ಒಡಿಸ್ಸಾ:75 ರ ವಯೋವೃದ್ದನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ

   

Last Updated : May 4, 2018, 08:09 PM IST
ಒಡಿಸ್ಸಾ:75 ರ ವಯೋವೃದ್ದನಿಂದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ title=

ಭುವನೇಶ್ವರ: ಒಡಿಶಾದ ಬಾಲಸೋರ್ ನಲ್ಲಿ ಅಪ್ರಾಪ್ತ ಬಾಲಕಿಗೆ 75 ವರ್ಷದ ವಯೋವೃದ್ದ ಲೈಂಗಿಕ ಕಿರುಕುಳ ನೀಡಿಡಿರುವ ಘಟನೆ ಬೆಳಕಿಗ ಬಂದಿದೆ.  

ಈ ಘಟನೆಯು ಬಾಲಸೋರ್ ಜಿಲ್ಲೆಯ ಸಾನಾ ಮಟಿಪುರ ಗ್ರಾಮದಲ್ಲಿ ನಡೆದಿದ್ದು, ಈಗಾಗಲೇ ಬಾಲಕಿಯ ಪೋಷಕರು ಈ ವೃದ್ದನ ವಿರುದ್ದ  ಸಿಮುಲಿಯಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಎಫ್ಐಆರ್ ಪ್ರಕಾರ, ವಯೋವೃದ್ದನ್ನು ಈ ಕೃತ್ಯವನ್ನು ತನ್ನ ಮನೆಯಲ್ಲಿಯೇ ನಡೆಸಿದ್ದಾನೆ ಎಂದು ಹೇಳಲಾಗಿದೆ. ಈಗಾಗಲೇ  ಪೊಲೀಸರು ಆರೋಪಿಗಳನ್ನು ಎಫ್ಐಆರ್ ಆಧರಿಸಿ ಬಂಧಿಸಿದ್ದು ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ  ಸಿಮುಲಿಯಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜಯ್ ಪಾಂಡ"  75 ರ ವಯೋವೃದ್ದನು ಬಾಲಕಿಗೆ ಹಣ ಮತ್ತು ಚಾಕಲೇಟ್ ಆಸೆಯನ್ನು ತೋರಿಸಿ  ಲೈಂಗಿಕ ಕಿರುಕುಳ ನೀಡಿದ್ದಾನೆ. ಈಗ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ" ಎಂದು ಅವರು ತಿಳಿಸಿದ್ದಾರೆ  

Trending News