Retinal health : ಸಾಂಕ್ರಾಮಿಕವು, ಜನರು ಆರೋಗ್ಯಕರವಾದ ಜೀವನಶೈಲಿಯ ಬಗ್ಗೆ ಹೆಚ್ಚು ಜಾಗೃತರಾಗಿರುವಂತೆ ಮಾಡಿದ್ದರೂ, ತಡೆಯಾತ್ಮಕ ಸ್ವ-ಆರೈಕೆಯ ವಿಷಯ ಬಂದಾಗ, ರೆಟಿನಾದ ಆರೋಗ್ಯವನ್ನು ಆದ್ಯತೆಯ ಪಟ್ಟಿಯಲ್ಲಿ ಇನ್ನೂ ಹಾಕಲಾಗಿಲ್ಲ. ಅನೇಕ ಪ್ರಗತಿಹೊಂದಿರುವ ರೆಟಿನಾ ಕಾಯಿಲೆಗಳಿzಚಿಕ್ಕ ವಯಸ್ಸಿನಲ್ಲೇ ಅವು ಒಬ್ಬ ವ್ಯಕ್ತಿಯನ್ನು ಬಾಧಿಸಬಹುದು1. ಆದರೆ, ಅರಿವಿನ ಕೊರತೆಯ ಕಾರಣದಿಂದಾಗಿ ಗಂಭೀರವಾದ ರೋಗಲಕ್ಷಣಗಳು ಕಾಣಿಸಿಕೊಂಡ ಬಳಿಕವಷ್ಟೇ ಈ ರೀತಿಯ ಕಾಯಿಲೆಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ವಯೋ-ಸಂಬಂಧಿತ ಮಾಕ್ಯುಲರ್ ಡೀಜನರೇಶನ್(ಎಎಮ್‍ಡಿ) ಮತ್ತು ಡಯಾಬೆಟಿಕ್ ರೆಟಿನೋಪತಿ(ಡಿಆರ್) ಮುಂತಾದ ಕಾಯಿಲೆಗಳು, ನಿಖರವಾಗಿ ಮತ್ತು ಸರಿಯಾದ ಸಮಯದಲ್ಲಿ ನಿರ್ವಹಿಸಲ್ಪಡದಿದ್ದಲ್ಲಿ, ಗಣನೀಯವಾದ ದೃಷ್ಟಿ ನಷ್ಟಕ್ಕೆ ಅಥವಾ ಮಾಂದ್ಯತೆಗೆ ಕಾರಣವಾಗಬಹುದು. ಎಎಮ್‍ಡಿ ಕೇಂದ್ರೀಯ ದೃಷ್ಟಿಯನ್ನು ಬಾಧಿಸುತ್ತದೆ ಮತ್ತು ವೃದ್ಧರಲ್ಲಿ ಇದು ಅತಿಸಾಮಾನ್ಯವಾದುದು. ಮಧುಮೇಹಿಗಳಲ್ಲಿ ಡಿಆರ್ ರೆಟಿನಾದ ರಕ್ತನಾಳಗಳನ್ನು ಹಾನಿಗೊಳಪಡಿಸುವ ಮೂಲಕ ಶಾಶ್ವತವಾದ ಕುರುಡುತನ ಅಥವಾ ದೃಷ್ಟಿನಷ್ಟವನ್ನು ಏರ್ಪಡಿಸಬಹುದು.
