ನವದೆಹಲಿ: ಸೋಮವಾರ ಆದಾಯ ತೆರಿಗೆ (ಐಟಿ) ಇಲಾಖೆಯು ತಮಿಳುನಾಡಿನ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಸಂಸ್ಥೆಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ ಮಾಡಿ 163 ಕೋಟಿ ರೂ. ನಗದು ಮತ್ತು 100 ಕೆಜಿ ಚಿನ್ನದ ಬಿಸ್ಕಿಟ್ ಬಾರ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
Gold biscuits weighing around 100 kg and Rs 163 crore in cash that is suspected to be unaccounted, seized by the Income Tax department from 20 locations of SPK company in Madurai, Aruppukkottai, Vellore and Chennai. Raids started y'day, still underway at few locations. #TamilNadu pic.twitter.com/LY5fgyS9TM
— ANI (@ANI) July 17, 2018
ಚೆನ್ನೈ, ಮಧುರೈ ಮತ್ತು ಅರುಪ್ಕೊಟ್ಟೈಯಲ್ಲಿ ಕಚೇರಿಗಳಲ್ಲಿ ದಾಳಿ ಕಾರ್ಯಾಚರಣೆ ನಡೆಸಿ ಐಟಿ ಇಲಾಖೆ ಭಾರಿ ಪ್ರಮಾಣದ ಚಿನ್ನ ಮತ್ತು ನಗದನ್ನು ವಶಪಡಿಸಿಕೊಂಡಿದೆ.
ಐಟಿ ಇಲಾಖೆ ಅಧಿಕಾರಿಗಳು ಹೇಳುವಂತೆ ಇಲ್ಲಿಯವರೆಗೆ ದೇಶದಲ್ಲಿ ನಡೆದ ದಾಳಿ ಕಾರ್ಯಾಚರಣೆಯಲ್ಲಿ ಸಿಕ್ಕಂತಹ ಅತಿ ದೊಡ್ಡ ಮೊತ್ತ ಎಂದು ತಿಳಿಸಿದ್ದಾರೆ.