Taliban rule: 24 ಗಂಟೆ ಚಿತ್ರಹಿಂಸೆ, ತಾಲಿಬಾನ್ ವಶದಲ್ಲಿದ್ದ WION ವರದಿಗಾರ ಅನಾಸ್ ಮಲಿಕ್‌ಗೆ ಏನಾಯಿತು?

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಜಾರಿಗೆ ಬಂದು 1 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಅನಾಸ್ ಮಲಿಕ್‍ ಮತ್ತು ತಂಡವು ವರದಿಗಾಗಿ ಕಾಬೂಲ್‍ಗೆ ತೆರಳಿತ್ತು.

Written by - Puttaraj K Alur | Last Updated : Aug 6, 2022, 07:47 AM IST
  • ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ವರದಿ ಮಾಡುತ್ತಿದ್ದ WION ವರದಿಗಾರ ಅನಾಸ್ ಮಲಿಕ್ ಕಿಡ್ನಾಪ್
  • ಕಣ್ಣಿಗೆ ಬಟ್ಟೆ, ಕೈ ಕಟ್ಟಿ 24 ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ ತಾಲಿಬಾನಿಗಳು
  • ಅಮೆರಿಕದಿಂದ ಅಂತಾರಾಷ್ಟ್ರೀಯ ಒಪ್ಪಂದ ಉಲ್ಲಂಘಟನೆ ಎಂದು ತಾಲಿಬಾನ್ ಆಕ್ರೋಶ

Trending Photos

Taliban rule: 24 ಗಂಟೆ ಚಿತ್ರಹಿಂಸೆ, ತಾಲಿಬಾನ್ ವಶದಲ್ಲಿದ್ದ WION ವರದಿಗಾರ ಅನಾಸ್ ಮಲಿಕ್‌ಗೆ ಏನಾಯಿತು? title=
WION ವರದಿಗಾರ ಅನಾಸ್ ಮಲಿಕ್ ಕಿಡ್ನಾಪ್!

ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಗುರುವಾರ ವರದಿ ಮಾಡುತ್ತಿದ್ದಾಗ ನಮ್ಮ ಸಹವರ್ತಿ ಚಾನೆಲ್ WION ವರದಿಗಾರ ಅನಾಸ್ ಮಲಿಕ್ ಮತ್ತು ಅವರ ತಂಡದ ಮೇಲೆ ತಾಲಿಬಾನ್ ದಾಳಿ ನಡೆಸಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಜಾರಿಗೆ ಬಂದು 1 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ಅನಾಸ್ ಮಲಿಕ್‍ ಮತ್ತು ತಂಡವು ವರದಿಗಾಗಿ ಕಾಬೂಲ್‍ಗೆ ತೆರಳಿತ್ತು. ಈ ವೇಳೆ ತಂಡದ ಸದಸ್ಯರನ್ನು ಕಾರಿನಿಂದ ಹೊರಗೆಳೆದ ತಾಲಿಬಾನ್ ಉಗ್ರರು ಥಳಿಸಿದ್ದಾರೆ. ಆದರೆ, ಇದೀಗ ಅನಾಸ್ ಮಲಿಕ್ ಸಂಪೂರ್ಣ ಸೇಫ್ ಆಗಿದ್ದು, ಘಟನೆಯ ಬಗ್ಗೆ ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ 1 ವರ್ಷದ ಆಳ್ವಿಕೆ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಜಾರಿಗೆ ಬಂದು 1 ವರ್ಷ ಪೂರ್ಣವಾದ ಹಿನ್ನೆಲೆ ಅನಾಸ್ ಮತ್ತು ಟೀಂ ಬುಧವಾರ ಕಾಬೂಲ್ ತಲುಪಿತ್ತು. ಈ ವೇಳೆ ಅವರು ಅಲ್-ಖೈದಾ ನಾಯಕ ಅಲ್-ಜವಾಹಿರಿಯ ಹತ್ಯೆಯ ಬಗ್ಗೆ ಕಾಬೂಲ್‌ನಿಂದ ಅಪ್‍ಡೇಟ್‍ ನೀಡುತ್ತಿದ್ದರು. ಇದನ್ನು ಗಮನಿಸಿದ ತಾಲಿಬಾನ್ ಉಗ್ರರು ಅನಾಸ್ ಮಲಿಕ್‍ ಮತ್ತು ಅವರ ತಂಡದ ಮೇಲೆ ಏಕಾಏಕಿ ದಾಳಿ ನಡೆಸಿದರು.