ಕರ್ನಾಟಕದ ನಾರಾಯಣ ನೇತ್ರಾಲಯ ಐ ಇನ್ಸ್ಟಿಟ್ಯೂಟ್ನ ವಿಟ್ರಿಯೋರೆಟಿನಾ ಸರ್ವಿಸಸ್ ವಿಭಾಗದ ಮುಖ್ಯಸ್ಥರಾದ ಡಾ. ಚೈತ್ರ ಜಯದೇವ್, “ಭಾರತದಲ್ಲಿ ಇರುವ ಎಲ್ಲಾ ಮಧುಮೇಹಿಗಳ ಪೈಕಿ 35% ಮಂದಿ ಯಾವುದೋ ಒಂದು ರೀತಿಯ ಡಯಾಬೆಟಿಕ್ ರೆಟಿನೋಪತಿ ಹೊಂದಿರುತ್ತಾರೆ ಮತ್ತು 10%ಗಿಂತ ಹೆಚ್ಚಿನ ಮಂದಿ, ಪ್ರೊಲಿಫರೇಟಿವ್ ಡಯಾಬೆಟಿಕ್ ರೆಟಿನೋಪತಿ ಮತ್ತು ಡಯಾಬೆಟಿಕ್ ಮ್ಯಾಕ್ಯುಲರ್ ಈಡಿಮಾದಂತಹ ದೃಷ್ಟಿಗೆ ಅಪಾಯವನ್ನುಂಟು ಮಾಡುವ ಪರಿಸ್ಥಿತಿಗಳಿಂದ ಬಳಲುತ್ತಿದ್ದಾರೆ. ಮಧುಮೇಹದಿಂದಾಗಿ ಕಣ್ಣಿನ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ಯಾವುದೇ ರೋಗಲಕ್ಷಣಗಳು ಇಲ್ಲದಿರಬಹುದು, ಮತ್ತು ಅನೇಕರಿಗೆ ಇದನ್ನು ಸಾಮಾನ್ಯ ಪರೀಕ್ಷೆಯ ಸಮಯದಲ್ಲಿ ಕಂಡುಹಿಡಿಯಲಾಗುತ್ತದೆ. ದೃಷ್ಟಿ ಮಂಜಾಗುವಿಕೆ, ಪದೇ ಪದೇ ಕನ್ನಡಕದ ಪವರ್ ಬದಲಾಯಿಸುವುದ್ ಮತ್ತು ಫ್ಲೋಟರ್‍ಗಳು ಕೆಲವು ಸಾಮಾನ್ಯ ದೂರುಗಳಾಗಿರುತ್ತವೆ. ರೆಟಿನಾವನ್ನು ಬಾಧಿಸುವ ಬಹುತೇಕ ಕಾಯಿಲೆಗಳು ಅಸಮರ್ಪಕ ಜೀವನಶೈಲಿಯಿಂದ ಏರ್ಪಡುವುದರಿಂದ, ಇದರ ಬಗ್ಗೆ ಅರಿವು ಹೊಂದಿರುವುದು ಮತ್ತು ಇದನ್ನು ಹೆಚ್ಚಿಸುವ ಅಂಶಗಳನ್ನು ತಪ್ಪಿಸುವುದರಿಂದ, ದೀರ್ಘಕಾಲ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು.”ಎಂದು ಹೇಳುತ್ತಾರೆ.
ಇದನ್ನೂ ಓದಿ : Papaya Seeds : ಪಪ್ಪಾಯಿ ಬೀಜ ಹೀಗೆ ಬಳಸಿದ್ರೆ Belly Fat ಕೆಲವೇ ದಿನಗಳಲ್ಲಿ ಮಾಯವಾಗುತ್ತೆ!
