Special Train: ಶಿವಮೊಗ್ಗ- ಚೆನ್ನೈ ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ

Special Train: ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

Written by - Puttaraj K Alur | Last Updated : Jul 6, 2024, 05:07 PM IST
  • ಶಿವಮೊಗ್ಗ-ಚೆನ್ನೈ ನಡುವೆ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಚಾರ
  • ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ
  • ತುಮಕೂರು ಭಾಗದ ಜನರಿಗೆ ಚೆನ್ನೈಗೆ ನೇರ ಪ್ರಯಾಣ ಬೆಳೆಸುವ ಅವಕಾಶ ದೊರೆತಂತಾಗಿದೆ
Special Train: ಶಿವಮೊಗ್ಗ- ಚೆನ್ನೈ ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ title=
ಶಿವಮೊಗ್ಗ-ಚೆನ್ನೈ ನಡುವೆ ವಿಶೇಷ ರೈಲು!

Special Train for Karnataka: ರಾಜ್ಯದಲ್ಲಿ ಮತ್ತೊಂದು ವಿಶೇಷ ರೈಲು ಸಂಚಾರ ನಡೆಸಲಿದೆ. ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಶಿವಮೊಗ್ಗ- ಚೆನ್ನೈ ನಡುವೆ ಸಂಚಾರ ಆರಂಭಿಸಲಿದೆ.

ಈ ಬಗ್ಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಮಾಹಿತಿ ನೀಡಿದ್ದಾರೆ. ಚೆನ್ನೈ ಮತ್ತು ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 12691/2 ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಚೆನ್ನೈ ಮತ್ತು ಶಿವಮೊಗ್ಗ ನಡುವೆ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ: Daily GK Quiz: ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು?

ಈ ಮೂಲಕ ತುಮಕೂರು ಭಾಗದ ಜನರಿಗೆ ಚೆನ್ನೈಗೆ ನೇರ ಪ್ರಯಾಣ ಬೆಳೆಸುವ ಅವಕಾಶ ದೊರೆತಂತಾಗಿದೆ. ಈ ರೈಲನ್ನು ತುಮಕೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿಯಲ್ಲಿ ನಿಲುಗಡೆ ಮಾಡಲಾಗುವುದು. 

ಚೆನ್ನೈನಿಂದ ಪ್ರತಿ ಶುಕ್ರವಾರ ರಾತ್ರಿ 11.30ಕ್ಕೆ ನಿರ್ಗಮಿಸುವ ಈ ರೈಲು ಶನಿವಾರ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಪ್ರತಿ ಶನಿವಾರ ಸಂಜೆ 4 ಗಂಟೆಗೆ ಹೊರಡುವ ರೈಲು ಬೆಳಗಿನ ಜಾವ 4.55ಕ್ಕೆ ಚೆನ್ನೈ ತಲುಪಲಿದೆ ಎಂದು ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಇದನ್ನೂ ಓದಿ: ತಿರುಪತಿ ಭಕ್ತರಿಗೆ ಸಿಹಿ ಸುದ್ದಿ..! ಮಕ್ಕಳಿಗೆ ತಿಮ್ಮಪ್ಪನ ದರ್ಶನ ಉಚಿತ.. ವಯಸ್ಸು ಇಷ್ಟಾಗಿರಬೇಕು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News