ಕಾಂಗ್ರೆಸ್‌ಗೆ ಹರಿದು ಬಂತು 5 ಪಟ್ಟು ಹೆಚ್ಚು ದೇಣಿಗೆ; 55 ಕೋಟಿ ರೂ. ದೇಣಿಗೆ ನೀಡಿರೋರು ಯಾರ್ ಗೊತ್ತಾ?

ಬಿಜೆಪಿ ಇನ್ನೂ 2018-19ರ ವರದಿಯನ್ನು ಆಯೋಗಕ್ಕೆ ಸಲ್ಲಿಸಿಲ್ಲ, 2017-18 (ಕಳೆದ ವರ್ಷ) ಬಿಜೆಪಿಗೆ 1027 ಕೋಟಿ ರೂ. ದೇಣಿಗೆ ಬಂದಿದೆ.

Last Updated : Sep 16, 2019, 01:39 PM IST
ಕಾಂಗ್ರೆಸ್‌ಗೆ ಹರಿದು ಬಂತು 5 ಪಟ್ಟು ಹೆಚ್ಚು ದೇಣಿಗೆ; 55 ಕೋಟಿ ರೂ. ದೇಣಿಗೆ ನೀಡಿರೋರು ಯಾರ್ ಗೊತ್ತಾ? title=

ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ತೀವ್ರ ಸೋಲನ್ನು ಅನುಭವಿಸಿದ ಆಘಾತದಿಂದ ಚೇತರಿಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ದೇಣಿಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಳ ಕಂಡಿದೆ. ಚುನಾವಣಾ ಆಯೋಗಕ್ಕೆ ನೀಡಿರುವ ಮಾಹಿತಿಯ ಪ್ರಕಾರ, ಚುನಾವಣಾ ವರ್ಷದಲ್ಲಿ (2018-19) ಕಾಂಗ್ರೆಸ್ ಹಿಂದಿನ ವರ್ಷಕ್ಕಿಂತ (2017-18) ಹೆಚ್ಚಿನ ಅನುದಾನವನ್ನು (ದೇಣಿಗೆ) ಪಡೆದಿದೆ. 2017-18ಕ್ಕೆ ಹೋಲಿಸಿದರೆ 2018-19ರಲ್ಲಿ ಕಾಂಗ್ರೆಸ್ ಚುನಾವಣಾ ದೇಣಿಗೆಯಲ್ಲಿ 5 ಪಟ್ಟು ಹೆಚ್ಚಳವಾಗಿದೆ.

ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ  57 ಪುಟಗಳ ಅನುದಾನ ವರದಿ ಸಲ್ಲಿಸಿದೆ. 2017-18ರಲ್ಲಿ 26 ಕೋಟಿ ರೂ. ದೇಣಿಗೆ ಸ್ವೀಕರಿಸಿದ್ದ ಕಾಂಗ್ರೆಸ್, 2018-19ರಲ್ಲಿ 146 ಕೋಟಿ ರೂ. ದೇಣಿಗೆ ಸ್ವೀಕರಿಸಿದೆ ಎಂದು ತಿಳಿದುಬಂದಿದೆ.

ಆದರೆ, ಕಾಂಗ್ರೆಸ್ ಇನ್ನೂ ಬಿಜೆಪಿಗಿಂತ ಹಿಂದುಳಿದಿದೆ. ಬಿಜೆಪಿ ಇನ್ನೂ 2018-19ರ ವರದಿಯನ್ನು ಆಯೋಗಕ್ಕೆ ಸಲ್ಲಿಸಿಲ್ಲ, ಆದರೆ 2017-18ರಲ್ಲಿ (ಕಳೆದ ವರ್ಷ) ಬಿಜೆಪಿಗೆ 1027 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿದೆ. 

ಕಾಂಗ್ರೆಸ್ ಪಕ್ಷಕ್ಕೆ ಪಕ್ಷದ ಮುಖಂಡರು ಕೂಡ ದೇಣಿಗೆ ನೀಡಿದ್ದು, ಇದರಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕಪಿಲ್ ಸಿಬಲ್, ಮನೀಶ್ ತಿವಾರಿ, ಸುಷ್ಮಿತಾ ದೇವ್, ದಿಗ್ವಿಜಯ್ ಸಿಂಗ್, ಕುಮಾರಿ ಸೆಲ್ಜಾ ಅವರ ಅನೇಕ ನಾಯಕರು ಸೇರಿದ್ದಾರೆ.

ಸೋನಿಯಾ, ರಾಹುಲ್, ದಿಗ್ವಿಜಯ್ ಸಿಂಗ್ 54,000 ರೂ., ಸಿಬಲ್ 100,000 ರೂ., ಸುಷ್ಮಿತಾ ದೇವ್ 2,00,000 ರೂ. ನೀಡಿದ್ದಾರೆ. ಕಾಂಗ್ರೆಸ್ ಸ್ವೀಕರಿಸಿರುವ ಒಟ್ಟು 146 ಕೋಟಿ ರೂ. ದೇಣಿಯಲ್ಲಿ ಪ್ರೋಗ್ರೆಸಿವ್ ಎಲೆಕ್ಟ್ರೋಲ್ ಟ್ರಸ್ಟ್ ಎಲ್ಲರಿಗಿಂತ ಹೆಚ್ಚು 55 ಕೋಟಿ ರೂ. ದೇಣಿಗೆ ನೀಡಿದೆ.

Trending News