JCB ಇರಲಿ, ಕ್ರೇನ್ ಇರಲಿ 11 ಬಗೆಯ ವಾಹನ ಓಡಿಸುವುದರಲ್ಲಿ ನಿಪುಣರು71 ವರ್ಷದ ಈ ಅಜ್ಜಿ!

ರಾಧಾಮಣಿ ತಮ್ಮ 30ನೇ ವಯಸ್ಸಿನಲ್ಲಿ ಡ್ರೈವಿಂಗ್ ಕಲಿತರು. ತಂದೆಯಿಂದ ವಾಹನ ಓಡಿಸುವ ತರಬೇತಿ ಪಡೆದ ಅವರು ಅಂದಿನಿಂದ ವಾಹನ ಚಲಾಯಿಸುವ ಹವ್ಯಾಸ ರೂಢಿಸಿಕೊಂಡರು.

Written by - Puttaraj K Alur | Last Updated : Mar 12, 2022, 02:41 PM IST
  • ಕ್ರೇನ್‌, ರೋಡ್‌ ರೋಲರ್‌ಗಳಿಂದ ಹಿಡಿದು ಟ್ರಕ್‌, ಟ್ರ್ಯಾಕ್ಟರ್‌ಗಳನ್ನು ಓಡಿಸುವ 71ರ ಅಜ್ಜಿ
  • ವಿವಿಧ ರೀತಿಯ ವಾಹನ ಓಡಿಸುವ ರಾಧಾಮಣಿಯವರು 11 ವಾಹನಗಳ ಪರವಾನಗಿ ಹೊಂದಿದ್ದಾರೆ
  • ತಂದೆಯಿಂದ ತರಬೇತಿ ಪಡೆದುಕೊಂಡ ರಾಧಾಮಣಿಯವರು 30ನೇ ವಯಸ್ಸಿಗೆ ಡ್ರೈವಿಂಗ್ ಕಲಿತರು
JCB ಇರಲಿ, ಕ್ರೇನ್ ಇರಲಿ 11 ಬಗೆಯ ವಾಹನ ಓಡಿಸುವುದರಲ್ಲಿ ನಿಪುಣರು71 ವರ್ಷದ ಈ ಅಜ್ಜಿ! title=
JCB, ಟ್ರಕ್‌, ಟ್ರ್ಯಾಕ್ಟರ್‌ಗಳನ್ನು ಓಡಿಸುವ 71ರ ಅಜ್ಜಿ

ನವದೆಹಲಿ: ಜನರು ವಿವಿಧ ರೀತಿಯ ಹವ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಕೆಲವರಿಗೆ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವಿದ್ದರೆ, ಇನ್ನು ಕೆಲವರಿಗೆ ದೇಶ-ವಿದೇಶ ಪ್ರವಾಸ ಮಾಡುವ ಹವ್ಯಾಸವಿರುತ್ತದೆ. ಆದರೆ ಕೇರಳದ 71 ವರ್ಷದ ಈ ಅಜ್ಜಿ(Kerala Vehicle Master)ಯ ಹವ್ಯಾಸವನ್ನು ಕೇಳಿದರೆ ನೀವು ನಿಜವಾಗಿಯೂ ಅಚ್ಚರಿಪಡುತ್ತೀರಿ.

ಹೌದು, ಈ ಅಜ್ಜಿ ವಿವಿಧ ರೀತಿಯಗಳ ವಾಹನಗಳನ್ನು ಓಡಿಸುವ ಹವ್ಯಾಸವನ್ನುರೂಢಿಸಿಕೊಂಡಿದ್ದಾರೆ. ಜೆಸಿಬಿಯಿಂದ ಹಿಡಿದು ಕ್ರೇನ್‌, ರೋಡ್‌ ರೋಲರ್‌ಗಳಿಂದ ಹಿಡಿದು ಟ್ರಕ್‌, ಟ್ರ್ಯಾಕ್ಟರ್‌ಗಳನ್ನು ಓಡಿಸುತ್ತಾರೆ. ಕೊಚ್ಚಿಯ ತೆಪ್ಪುಂಪಾಡಿ ನಿವಾಸಿ ರಾಧಾಮಣಿ ಅವರೇ ವಿವಿಧ ಮಾದರಿಗಳ ವಾಹನಗಳನ್ನು ಓಡಿಸುವ ಹವ್ಯಾಸವನ್ನು ಹೊಂದಿರುವರು. ಕೇವಲ ಹವ್ಯಾಸಿ ಮಾತ್ರವಲ್ಲದೆ ಈ ಎಲ್ಲಾ 11 ವಿವಿಧ ರೀತಿಯ ವಾಹನಗಳನ್ನು ಓಡಿಸಲು ಅವರು ಪರವಾನಗಿಯನ್ನೂ ಪಡೆದುಕೊಂಡಿದ್ದಾರೆ. 11 ವಿವಿಧ ವಾಹನ ಪರವಾನಗಿ(11 Driving License)ಗಳನ್ನು ಹೊಂದಿರುವ ಕೇರಳದ ಏಕೈಕ ಮಹಿಳೆ ರಾಧಾಮಣಿ ಆಗಿದ್ದಾರೆ.