ರೆಟಿನಾದ ಆರೋಗ್ಯಕ್ಕೆ ತಡೆಯಾತ್ಮಕ ಕ್ರಮಗಳು :
ದೃಷ್ಟಿನಷ್ಟ, ವೃದ್ಧಾಪ್ಯದ ಅನಿವಾರ್ಯ ಫಲವಾಗಬೇಕಾಗಿಲ್ಲ ಮತ್ತು ಇದನ್ನು ಉತ್ತಮವಾಗಿ ನಿರ್ವಹಿಸಬಹುದು. ದೀರ್ಘಕಾಲಿಕ ಕಾಯಿಲೆಗಳಿಂದಾಗಿ ಏರ್ಪಡುವ ಅಸಮರ್ಪಕ ರೆಟಿನಾ ಆರೋಗ್ಯಕ್ಕೂ ಇದು ಅನ್ವಯಿಸಬೇಕಾಗಿಲ್ಲ. ಉತ್ತಮ ಆಹಾರಕ್ರಮ, ಆರೋಗ್ಯಕರ ಜೀವನಶೈಲಿ ಮತ್ತು ಕಾಲಕಾಲಕ್ಕೆ ತಪಾಸಣೆ ಮುಂತಾದ ಹಲವಾರು ಅಂಶಗಳು ರೆಟಿನಾಕ್ಕೆ ಏರ್ಪಡುವ ಹಾನಿಯನ್ನು ತಡೆಗಟ್ಟುವಲ್ಲಿ ನೆರವಾಗುತ್ತವೆ. ನೀವು ಈ ಕೆಳಕಂಡ ಸಲಹೆಗಳನ್ನು ಪಾಲಿಸಿದರೆ ಸಾಕು:
ನೇತ್ರ-ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗೃತಿ :
ನಿಮ್ಮನ್ನು ಬಾಧಿಸಬಹುದಾದ ಕಾಯಿಲೆಗಳು ಮತ್ತು ಅವುಗಳನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಜಾಗೃತರಾಗಿರಿ. ನೀವು ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿದ್ದರೆ, ಅದು ನಿಮ್ಮ ರೆಟಿನಾವನ್ನು ಬಾಧಿಸಬಹುದೆ ಮತ್ತು ಅದಕ್ಕೆ ಏರ್ಪಡುವ ಯಾವುದೇ ಹಾನಿಯನ್ನು ತಡೆಗಟ್ಟುವ ಕ್ರಮವಿದೆಯೆ ಎಂದು ನಿಮ್ಮ ವೈದ್ಯರನ್ನು ಕೇಳಿ ತಿಳಿದುಕೊಳ್ಳಿ.
ಕಾಲಕಾಲಕ್ಕೆ ಕಣ್ಣಿನ ತಪಾಸಣೆಗಳು :
ಉತ್ತಮ ರೆಟಿನಾ ಆರೋಗ್ಯದ ಅತಿಮುಖ್ಯ ಸಲಹೆ ಎಂದರೆ ಒಬ್ಬ ಆಪ್ಟೋಮೆಟ್ರಿಸ್ಟ್ ಅಥವಾ ನೇತ್ರತಜ್ಞರಿಂದ ಕಾಲಕಾಲಕ್ಕೆ ಕಣ್ಣುಗಳ ತಪಾಸನೆ ಮಾಡಿಸಿಕೊಳ್ಳುತ್ತಿರುವುದು. ಇದು ಕಾಯಿಲೆಗಳನ್ನು ತಡೆಗಟ್ಟಲು ಅಥವಾ ಆರಂಭಿಕ ಹಂತದಲ್ಲೇ ಅವುಗಳನ್ನು ಪತ್ತೆಹಚ್ಚಲು ನೆರವಾಗಿ, ಅದನ್ನು ಉತ್ತಮವಾಗಿ ನಿರ್ವಹಿಸಿ ದೃಷ್ಟಿ ನಷ್ಟವನ್ನು ತಡೆಗಟ್ಟಲು ನೆರವಾಗುತ್ತದೆ.
ಚಿಕಿತ್ಸೆಯನ್ನು ತಪ್ಪದೇ ಅನುಸರಿಸುವುದು :
ಕಣ್ಣುಗಳನ್ನು ಜಲೀಕರಣವಾಗಿರಿಸಲು ಡ್ರಾಪ್ಸ್ ಬೇಕೇ ಅಥವಾ ಮುಂದುವರಿದ ಎಎಮ್‍ಡಿಗಾಗಿ ಲೇಸರ್ ಚಿಕಿತ್ಸೆ ಬೇಕೇ ಎಂಬುದನ್ನು ಕೇವಲ ಒಬ್ಬ ತಜ್ಞರು ಮಾತ್ರ ತೀಮಾನಿಸಬಲ್ಲರು. ಆದ್ದರಿಂದ, ಅತ್ಯುತ್ತಮ ಫಲಿತಾಂಶಗಳನ್ನು ಪಡೆದುಕೊಳ್ಳಲು ನೀವು ಅನುಸರಿಸಬೇಕಾದ ಚಿಕಿತ್ಸಾ ವಿಧಾನವನ್ನು ನಿಮ್ಮ ವೈದ್ಯರೇ ತೀರ್ಮಾನಿಸಲಿ.
