ನವದೆಹಲಿ: ತೆಲಂಗಾಣ ಸರ್ಕಾರ ನಡೆಸುತ್ತಿರುವ ಶಾಲೆಯಲ್ಲಿ ಮಧ್ಯಾಹ್ನದ ಊಟ ಮಾಡಿದ ನಂತರ ಶುಕ್ರವಾರ 32 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
ಇದನ್ನೂ ಓದಿ-Corona Vaccine: ಈ ಲಸಿಕೆಯಿಂದ ಎಚ್‌ಐವಿ ಅಪಾಯವಿದೆಯೇ? ದಕ್ಷಿಣ ಆಫ್ರಿಕಾದ ನಂತರ, ನಮೀಬಿಯಾದಲ್ಲಿ ಲಸಿಕೆ ನಿಷೇಧ
ನಿರ್ಮಲ್ ಜಿಲ್ಲೆಯ ದಿಮ್ಮದುರ್ಗಿ ಗ್ರಾಮದ ಮಂಡಲ ಪರಿಷತ್ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 114 ವಿದ್ಯಾರ್ಥಿಗಳು ಊಟ ಸೇವಿಸಿದ್ದು, 32 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ (ಡಿಇಒ) ಡಾ.ಎ.ರವೀಂದರ್ ರೆಡ್ಡಿ ತಿಳಿಸಿದ್ದಾರೆ.ಕೂಡಲೇ 32 ಮಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಅವರಲ್ಲಿ 12 ವಿದ್ಯಾರ್ಥಿಗಳು ನಿಗಾದಲ್ಲಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಡಿಇಒ ತಿಳಿಸಿದ್ದಾರೆ.
ಡಿಇಒ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಮುಷರಫ್ ಫಾರೂಕಿ ಶಾಲಾ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿದ್ದಾರೆ.ಊಟ ಸರಬರಾಜು ಮಾಡಿದ ಏಜೆನ್ಸಿಗೆ ನೀಡಿದ್ದ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ ಎಂದು ಡಿಇಒ ತಿಳಿಸಿದರು
ಇದನ್ನೂ ಓದಿ: Punjab Congress Crisis: ರಾಹುಲ್ ಗಾಂಧಿ ಭೇಟಿಯಾದ ನವಜೋತ್ ಸಿಂಗ್ ಸಿಧು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