ಶ್ರೀನಗರ: ಪಾಕಿಸ್ತಾನದ ಭಯೋತ್ಪಾದಕರು ಲೈನ್ ಆಫ್ ಕಂಟ್ರೋಲ್(LoC) ಬಳಿ ಒಳನುಸುಳುವಿಕೆಯ ಪ್ರಮುಖ ಪಿತೂರಿಯನ್ನು ಭಾರತೀಯ ಸೇನೆ ವಿಫಲಗೊಳಿಸಿದೆ. ಜುಲೈ 30 ರಂದು ಈ ಒಳನುಸುಳುವ ಪ್ರಯತ್ನವನ್ನು ಮಾಡಲಾಯಿತು. LoC ಬಳಿಯ ಕುಪ್ವಾರಾ ವಲಯದಲ್ಲಿ ಉಗ್ರರು ನುಸುಳಲು ಮಾಡುತ್ತಿರುವ ವಿಫಲ ಪ್ರಯತ್ನದ ವಿಡಿಯೋವೊಂದು ಬೆಳಕಿಗೆ ಬಂದಿದೆ.
ಭಯೋತ್ಪಾದಕರ ಈ ದುಷ್ಕೃತ್ಯದ ಒಂದು ನೋಟವನ್ನು ಭಾರತೀಯ ಸೇನೆಯು ಪಡೆದುಕೊಂಡಿದೆ. ಇದರ ನಂತರ, ಭಾರತೀಯ ಸೇನೆಯು ಗುಂಡು ಹಾರಿಸಲು ಪ್ರಾರಂಭಿಸಿದ್ದು, ಗಡಿ ಒಳನುಗ್ಗುವ ಪ್ರಯತ್ನದಲ್ಲಿದ್ದ ಉಗ್ರರು ಹಿಂದಿರುಗಿದ್ದಾರೆ.
Indian Army detected Pakistani terrorists near LoC in Kashmir’s Kupwara sector on 30 Jul.Indian troops started firing at them as soon as terrorists were detected&forced them to return to their territory.They were attempting to infiltrate&carry out attacks on Indian positions. pic.twitter.com/WlKT9VF6Cd
— ANI (@ANI) September 27, 2019
ಸೇನೆಯು ಭಯೋತ್ಪಾದಕರು ಗಡಿ ಪ್ರವೇಶಿಸಲು ಪ್ರಯತ್ನಿಸುತ್ತಿರುವುದು ತಿಳಿದ ತಕ್ಷಣವೇ ಸೈನ್ಯವು ಗುಂಡಿನ ಮಳೆಗೈದಿದೆ. ಇದರಿಂದಾಗಿ ಭಯೋತ್ಪಾದಕರು ಹಿಮ್ಮೆಟ್ಟಿದ್ದಾರೆ. ಭಾರತೀಯ ಪೋಸ್ಟ್‌ಗಳ ಮೇಲೆ ದಾಳಿ ಮಾಡಲು ಭಯೋತ್ಪಾದಕರು ಎಲ್‌ಒಸಿ ದಾಟಿ ಒಳನುಗ್ಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ.