ನಿಮ್ಮ ಆಹಾರದಲ್ಲಿ ನೀವು ಕಡಿಮೆ ಕ್ಯಾಲೋರಿ ಆಹಾರವನ್ನು ಶಾಮೀಲುಗೊಳಿಸಿದರೆ, ಅದು ನಿಮ್ಮ ದೇಹವನ್ನು ಶಕ್ತಿಯಿಂದ ತುಂಬಿರುತ್ತದೆ (Tips To Loose Weight). ಇಂತಹ ಪರಿಸ್ಥಿತಿಯಲ್ಲಿ, ಇಂದು ನಾವು ನಿಮಗೆ ಕಡಿಮೆ ಕ್ಯಾಲೋರಿ ಹೊಂದಿರುವ ಕೆಲವು ಆಹಾರಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಿಂದ ನೀವೂ ಕೂಡ ನಿಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.   

Written by - Nitin Tabib | Last Updated : Aug 31, 2023, 11:28 PM IST
  • ಕ್ವಿನೋವಾ, ಬ್ರೌನ್ ರೈಸ್ ಮತ್ತು ಓಟ್ಸ್‌ನಂತಹ ಸಂಪೂರ್ಣ ಧಾನ್ಯದ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿವೆ.
  • ಇದಲ್ಲದೆ, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಂತಹ ಗುಣಲಕ್ಷಣಗಳು ಅವುಗಳಲ್ಲಿವೆ. ಈ ಧಾನ್ಯಗಳ ಆಹಾರವನ್ನು ಸೇವಿಸುವುದರಿಂದ
  • ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ, ಇದರಿಂದಾಗಿ ನಿಮ್ಮ ದೇಹವು ಶಕ್ತಿಯಿಂದ ತುಂಬಿರುತ್ತದೆ.
ಸೊಂಟದ ಸುತ್ತಲಿನ ಬೊಜ್ಜು ಕರಗಿಸಲು ಈ ನಾಲ್ಕು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ! title=

ಬೆಂಗಳೂರು: ತೂಕ ಹೆಚ್ಚಾಗುವುದು ಇಂದಿನ ದಿನಗಳಲ್ಲಿ ಒಂದು ಸಾಮಾನ್ಯ ಸಮಸ್ಯೆಯಾಗಿಯೇ ಮಾರ್ಪಟ್ಟಿದೆ. ಜನರು ತೂಕ ಇಳಿಸಿಕೊಳ್ಳಲು (Tips To Loose Weight) ಏನೆಲ್ಲಾ ಮಾಡಲು ಮುಂದಾಗುತ್ತಾರೆ, ಜಿಮ್‌ನಿಂದ ಹಿಡಿದು ತಮ್ಮ ಆಹಾರಕ್ರಮದ ಬೆಂಬಲವನ್ನು ಸಹ ಅವರು ಪಡೆದುಕೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರದಲ್ಲಿ ನೀವು ಕಡಿಮೆ ಕ್ಯಾಲೋರಿ ಆಹಾರವನ್ನು ಶಾಮೀಲುಗೊಳಿಸಿದರೆ, ನಿಮ್ಮ ದೇಹವು ಶಕ್ತಿಯಿಂದ ತುಂಬಿರುತ್ತದೆ. ಇಂದು ನಾವು ನಿಮಗೆ ಕಡಿಮೆ ಕ್ಯಾಲೋರಿ ಹೊಂದಿರುವ ಕೆಲವು ಆಹಾರಗಳನ್ನು ಹೇಳಲಿದ್ದೇವೆ, ಅವುಗಳಿಂದ ನೀವು  ನಿಮ್ಮ ಹೆಚ್ಚಿದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ಬನ್ನಿ ಆ ಆಹಾರಗಳು ಯಾವುವು ತಿಳಿದುಕೊಳ್ಳೋಣ, 