ಕೊಲೆಸ್ಟೆರಾಲ್ ಮಟ್ಟಗಳನ್ನು ಗಮನಿಸಿಕೊಳ್ಳುತ್ತಿರಿ :
ನಿಯಮಿತವಾಗಿ ನಿಮ್ಮ ರಕ್ತದೊತ್ತಡ, ರಕ್ತದ ಗ್ಲುಕೋಸ್ ಮಟ್ಟಗಳು ಮತ್ತು ಕೊಲೆಸ್ಟೆರಾಲ್ ಮಟ್ಟಗಳನ್ನು ಗಮನಿಸಿಕೊಳ್ಳುತ್ತಿರಿ. ಕಣ್ಣುಗಳೂ ಒಳಗೊಂಡಂತೆ, ಹೃದಯ ಹಾಗೂ ಇತರ ಅಂಗಾಂಗಗಳಿಗೆ ಹಾನಿಯಾಗುವುದನ್ನು ತಡೆಗಟ್ಟುವುದಕ್ಕೆ ನಿಯಮಿತವಾಗಿ ರಕ್ತದೊತ್ತಡ ಮತ್ತು ಕೊಲೆಸ್ಟೆರಾಲ್‍ಅನ್ನು ಗಮನಿಸಿಕೊಳ್ಳುತ್ತಿರುವುದು ಬಹಳ ಮುಖ್ಯ. ಮಧುಮೇಹಿಗಳಲ್ಲಿ ರಕ್ತದ ಗ್ಲುಕೋಸ್ ಮಟ್ಟಗಳನ್ನು ಹೆಚ್ಚಾದರೆ ಡಿಆರ್ ಏರ್ಪಡುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ : PM Modi Fitness: 72ರ ಹರೆಯದಲ್ಲೂ ಪ್ರಧಾನಿ ಮೋದಿ ಹೇಗೆ ಫಿಟ್ ಆಗಿದ್ದಾರೆ ಗೊತ್ತಾ?
ಸಮತೋಲನ ಆಹಾರ ಸೇವಿಸಿ :
ನಿಮ್ಮ ಕಣ್ಣುಗಳ ಸಲುವಾಗಿ ದಿನನಿತ್ಯದ ಆಧಾರದಲ್ಲಿ ನಿಮ್ಮ ಆಹಾರಕ್ರಮದಲ್ಲಿ ಕೆಲವು ಪೋಷಕಾಂಶಗಳನ್ನು ಸೇರಿಸುವ ಪ್ರಾಮುಖ್ಯತೆಯನ್ನು ದಿ ಅಮೆರಿಕನ್ ಆಪ್ಟ್ಟೋಮೆಟ್ರಿಕ್ ಅಸೋಸಿಯೇಶನ್ ಒತ್ತಿಹೇಳುತ್ತದೆ. ಸ್ಪಿನಾಚ್(ಪಾಲಕ್), ಕಾಲೆ ಮತ್ತು ಮೊಟ್ಟೆ ಮುಂತಾದ ಆಹಾರಗಳು ನೀವು ದೀರ್ಘಕಾಲಿಕ ಕಣ್ಣಿನ ಕಾಯಿಲೆಗಳನ್ನು ಹೊಂದುವ ಅಪಾಯವನ್ನು ತಗ್ಗಿಸುತ್ತವೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ಹೇರಳವಾಗಿರುವ ವಿಟಮಿನ್ ಸಿ, ವಯೋ-ಸಂಬಂಧಿತ ದೃಷ್ಟಿನಷ್ಟದ ಪ್ರಗತಿಯನ್ನು ನಿಧಾನಗೊಳಿಸಬಹುದು. ಅಗಸೆಬೀಜ, ಚಿಯಾಬೀಜಗಳು, ವಾಲ್ನಟ್, ಮತ್ತು ಮೀನು ಮುಂತಾದವುಗಳು ಒಮೆಗಾ-3 ಫ್ಯಾಟಿ ಆಮ್ಲದ ಉತ್ತಮ ಮೂಲಗಳಾಗಿದ್ದು ನಿಮ್ಮ ಮೆದುಳಿಗೆ ದೃಷ್ಟಿ ಸಂದೇಶಗಳನ್ನು ಕಳುಹಿಸುವ ರೆಟಿನಾದ ಸರಿಯಾದ ಕಾರ್ಯಾಚರಣೆಗೆ ಮುಖ್ಯವಾದವುಗಳಾಗಿವೆ.
