ಶ್ರೀನಗರದ ಕಾಶ್ಮೀರ ವಿವಿ ಗೇಟ್ ಬಳಿ ಸ್ಪೋಟ, ಇಬ್ಬರಿಗೆ ಗಾಯ

ಶ್ರೀನಗರದ ಕಾಶ್ಮೀರ ವಿಶ್ವವಿದ್ಯಾಲಯದ ಗೇಟ್ ಹೊರಗೆ ನಡೆದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ. 

Updated: Nov 26, 2019 , 02:45 PM IST
ಶ್ರೀನಗರದ ಕಾಶ್ಮೀರ ವಿವಿ ಗೇಟ್ ಬಳಿ ಸ್ಪೋಟ, ಇಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ

ನವದೆಹಲಿ: ಶ್ರೀನಗರದ ಕಾಶ್ಮೀರ ವಿಶ್ವವಿದ್ಯಾಲಯದ ಗೇಟ್ ಹೊರಗೆ ನಡೆದ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ. 

ಸ್ಫೋಟದ ಸ್ವರೂಪವನ್ನು ಗ್ರೆನೇಡ್ ಅಥವಾ ಪೆಟ್ರೋಲ್ ಬಾಂಬ್ ಆಗಿರಬಹುದು ಎಂದು ಅವರು ಖಚಿತಪಡಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಗ್ರೆನೇಡ್ ಸ್ಫೋಟ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈಗ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.