ಇದನ್ನೂ ಓದಿ: Fake Stamp Paper Scam : ಬೆಂಗಳೂರಲ್ಲಿ 1.33 ಕೋಟಿ ಮೌಲ್ಯದ ನಕಲಿ ಛಾಪಾ ಕಾಗದ ಹಗರಣ ಬೆಳಕಿಗೆ!

ಅಮೆರಿಕ ಡ್ರೋನ್ ದಾಳಿಗೆ ಜವಾಹಿರಿ ಬಲಿ!

ಅಲ್-ಖೈದಾ ಮುಖ್ಯಸ್ಥ ಅಲ್-ಜವಾಹಿರಿ ಡ್ರೋನ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾನೆ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ಅಫ್ಘಾನಿಸ್ತಾನದಲ್ಲಿ ಜವಾಹಿರಿ ಇರುವಿಕೆಯ ಬಗ್ಗೆ ತಮಗೆ ಮಾಹಿತಿ ಇಲ್ಲವೆಂದು ತಾಲಿಬಾನ್ ಹೇಳಿಕೊಂಡಿದೆ. ತನ್ನ ಭೂಪ್ರದೇಶದಲ್ಲಿನ ದಾಳಿಗೆ ಸಂಬಂಧಿಸಿದಂತೆ ಅಮೆರಿಕವು ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ ಮಾಡುತ್ತಿದೆ ಎಂದು ತಾಲಿಬಾನ್ ಆರೋಪಿಸಿದೆ. ಆದರೆ ಈ ಘಟನೆ ನಂತರ ತಾಲಿಬಾನಿಗಳಿಗೆ ತಮ್ಮ ಸತ್ಯ ಪ್ರಪಂಚದ ಮುಂದೆ ಬರಲು ಇಷ್ಟಪಟ್ಟಿಲ್ಲ. ಹೀಗಾಗಿಯೇ ಅವರು ಕಾಬೂಲ್‌ನಲ್ಲಿ WION ಚಾನೆಲ್‌ಗಾಗಿ ವರದಿ ಮಾಡುತ್ತಿದ್ದ ಅನಾಸ್ ಮಲಿಕ್ ಅವರನ್ನು ಅಪಹರಿಸಿದ್ದಾರೆ. ಜವಾಹಿರಿ ಹತ್ಯೆಯ ಎಲ್ಲಾ ಬೆಳವಣಿಗೆಗಳ ಬಗ್ಗೆ WION ವರದಿ ಮಾಡಿದೆ. ಆದರೆ ಕಾಬೂಲ್‌ನಲ್ಲಿ ಗ್ರೌಂಡ್ ರಿಪೋರ್ಟಿಂಗ್‌ಗಾಗಿ ತೆರಳಿದ್ದ ಮಲಿಕ್ ಮತ್ತವರ ತಂಡದ ಮೇಲೆ ತಾಲಿಬಾನಿಗಳು ಹಲ್ಲೆ ನಡೆಸಿದ್ದಾರೆ.    

ಕಣ್ಣಿಗೆ ಬಟ್ಟೆ, ಕೈಕಟ್ಟಿ ಹಲ್ಲೆ..!

