ಛತ್ತೀಸ್ಗರ್ : ಗುಂಡಿನ ದಾಳಿಯಲ್ಲಿ 7 ನಕ್ಸಲರ ಹತ್ಯೆ

  

Last Updated : Jul 19, 2018, 12:48 PM IST
ಛತ್ತೀಸ್ಗರ್ : ಗುಂಡಿನ ದಾಳಿಯಲ್ಲಿ 7 ನಕ್ಸಲರ ಹತ್ಯೆ title=

ದಾಂತೇವಾಡ: ಭದ್ರತಾ ಪಡೆಗಳು ನಡೆಸಿದ ಎನ್'ಕೌಂಟರ್ನಲ್ಲಿ ಮೂವರು ಮಹಿಳೆಯರೂ ಸೇರಿದಂತೆ 7 ನಕ್ಸಲರನ್ನು ಮೃತಪಟ್ಟಿರುವ ಘಟನೆ ದಾಂತೇವಾಡಾ-ಬಿಜಾಪುರ ಗಡಿಭಾಗದ ಟಿಮೆನಾರ್ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. 

ಹತ್ಯೆಯಾದ ನಕ್ಸಲರಿಂದ ಭದ್ರತಾ ಪಡೆಗಳು 2 ಐಎನ್ಎಸ್ಎಎಸ್ ರೈಫಲ್ ಗಳು, ಎರಡು 303 ರೈಫಲ್ ಗಳು ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಡಿಐಜಿ ಪಿ.ಸುಂದರ್ ರಾಜ್ ಅವರು ಹೇಳಿದ್ದಾರೆ. 
 

Trending News