'ನಾರಿಶಕ್ತಿ'ಯನ್ನು 2018ರ ಹಿಂದಿ ಪದ ಎಂದು ಘೋಷಿಸಿದ ಆಕ್ಷಫರ್ಡ್ ಡಿಕ್ಷನರಿ

ಆಕ್ಷಫರ್ಡ್ ಡಿಕ್ಷನರಿ ಈಗ ನಾರಿ ಶಕ್ತಿಯನ್ನು  2018 ರ ಹಿಂದಿ ಪದ ಎಂದು ಘೋಷಣೆ ಮಾಡಿದೆ.

Last Updated : Jan 27, 2019, 12:27 PM IST
'ನಾರಿಶಕ್ತಿ'ಯನ್ನು 2018ರ ಹಿಂದಿ ಪದ ಎಂದು ಘೋಷಿಸಿದ ಆಕ್ಷಫರ್ಡ್ ಡಿಕ್ಷನರಿ title=
ಸಾಂದರ್ಭಿಕ ಚಿತ್ರ

ನವದೆಹಲಿ: ಆಕ್ಷಫರ್ಡ್ ಡಿಕ್ಷನರಿ ಈಗ ನಾರಿ ಶಕ್ತಿಯನ್ನು  2018 ರ ಹಿಂದಿ ಪದ ಎಂದು ಘೋಷಣೆ ಮಾಡಿದೆ.

ಸಂಸ್ಕೃತ ಮೂಲದಿಂದ ಉಗಮ ಗೊಂಡಿರುವ ಈ ಪದ ನಾರಿಶಕ್ತಿ ಎಂದರೆ ಮಹಿಳಾ ಶಕ್ತಿ ಎಂದರ್ಥ. ಒಂದು ರೀತಿಯಲ್ಲಿ ಇದು ಮಹಿಳಾ ಸಬಲೀಕರಣ ಪ್ರತೀಕವನ್ನು ಈ ಶಬ್ದ ಸೂಚಿಸುತ್ತದೆ.ಈಗ ಪದವನ್ನು ಈಗ ಆಕ್ಸಫರ್ಡ್ ಡಿಕ್ಷನರಿಗೆ ಸೇರಿಸಿರುವುದನ್ನು ಜೈಪುರ ಸಾಹಿತ್ಯ ಉತ್ಸವದಲ್ಲಿ ಘೋಷಣೆ ಮಾಡಲಾಗಿದೆ.

ಈಗ ಈ ಕುರಿತಾಗಿ ಮಾತನಾಡಿರುವ ಆಕ್ಷಫರ್ಡ್ ಡಿಕ್ಷನರಿಗಳ ಭಾಷಾ ಚಾಂಪಿಯನ್ ಕೃತಿಕಾ ಅಗರವಾಲ್ " ನಾರಿ ಶಕ್ತಿ ಎನ್ನುವುದು 2018 ರಲ್ಲಿ ಮಹಿಳಾ ಸಶಕ್ತಿಕರಣಕ್ಕೆ ಹೊಸ ಅರ್ಥವನ್ನು ನೀಡಿರುವ ಕುರಿತು ಪ್ರತಿಧ್ವನಿಸುತ್ತದೆ. ಈ ಪದ ಸಹೋದರಿಯತ್ವವನ್ನು ಈ ಹಿಂದಿಗಿಂತಲೂ  ಪ್ರಭಾವಿತವಾಗಿ ಸೂಚಿಸಿದೆ" ಎಂದರು. ಇನ್ನು ಮುಂದುವರೆದು ನಾರಿ ಶಕ್ತಿ ಚಳುವಳಿಯಲ್ಲಿ ಪ್ರಮುಖವಾಗಿ ಪುರುಷ ಮತ್ತು ಮಹಿಳೆ ಇಬ್ಬರು ಒಳಗೊಂಡಿದ್ದಾರೆ.

ಈ ಪದವು ಈಗ ಆಕ್ಷಫರ್ಡ್ ಡಿಕ್ಷನರಿಯಲ್ಲಿ ಸೇರಲು ಪ್ರಮುಖ ಕಾರಣ 2018ರಲ್ಲಿ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ನಿಷೇಧ ಮತ್ತು ಶಬರಿಮಲೆ ದೇವಸ್ತಾನಕ್ಕೆ  ಮಹಿಳೆಯರಿಗೆ ಪ್ರವೇಶ ನೀಡಿರುವುದು ಕೂಡ ನಾರಿ ಶಕ್ತಿಗೆ ಪೂರಕವಾಗಿದೆ. 

Trending News