ವರದಿ ಮಾಡುತ್ತಿದ್ದ ಅನಾಸ್ ಮಲಿಕ್‍ ನಮ್ಮ ಬಳಿ ಎಲ್ಲಾ ಅಗತ್ಯ ಅನುಮತಿ ಮತ್ತು ದಾಖಲೆಗಳಿವೆ ಎಂದು ತಾಲಿಬಾನಿಗಳಿಗೆ ಹೇಳಿದ್ದರು. ಇದಕ್ಕೆ ಕ್ಯಾರೆ ಅನ್ನದ ತಾಲಿಬಾನ್‍ಗಳು ಮಲಿಕ್ ಮತ್ತವರ ತಂಡದ ಸದಸ್ಯರನ್ನು ಥಳಿಸಿದ್ದಾರೆ. ‘ಕಾಬೂಲ್‍ಗೆ ತೆರಳಿದ ಬಳಿಕ ನಾವು ವರದಿ ಮಾಡುತ್ತಿದ್ದೇವು. ಈ ವೇಳೆ ನಮ್ಮನ್ನು ತಡೆದು ಕಾರಿನಿಂದ ಎಳೆದೊಯ್ಯಲಾಯಿತು. ನಮ್ಮ ಮೊಬೈಲ್‌ ಫೋನ್‌ಗಳನ್ನೂ ಕಸಿದುಕೊಳ್ಳಲಾಯಿತು. ನಮ್ಮ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಟ್ಟಿ ದೈಹಿಕವಾಗಿ ಹಿಂಸಿಸಲಾಯಿತು. ಸ್ವಲ್ಪ ಸಮಯದ ನಂತರ ನಮ್ಮನ್ನು ಆ ಸ್ಥಳದಿಂದ ಕರೆದೊಯ್ದು ಆಫ್ಘನ್-ತಾಲಿಬಾನ್ ಗುಪ್ತಚರ ಘಟಕದ ಮುಂದೆ ಹಾಜರುಪಡಿಸಲಾಯಿತು ಎಂದು ಮಲಿಕ್ ಹೇಳಿದ್ದಾರೆ.

ಇದನ್ನೂ ಓದಿ: ಹಣದುಬ್ಬರ-ಜಿಎಸ್‌ಟಿ ವಿರುದ್ಧ ರಸ್ತೆಗಿಳಿದ ಕಾಂಗ್ರೆಸ್‌: ರಾಹುಲ್-ಪ್ರಿಯಾಂಕಾ ಪೊಲೀಸ್‌ ವಶಕ್ಕೆ

 24 ಗಂಟೆ ತಾಲಿಬಾನ್ ಕಸ್ಟಡಿಯಲ್ಲಿ!

ತಾಲಿಬಾನ್ ಕಸ್ಟಡಿಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಅನಾಸ್ ಮಲಿಕ್ ಮತ್ತು ಅವರ ತಂಡದ ಸದಸ್ಯರ ಕೈಗಳನ್ನು ಹಗ್ಗದಿಂದ ಕಟ್ಟಲಾಗಿತ್ತು. ಅಲ್ಲದೆ ಎಲ್ಲರ ಕಣ್ಣಿಗೂ ಬಟ್ಟೆಯನ್ನು ಕಟ್ಟಲಾಗಿತ್ತು. ಈ ವೇಳೆ ಅನಾಸ್ ಅವರ ವರದಿಗಾರಿಕೆಯ ಬಗ್ಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಲಾಗಿತ್ತು. ವರದಿಗಾರಿಕೆಗೆ ತೆರಳಿದ್ದ ತಂಡದ ವಿರುದ್ಧ ಹಲವಾರು ಆರೋಪಗಳನ್ನು ಕೂಡ ಮಾಡಲಾಗಿದೆ. ಇದರೊಂದಿಗೆ ತಾಲಿಬಾನಿಗಳು ಹಲವು ವೈಯಕ್ತಿಕ ಪ್ರಶ್ನೆಗಳನ್ನೂ ಕೇಳಿದ್ದಾರೆಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News