Viagra for Female : ಹೆಚ್ಚಿನ ಸಮಯ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ಇಂದಿನ ಯುವಜನತೆಗೆ ಲೈಂಗಿಕ ಉತ್ತೇಜನ ಔಷಧಿಗಳ ಮೊರೆ ಹೋಗುತ್ತಾರೆ. ವಯಾಗ್ರವನ್ನು ಹೆಚ್ಚಾಗಿ ಯುವಕರು ಶೃಂಗಾರ ಕ್ರೀಡೆಗೂ ಮುನ್ನ ಬಳಸುತ್ತಾರೆ. ಆದ್ರೆ, ಯುವತಿಯರು ಈ ಔಷಧಿಯನ್ನು ಬಳಸಿದರೆ ಅವರ ದೇಹದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಎಲ್ಲರಿಗೂ ಇರುತ್ತದೆ. ಇದೀಗ ವಯಾಗ್ರ ಯುವತಿಯರ ದೇಹದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತದೆ ಎಂದು ತಿಳಿದುಕೊಳ್ಳೋಣ.
ನೈಸರ್ಗಿಕವಾಗಿ ಲೈಂಗಿಕ ಕ್ರಿಯೆ ನಡೆಸುವುದು ಉತ್ತಮ. ಈ ರೀತಿಯ ವಯಾಗ್ರಗಳನ್ನು ಬಳಸುವುದರಿಂದ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೂ ಇಂದಿನ ಯುವಕರು ಹೆಚ್ಚಾಗಿ ಲೈಂಗಿಕ ಕ್ರಿಯೆ ನಡೆಸುವ ಉದ್ದೇಶದಿಂದ ವಯಾಗ್ರಗಳ ಮೊರೆ ಹೋಗುತ್ತಿದ್ದಾರೆ. ಒಂದು ವೇಳೆ ಮಹಿಳೆಯರು ಈ ಔಷಧಿಯನ್ನು ತೆಗೆದುಕೊಂಡರೆ ಅವರ ದೇಹದ ಮೇಲೂ ಅಪಾರ ಪರಿಣಾಮಗಳನ್ನು ಬೀರುತ್ತದೆ. ಈ ಕುರಿತು ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ..
ಇದನ್ನೂ ಓದಿ: ಪೈಲ್ಸ್ ಹಾಗೂ ಜೀರ್ಣಕಾರಿ ಸಮಸ್ಯೆಗೆ ʼಬಾಳೆಹಣ್ಣುʼ ಪರಿಣಾಮಕಾರಿ..! ಹೇಗೆ ಗೊತ್ತೇ..
ಪ್ರಶ್ನೆ: ಮಹಿಳೆಯರು ವಯಾಗ್ರವನ್ನು ತೆಗೆದುಕೊಳ್ಳಬಹುದೇ, ಅದು ಅವರ ದೇಹದ ಮೇಲೆ ಯಾವ ಪರಿಣಾಮ ಬೀರುತ್ತದೆ..?
ಉತ್ತರ: ವಯಾಗ್ರವು ಪುರುಷರಲ್ಲಿ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಹೆಚ್ಚಿಸುವ ಒಂದು ಔಷಧವಾಗಿದೆ. ಆದರೆ ಮಹಿಳೆಯರಿಗೆ ಈ ಔಷಧದ ಯಾವುದೇ ವಿಶೇಷ ಪರಿಣಾಮವನ್ನು ಬೀರಿರುವುದಾಗಿ ತಿಳಿದು ಬಂದಿಲ್ಲ.
ಪುರುಷರ ಮೇಲೆ ವಯಾಗ್ರ ಪರಿಣಾಮಗಳು : ವಯಾಗ್ರವು ಪುರುಷರಲ್ಲಿ ಲೈಂಗಿಕ ಬಯಕೆ ಮತ್ತು ನಿಮಿರುವಿಕೆಯನ್ನು ಹೆಚ್ಚಿಸುತ್ತದೆ. ದೀರ್ಘ ಕಾಲದವರೆಗೆ ಪುರುಷ ಜನನಾಂಗ ನಿಮಿರಿರುತ್ತದೆ. ಅಲ್ಲದೆ, ಶೀರ್ಘ ಸ್ಕಲನವಾಗುವುದಿಲ್ಲ. ಇದು ತೃಪ್ತಿದಾಯಕ ಸಂಭೋಗದ ಅವಧಿಯನ್ನು ಹೆಚ್ಚಿಸಲು ಮಾತ್ರ ಸಹಾಯ ಮಾಡುತ್ತದೆ.
ಇದನ್ನೂ ಓದಿ: Diabetes: ಮಧುಮೇಹಿಗಳಿಗೆ ಔಷಧೀಯ ಕೆಲಸ ಮಾಡುತ್ತದೆ ಹಸಿ ಶುಂಠಿ!
ಮಹಿಳೆಯರ ಮೇಲೆ ವಯಾಗ್ರದ ಪ್ರಭಾವ: ಮಹಿಳೆಯರಲ್ಲಿ ನಿಮಿರುವಿಕೆ ಅಥವಾ ಲೈಂಗಿಕ ಪ್ರಚೋದನೆಯ ಮೇಲೆ ವಯಾಗ್ರ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಕೆಲವು ವರದಿಗಳು ಋತುಬಂಧದ ನಂತರ ವಯಾಗ್ರವನ್ನು ತೆಗೆದುಕೊಳ್ಳುವುದು ಲೈಂಗಿಕ ಪ್ರಚೋದನೆಯನ್ನು ಉತ್ಪಾದಿಸುವಲ್ಲಿ ಸ್ವಲ್ಪ ಕಡಿಮೆ ಪರಿಣಾಮಕಾರಿ ಎಂದು ಹೇಳುತ್ತವೆ.
ವಯಾಗ್ರದ ಅಡ್ಡ ಪರಿಣಾಮ : ವಯಾಗ್ರ ಸೇವಿಸುವುದರಿಂದ ಲೈಂಗಿಕ ಕ್ರಿಯೆ ನಂತರ ತಲೆನೋವು, ತಲೆತಿರುಗುವಿಕೆ, ಆಯಾಸ ಮತ್ತು ಬಾಯಾರಿಕೆ ಉಂಟಾಗುತ್ತದೆ. ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಈ ರೋಗಲಕ್ಷಣಗಳು ಹೆಚ್ಚು ತೀವ್ರವಾಗಿರುತ್ತವೆ. ಡೋಸ್ ಹೆಚ್ಚಾದ್ರೆ ರಕ್ತದೊತ್ತಡ ಉಂಟಾಗುವ ಸಾಧ್ಯತೆ ಇರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.