ನವದೆಹಲಿ : ಕೇಂದ್ರ ಹಣಕಾಸು ಸಚಿವಾಲಯವು ಜನವರಿ 2020 ಮತ್ತು ಜೂನ್ 2021 ರ ಅವಧಿಯಲ್ಲಿ ನಿವೃತ್ತರಾದ ಎಲ್ಲಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಗ್ರಾಚ್ಯುಟಿ ಮತ್ತು ನಗದು ಪಾವತಿಯ ಲೆಕ್ಕಾಚಾರದ ಕೆಲವು ವಿವರಗಳನ್ನು ಬಿಡುಗಡೆ ಮಾಡಿದೆ. ಈ ಎಲ್ಲ ಉದ್ಯೋಗಿಗಳಿಗೆ , ಡಿಎ ಮೊತ್ತವನ್ನು ಸಹ ಪ್ರಕಟಿಸಲಾಗಿದೆ. ಈ ಡಿಎ ಗ್ರಾಚ್ಯುಟಿ ಮತ್ತು ಲೀವ್ ಎನ್ಕಾಶ್ಮೆಂಟ್ ಅನ್ನು ಲೆಕ್ಕಹಾಕಲು ಸಹಾಯ ಮಾಡುತ್ತದೆ.
ಈ ಕುರಿತು ಟ್ವೀಟರ್ ಮೂಲಕ ಮಾಹಿತಿ ನೀಡಿದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ(Department of Pension & Pensioners' Welfare)ಯು, "ಜನವರಿ 2020 ರಿಂದ ಜೂನ್ 2021 ರ ಅವಧಿಯಲ್ಲಿ ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮತ್ತು ರಜೆ ಎನ್ಕ್ಯಾಶ್ಮೆಂಟ್ ಲೆಕ್ಕಾಚಾರದ ಬಗ್ಗೆ ವೆಚ್ಚ ಇಲಾಖೆ 07.09.2021 ರ OM ಅನ್ನು ಬಿಡುಗಡೆ ಮಾಡಿದೆ".
ಇದನ್ನೂ ಓದಿ : IIIF150: 8 ಗಂಟೆಗಳ ಕಾಲ ನೀರಿನಲ್ಲಿ ಕಾರ್ಯನಿರ್ವಹಿಸುತ್ತಂತೆ ಈ ಸ್ಮಾರ್ಟ್‌ಫೋನ್, ಅಗ್ಗದ ದರದಲ್ಲಿ ಹಲವು ವೈಶಿಷ್ಟ್ಯ
7 ನೇ ವೇತನ ಆಯೋಗ: ಇತ್ತೀಚಿನ DA, ಗ್ರಾಚ್ಯುಟಿ ನಿಯಮಗಳು
1. ಕೇಂದ್ರೀಯ ನಾಗರಿಕ ಸೇವೆಗಳ (Pension) ನಿಯಮಗಳು, 1972 ರ ಪ್ರಸ್ತುತ ಮಾನದಂಡಗಳ ಪ್ರಕಾರ, ಡಿಎಯನ್ನು ನಿವೃತ್ತಿಯ ನಂತರ ಮರಣದ ದಿನಾಂಕವನ್ನು ಗ್ರಾಚ್ಯುಟಿ ಲೆಕ್ಕಾಚಾರಕ್ಕೆ ಪರಿಹಾರವೆಂದು ಪರಿಗಣಿಸಲಾಗಿದೆ ಎಂದು ತನ್ನ ಆರ್ಥಿಕ ಜ್ಞಾಪನಾ ಪತ್ರದಲ್ಲಿ, ಹಣಕಾಸು ಸಚಿವಾಲಯದ ಖರ್ಚು ಇಲಾಖೆಯು ತಿಳಿಸಿದೆ.
2. ಸಿಸಿಎಸ್ (ರಜೆ) ನಿಯಮಗಳು, 1972 ರಲ್ಲಿ ಪ್ರಸ್ತುತ ಇರುವ ನಿಬಂಧನೆಗಳ ಪ್ರಕಾರ, ನಿವೃತ್ತಿಯ ದಿನಾಂಕ ಮತ್ತು ಡಿಎ(DA)ಗೆ ಅನ್ವಯವಾಗುವ ವೇತನವನ್ನು ರಜೆ ಬದಲಿಗೆ ನಗದು ಪಾವತಿಯ ಲೆಕ್ಕಾಚಾರಕ್ಕೆ ಎಣಿಕೆ ಮಾಡಲಾಗುತ್ತದೆ ಎಂದು ಆಫೀಸ್ ಮೆಮೊರಾಂಡಮ್ ನಲ್ಲಿ ತಿಳಿಸಲಾಗಿದೆ.
3. ಜನವರಿ 1, 2020 ರಿಂದ ಜೂನ್ 30, 2020 ರ ನಡುವೆ ನಿವೃತ್ತರಾದ ಎಲ್ಲ ಉದ್ಯೋಗಿಗಳ(Employees) ಲೆಕ್ಕಾಚಾರವು ಮೂಲ ವೇತನದ 21% ಎಂದು ಆಫೀಸ್ ಮೆಮೊರಾಂಡಮ್ ಹೇಳುತ್ತದೆ.
4. ಜುಲೈ 1, 2020 ಮತ್ತು ಡಿಸೆಂಬರ್ 31, 2020 ರ ನಡುವೆ ನಿವೃತ್ತರಾದ(Retired) ಉದ್ಯೋಗಿಗಳಿಗೆ, ಮೂಲ ವೇತನದ 24% ಆಗಿದೆ.
5. ಜನವರಿ 1, 2021 ರಿಂದ ಜೂನ್ 30, 20201 ರ ನಡುವೆ ನಿವೃತ್ತರಾದ ನೌಕರರಿಗೆ 28% ಮೂಲ ವೇತನದಲ್ಲಿ.
ಇದನ್ನೂ ಓದಿ : Viral Video: ಗರ್ಲ್ ಫ್ರೆಂಡ್ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತಿ, ಮುಂದೇನಾಯ್ತು ನೀವೇ ನೋಡಿ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.