ತೂಕ ಇಳಿಕೆಗೆ ಸಹಾಯ ಮಾಡುವ ಕಡಿಮೆ ಕ್ಯಾಲೋರಿ ಆಹಾರಗಳು
ಮೊಟ್ಟೆಗಳು

ಮೊಟ್ಟೆಗಳು ಹೆಚ್ಚಿನ ಪ್ರೋಟೀನ್, ಅಮೈನೋ ಆಮ್ಲಗಳು ಮತ್ತು ವಿಟಮಿನ್ ಬಿ ಯಂತಹ ಗುಣಗಳಲ್ಲಿ ಸಮೃದ್ಧವಾಗಿವೆ. ನೀವು ಆಹಾರದಲ್ಲಿ ಮೊಟ್ಟೆಗಳನ್ನು ಸೇರಿಸಿದರೆ, ಅದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ಅದು ತೂಕವನ್ನು ಕಡಿಮೆ ಮಾಡಲು ಮತ್ತು ಶಕ್ತಿಯನ್ನು ಹೆಚ್ಚಿಸಲು ಸಹ ನಿಮಗೆ ಸಹಾಯ ಮಾಡುತ್ತದೆ.

ಹಸಿರು ಎಲೆ ತರಕಾರಿಗಳು
ಹಸಿರು ಎಲೆಗಳ ತರಕಾರಿಗಳಾದ ಪಾಲಕ್, ಕೇಲ್ ಮತ್ತು ಲೆಟಿಸ್ ಗಳು ಕಬ್ಬಿಣ, ಮೆಗ್ನೀಸಿಯಮ್, ವಿಟಮಿನ್ ಎ ಮತ್ತು ಸಿ ಯಂತಹ ಪೋಷಕಾಂಶಗಳ ಆಗರವಾಗಿವೆ. ಈ ಎಲ್ಲಾ ತರಕಾರಿಗಳು ಹೆಚ್ಚಿನ ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ, ಹೀಗಾಗಿ ಅವು ತೂಕ ಇಳಿಕೆಗೆ ಸಹಾಯ ಮಾಡುತ್ತವೆ.

ಧಾನ್ಯಗಳು
ಕ್ವಿನೋವಾ, ಬ್ರೌನ್ ರೈಸ್ ಮತ್ತು ಓಟ್ಸ್‌ನಂತಹ ಸಂಪೂರ್ಣ ಧಾನ್ಯದ ಆಹಾರಗಳು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿವೆ. ಇದಲ್ಲದೆ, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಂತಹ ಗುಣಲಕ್ಷಣಗಳು ಅವುಗಳಲ್ಲಿವೆ. ಈ ಧಾನ್ಯಗಳ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿರುತ್ತದೆ, ಇದರಿಂದಾಗಿ ನಿಮ್ಮ ದೇಹವು ಶಕ್ತಿಯಿಂದ ತುಂಬಿರುತ್ತದೆ.

ಇದನ್ನೂ ಓದಿ-ಹಸಿರು ಚಹಾ ಅಷ್ಟೇ ಅಲ್ಲ, ಈ ಹಸಿರು ಕಾಫಿ ಕೂಡ ತೂಕ ಇಳಿಕೆಗೆ ಪರಿಣಾಮಕಾರಿ ಮನೆಮದ್ದು!

ಗ್ರೀಕ್ ಮೊಸರು
ಗ್ರೀಕ್ ಮೊಸರು ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಉತ್ತಮ ಪ್ರಮಾಣದ ಪ್ರೋಬಯಾಟಿಕ್‌ಗಳಲ್ಲಿ ಸಮೃದ್ಧವಾಗಿರುವ ಕಡಿಮೆ ಕ್ಯಾಲೋರಿ ಆಹಾರವಾಗಿದೆ. ಇದನ್ನು ಸೇವಿಸುವುದರಿಂದ ಸಾಕಷ್ಟು ಶಕ್ತಿ ಸಿಗುತ್ತದೆ. ಇದರೊಂದಿಗೆ, ನೀವು ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಬಹುದು.

ಇದನ್ನೂ ಓದಿ-ಈ 4 ಪ್ರಕಾರದ ಹರ್ಬಲ್ ಟೀ ಸೇವನೆ ಮಧುಮೇಹ ರೋಗಿಗಳಿಗೆ ವರದಾನಕ್ಕೆ ಸಮಾನ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News