ಗುಜರಾತ್‌ನ ಪೋರ್ಬಂದರ್‌ನಲ್ಲಿ ಭಾರತೀಯ ನೌಕಾಪಡೆಯ 16 ತರಬೇತಿ ನಾವಿಕರಿಗೆ COVID-19 ಪಾಸಿಟಿವ್

ಪೋರ್ಬಂದರ್ ನೌಕಾ ನೆಲೆಯಲ್ಲಿ ಮೊದಲಿಗೆ ಎಂಟು ತರಬೇತಿ ನಾವಿಕರಿಗೆ ಕರೋನವೈರಸ್ ಪಾಸಿಟಿವ್  ದೃಢಪಟ್ಟಿತ್ತು.  

Last Updated : Jun 6, 2020, 10:59 AM IST
ಗುಜರಾತ್‌ನ ಪೋರ್ಬಂದರ್‌ನಲ್ಲಿ ಭಾರತೀಯ ನೌಕಾಪಡೆಯ 16 ತರಬೇತಿ ನಾವಿಕರಿಗೆ COVID-19 ಪಾಸಿಟಿವ್

ಅಹಮದಾಬಾದ್: ಕಳೆದ ನಾಲ್ಕು ದಿನಗಳಲ್ಲಿ ಗುಜರಾತ್‌ನ ಪೋರ್ಬಂದರ್‌ನ ನೌಕಾ ನೆಲೆಯಲ್ಲಿ ಭಾರತೀಯ ನೌಕಾಪಡೆಯ 16 ತರಬೇತಿ ನಾವಿಕರರಿಗೆ  ಕರೋನಾವೈರಸ್ (Coronavirus) COVID-19 ಪಾಸಿಟಿವ್ ದೃಢಪಟ್ಟಿದೆ. 

ಪೋರ್ಬಂದರ್‌ನಲ್ಲಿರುವ ನಾವಿಕರಿಗೆ ಮಿಲಿಟರಿ ಆಸ್ಪತ್ರೆ ಇಲ್ಲದಿರುವುದರಿಂದ ಅವರೆಲ್ಲರನ್ನೂ ಜಮ್ನಗರದಲ್ಲಿ ಇರುವ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ರಕ್ಷಣಾ ವಕ್ತಾರ ಪುನೀತ್ ಚಾಧಾ ತಿಳಿಸಿದ್ದಾರೆ.

ಪೋರ್ಬಂದರ್ ನೌಕಾ ನೆಲೆಯಲ್ಲಿ ಮೊದಲಿಗೆ ಎಂಟು ತರಬೇತಿ ನಾವಿಕರಿಗೆ ಕರೋನವೈರಸ್  ಕೋವಿಡ್-19 (COVID-19) ಪಾಸಿಟಿವ್  ದೃಢಪಟ್ಟಿತ್ತು. ಮೊದಲಿಗೆ ಅವರನ್ನು ಪೋರ್ಬಂದರ್ ನೌಕಾ ನೆಲೆಯಲ್ಲಿ ಇರಿಸಲಾಯಿತು. ನಂತರ ಅವರನ್ನು ಜಮ್ನಗರ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದರು.

ತರಬೇತಿ ನಾವಿಕರಿಗೆ ಕರೋನವೈರಸ್ ದೃಢಪಟ್ಟ ನಂತರ ಆರೋಗ್ಯ ಅಧಿಕಾರಿಗಳು ಬೇಸ್ನಿಂದ  ಇನ್ನೂ ಕೆಲವು ಮಾದರಿಗಳನ್ನು ಸಂಗ್ರಹಿಸಿದರು ಮತ್ತು ಎರಡು ದಿನಗಳ ಹಿಂದೆ ಮತ್ತೆ ಎಂಟು ನಾವಿಕರು ಸೋಂಕಿಗೆ ಒಳಗಾಗಿದ್ದಾರೆ. ಇವರೆಲ್ಲರನ್ನೂ ಚಿಕಿತ್ಸೆಗಾಗಿ ಜಮ್‌ನಗರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಲಾಗಿದೆ.

More Stories

Trending News