ರೆಟಿನಾ ಹಾಳಾದರೆ ಅದನ್ನು ತೀರಾ ಅಪರೂಪಕ್ಕೆ ಸರಿಪಡಿಸಬಹುದು. ಆದ್ದರಿಂದ, ದೃಷ್ಟಿನಷ್ಟ ಮತ್ತು ಕುರುಡುತನವನ್ನು ತಡೆಗಟ್ಟುವುದಕ್ಕೆ ನಿಮಗಿರುವ ಅತ್ಯುತ್ತಮ ಅವಕಾಶವೆಂದರೆ, ಅರಿವು ಹೊಂದಿರುವುದು ಮತ್ತು ನಿಮ್ಮ ಕಣ್ಣುದೃಷ್ಟಿಯನ್ನು ಕಾಪಾಡಿಕೊಳ್ಳುವುದು. ನಿಮಗೆ ದೀರ್ಘಾವಧಿ ಕಾಯಿಲೆಗಳ ಕೌಟುಂಬಿಕ ಇತಿಹಾಸವಿದ್ದರೆ ಅಥವಾ ನೀವು ಕಾಯಿಲೆಗಳಿಗೆ ಸುಲಭವಾಗಿ ಒಳಗಾಗುವವರಾಗಿದ್ದರೆ, ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಆಗಿಂದಾಗ್ಗೆ ಪರೀಕ್ಷಿಸಿಕೊಳ್ಳುತ್ತಿರಿ. ಕಣ್ಣುಗಳ ಆರೋಗ್ಯ ಕ್ಷೀಣವಾಗುವುದರಲ್ಲಿ ವಂಶವಾಹಿಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದು ನಂಬಲಾಗಿದ್ದು ಬಾಲ್ಯಾವಸ್ಥೆ ಕುರುಡುತನದ ಸಂದರ್ಭಗಳ ಪೈಕಿ 60%ಗೆ ಅದು ಕಾರಣವಾಗಿದೆ2. ನಿಯಮಿತ ತಪಾಸಣೆಗಳು, ಆರೋಗ್ಯಕರ ಜೀವನಶೈಲಿ ಮತ್ತು ಚಿಕಿತ್ಸೆಯ ಅನುಸರಣೆ, ರೆಟಿನಾದ ಕಾಯಿಲೆಗಳನ್ನು ತಡೆಗಟ್ಟುವುದಕ್ಕೆ ಅಥವಾ ಅದನ್ನು ಅತ್ಯುತ್ತಮವಾಗಿ ನಿರ್ವಹಿಸುವುದಕ್ಕೆ ಇರುವ ಅತ್ಯುತ್ತಮ ಕ್ರಮಗಳಾಗಿವೆ.
ಲೇಖಕ : ನಾರಾಯಣ ನೇತ್ರಾಲಯ ಐ ಇನ್ಸ್ಟಿಟ್ಯೂಟ್ನ ವಿಟ್ರಿಯೋರೆಟಿನಾ ಸರ್ವಿಸಸ್ ವಿಭಾಗದ ಮುಖ್ಯಸ್ಥರಾದ ಡಾ. ಚೈತ್ರ ಜಯದೇವ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.