ಕೊರೊನಾ ಚಿಕಿತ್ಸೆಗೆ ವಿಪರೀತ ಬಿಲ್ಲಿಂಗ್ ಮಾಡಿದ್ದಕ್ಕೆ 10 ಆಸ್ಪತ್ರೆಗಳ ಪರವಾನಿಗೆ ರದ್ದು..!

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಪರೀತ ಬಿಲ್ಲಿಂಗ್  ಮಾಡಿದ್ದಕ್ಕಾಗಿ ರೋಗಿಗಳು ದೂರು ನೀಡಿರುವ ಹಿನ್ನಲೆಯಲ್ಲಿ ಈಗ ತೆಲಂಗಾಣದಲ್ಲಿನ 10 ಆಸ್ಪತ್ರೆಗಳ ಪರವಾನಿಗೆಯನ್ನ ರದ್ದುಗೊಳಿಸಲಾಗಿದೆ.ತೆಲಂಗಾಣದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರ ಕಚೇರಿ ಶನಿವಾರ 79 ಆಸ್ಪತ್ರೆಗಳಿಗೆ ನೋಟಿಸ್ ನೀಡಿದೆ.

Last Updated : May 30, 2021, 04:42 PM IST
  • ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಪರೀತ ಬಿಲ್ಲಿಂಗ್ ಮಾಡಿದ್ದಕ್ಕಾಗಿ ರೋಗಿಗಳು ದೂರು ನೀಡಿರುವ ಹಿನ್ನಲೆಯಲ್ಲಿ ಈಗ ತೆಲಂಗಾಣದಲ್ಲಿನ 10 ಆಸ್ಪತ್ರೆಗಳ ಪರವಾನಿಗೆಯನ್ನ ರದ್ದುಗೊಳಿಸಲಾಗಿದೆ.
  • ತೆಲಂಗಾಣದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರ ಕಚೇರಿ ಶನಿವಾರ 79 ಆಸ್ಪತ್ರೆಗಳಿಗೆ ನೋಟಿಸ್ ನೀಡಿದೆ.
ಕೊರೊನಾ ಚಿಕಿತ್ಸೆಗೆ ವಿಪರೀತ ಬಿಲ್ಲಿಂಗ್ ಮಾಡಿದ್ದಕ್ಕೆ 10 ಆಸ್ಪತ್ರೆಗಳ ಪರವಾನಿಗೆ ರದ್ದು..! title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದಂತೆ ವಿಪರೀತ ಬಿಲ್ಲಿಂಗ್  ಮಾಡಿದ್ದಕ್ಕಾಗಿ ರೋಗಿಗಳು ದೂರು ನೀಡಿರುವ ಹಿನ್ನಲೆಯಲ್ಲಿ ಈಗ ತೆಲಂಗಾಣದಲ್ಲಿನ 10 ಆಸ್ಪತ್ರೆಗಳ ಪರವಾನಿಗೆಯನ್ನ ರದ್ದುಗೊಳಿಸಲಾಗಿದೆ.ತೆಲಂಗಾಣದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರ ಕಚೇರಿ ಶನಿವಾರ 79 ಆಸ್ಪತ್ರೆಗಳಿಗೆ ನೋಟಿಸ್ ನೀಡಿದೆ.

ಪ್ರತಿ ದಿನಕ್ಕೆ ಒಂದು ಲಕ್ಷ ರೂ ಚಾರ್ಜ್ ಮಾಡಿದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಯಿಂದ ಸರ್ಕಾರಿ ಆಸ್ಪತ್ರೆಗೆ ಸಾಗಿಸಬೇಕಾಯಿತು.ತನ್ನ ಮನೆ ಮಾರಿದ ನಂತರವೂ ಸಹಿತ ತನಗೆ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ ಎಂದು ಮಹಿಳೆ ಹೇಳಿದ್ದಾರೆ."ನಾವು ಬಡವರು. ನಮಗೆ ಅದನ್ನು ಭರಿಸಲಾಗಲಿಲ್ಲ. ಹಾಗಾಗಿ ನಾನು ಅವನನ್ನು ಇಲ್ಲಿಗೆ ಸ್ಥಳಾಂತರಿಸಿದೆ" ಎಂದು ಪೊಚಮ್ಮ ಹೇಳಿದರು.

ಇದನ್ನೂ ಓದಿ: ದೆಹಲಿಯಲ್ಲಿ ಜೂನ್ 7 ರವರೆಗೆ ಲಾಕ್ ಡೌನ್ ವಿಸ್ತರಣೆ

ತೆಲಂಗಾಣ ಸರ್ಕಾರವು ವಿವಿಧ COVID-19 ಚಿಕಿತ್ಸಾ ಪ್ರೋಟೋಕಾಲ್‌ಗಳಿಗಾಗಿ ಆಸ್ಪತ್ರೆಗಳಿಂದ ವಿಧಿಸಬೇಕಾದ ದರವನ್ನು ನಿಗದಿಪಡಿಸಿದೆ. ಆದಾಗ್ಯೂ, ಆಸ್ಪತ್ರೆಗಳು ಇದನ್ನು ಉಲ್ಲಂಘಿಸುತ್ತಿರುವುದು ಕಂಡುಬರುತ್ತದೆ.ವೈದ್ಯಕೀಯ ನಿರ್ಲಕ್ಷ್ಯದ ದೂರಿನ ಮೇರೆಗೆ ವಿರಿಂಚಿ ಆಸ್ಪತ್ರೆಗಳು ಎರಡನೇ ಬಾರಿಗೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ಪರವಾನಗಿಯನ್ನು ಕಳೆದುಕೊಂಡಿವೆ.

ಗುರುವಾರ, ರೋಗಿಯ ಸಂಬಂಧಿಕರು ಆಸ್ಪತ್ರೆಗೆ ಅಡ್ಡಾದಿಡ್ಡಿಯಾಗಿ 35 ವರ್ಷದ ಕೋವಿಡ್ ರೋಗಿಯಾದ ವಂಸಿ ಕೃಷ್ಣನಿಗೆ ಚಿಕಿತ್ಸೆ ನೀಡಿದ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅವರು ಎರಡು ವಾರಗಳ ನಂತರ ಅದೇ ಆಸ್ಪತ್ರೆಯಲ್ಲಿ ನಿಧನರಾದರು.

ಇದನ್ನೂ ಓದಿ: Black Fungus ಬಳಿಕ ಇದೀಗ ಕೋರೋನಾ ರೋಗಿಗಳ ಮೇಲೆ ಮತ್ತೊಂದು ಕಾಯಿಲೆಯ ದಾಳಿ

"ನನ್ನ ಸಹೋದರನಿಗೆ ಸೌಮ್ಯವಾದ ಕಾಯಿಲೆ ಇದ್ದಾಗ ಅವರು ಬಲವಾದ ಸ್ಟೀರಾಯ್ಡ್ಗಳು, ತಪ್ಪು ಔಷಧಿಗಳನ್ನು ಏಕೆ ನೀಡಿದರು? ನಮ್ಮ ಹಣವನ್ನು ಹಿಂದಿರುಗಿಸಲು ಅವರು ಯಾಕೆ ಮುಂದಾದರು?" ಎಂದು ವಂಶಿ ಕೃಷ್ಣನ ಸಹೋದರಿ ಶಶಿ ವಂಗಲಾ ಕೇಳಿದರು. ವೈದ್ಯರ ಮೇಲೆ ಹಲ್ಲೆ ನಡೆಸಿದ 16 ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News