ಇದನ್ನೂ ಓದಿ: Yogi Adityanath Resignation : ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ ಆದಿತ್ಯನಾಥ್!

1988ರಲ್ಲಿ ಮೊದಲ ಪರವಾನಗಿ ಸಿಕ್ಕಿತ್ತು

ರಾಧಾಮಣಿ(Radhamani) ತಮ್ಮ 30ನೇ ವಯಸ್ಸಿನಲ್ಲಿ ಡ್ರೈವಿಂಗ್ ಕಲಿತರು. ತಂದೆಯಿಂದ ವಾಹನ ಓಡಿಸುವ ತರಬೇತಿ ಪಡೆದ ಅವರು ಅಂದಿನಿಂದ ವಾಹನ ಚಲಾಯಿಸುವ ಹವ್ಯಾಸ ರೂಢಿಸಿಕೊಂಡರು. 1988ರಲ್ಲಿ ಅವರಿಗೆ ಬಸ್ ಮತ್ತು ಲಾರಿ ಓಡಿಸಲು ಪರವಾನಗಿ ನೀಡಲಾಯಿತು. ನಂತರ ಅವರು ತೆಪ್ಪುಂಪಾಡಿಯಿಂದ ಚೆರ್ತಾಲ ನಡುವೆ ಮೊದಲ ಬಾರಿಗೆ ಬಸ್ ಓಡಿಸಿದರು. ಈ ಸಾಧನೆ ಮಾಡಿ ಸಾರಿಗೆ ಇಲಾಖೆಯಿಂದ ಅಪಾರ ಮೆಚ್ಚುಗೆಗೆ ಪಾತ್ರರಾದರು. ಕಳೆದ ವರ್ಷವೇ ಅವರು ಸರಕುಗಳನ್ನು ಸಾಗಿಸುವ ಅಪಾಯಕಾರಿ ವಾಹನ ಓಡಿಸಲು ಪರವಾನಗಿ ಪಡೆದುಕೊಂಡರು.

A to Z ಡ್ರೈವಿಂಗ್ ಸ್ಕೂಲ್ ನಡೆಸುತ್ತಿರುವ ರಾಧಾಮಣಿ

ರಾಧಾಮಣಿಯವರಿಗೆ ಡ್ರೈವಿಂಗ್ ಮಾಡುವುದಷ್ಟೇ ಅಲ್ಲ, ಇತರರಿಗೆ ಡ್ರೈವಿಂಗ್ ಕಲಿಸುವುದೂ ಇಷ್ಟ. A to Z ಡ್ರೈವಿಂಗ್ ಸ್ಕೂಲ್(A To Z Driving School) ಅನ್ನು ಅವರ ಪತಿ 1970ರಲ್ಲಿ ಪ್ರಾರಂಭಿಸಿದ್ದರು. 2004ರಲ್ಲಿ ಅವರ ಮರಣದ ನಂತರ ರಾಧಾಮಣಿಯವರೇ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಇವರ ಡ್ರೈವಿಂಗ್ ಶಾಲೆಯಲ್ಲಿ ವಿವಿಧ ವಾಹನಗಳನ್ನು ಓಡಿಸಲು ತರಬೇತಿ ನೀಡಲಾಗುತ್ತದೆ. ಇದರ ಜೊತೆಗೆ ಅವರು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಾರೆ. ಇವರ ಇಡೀ ಕುಟುಂಬವೇ ಈಗ ಡ್ರೈವಿಂಗ್ ಸ್ಕೂಲ್(Driving School) ನಡೆಸುವುದರಲ್ಲಿ ರಾಧಾಮಣಿಯವರಿಗೆ ಸಹಾಯ ಮಾಡುತ್ತಿದೆ. ಈಗಲೂ ರಾಧಾಮಣಿಯವರು ತಮ್ಮ ಅಧ್ಯಯನವನ್ನು ಮುಂದುವರೆಸಿದ್ದಾರೆ. ಸದ್ಯ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ: DL ಸಂಬಂಧಿಸಿದ ಈ ಮಹತ್ವದ ಕೆಲಸ ನಾಳೆಯೊಳಗೆ ಪೂರ್ಣಗೊಳಿಸಿ, ಇಲ್ಲದಿದ್ದರೆ ಸಮಸ್ಯೆ ತಪ್ಪಿದಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News