ಗರ್ಭಿಣಿ ನಾಯಿಯನ್ನು ಅತ್ಯಾಚಾರ ಮಾಡಿ, 3ನೇ ಮಹಡಿಯ ಬಾಲ್ಕನಿಯಿಂದ ಎಸೆದ ಕಾಮುಕ..! ಥೂ.. ರಾಕ್ಷಸ

Rape on Dog : ನೆರೆಹೊರೆಯವರು ಆರೋಪಿಯ ಕೃತ್ಯವನ್ನು ಕಂಡು ಪ್ರಶ್ನೆ ಮಾಡಿದಾಗ ಭಯದಿಂದ ತನ್ನ ಮನೆಯ ಬಾಲ್ಕನಿಯಿಂದ ಹೆಣ್ಣು ನಾಯಿಯನ್ನು ಕೆಳಗೆ ಎಸೆದಿದ್ದಾನೆ. ಘಟನೆಯಲ್ಲಿ ಗರ್ಭಿಣಿ ನಾಯಿಗೆ ಗಾಯಗಳಾಗಿವೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ

Written by - Krishna N K | Last Updated : Oct 27, 2023, 06:21 PM IST
  • ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ.
  • ಮೂರನೇ ಮಹಡಿಯಿಂದ ಶ್ವಾನ ಎಸೆದ ಕ್ರೂರಿ.
  • ಉತ್ತರ ಪ್ರದೇಶದ ನೋಯ್ಡಾದಲ್ಲಿ ಘಟನೆ.
ಗರ್ಭಿಣಿ ನಾಯಿಯನ್ನು ಅತ್ಯಾಚಾರ ಮಾಡಿ, 3ನೇ ಮಹಡಿಯ ಬಾಲ್ಕನಿಯಿಂದ ಎಸೆದ ಕಾಮುಕ..! ಥೂ.. ರಾಕ್ಷಸ title=

Rape on pregnant dog : ಮಾನವ ಕುಲವೇ ತಲೆತಗ್ಗಿಸುವಂತಹ ಘಟನೆವೊಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 28 ವರ್ಷದ ವ್ಯಕ್ತಿಯೊಬ್ಬ ಗರ್ಭಿಣಿ ನಾಯಿಯ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿ ಕ್ರೌರ್ಯ ಮರೆದಿದ್ದಾನೆ. ಅಷ್ಟೇ ಅಲ್ಲದೆ ನಿರ್ದಯವಾಗಿ ತನ್ನ ಮನೆಯ ಮೂರನೇ ಮಹಡಿಯ ಬಾಲ್ಕನಿಯಿಂದ ಶ್ವಾನವನ್ನು ಬೀದಿಗೆ ಎಸೆದು ವಿಕೃತಿ ಮೆರೆದಿದ್ದಾನೆ.

ಪೊಲೀಸರ ಪ್ರಕಾರ, ಬುಧವಾರ ಮಧ್ಯರಾತ್ರಿಯ ಸುಮಾರಿಗೆ ಈ ಘಟನೆ ನಡೆದಿದ್ದು, ನೆರೆಹೊರೆಯವರು ಆರೋಪಿಯ ಕೃತ್ಯವನ್ನು ಕಂಡು ಪ್ರಶ್ನೆ ಮಾಡಿದಾಗ ಭಯದಿಂದ ತನ್ನ ಮನೆಯ ಬಾಲ್ಕನಿಯಿಂದ ಹೆಣ್ಣು ನಾಯಿಯನ್ನು ಕೆಳಗೆ ಎಸೆದಿದ್ದಾನೆ ಎಂದು ತಿಳಿದು ಬಂದಿದೆ. ನೋಯ್ಡಾ ಮೂಲದ ಪ್ರಾಣಿ ಹಕ್ಕುಗಳ ಕಾರ್ಯಕರ್ತ, ವಕೀಲ ವಿಶಾಲ್ ಗೌತಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಘಟನೆ ಕುರಿತ ಕೆಲವೊಂದಿಷ್ಟು ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಘಟನೆಯಲ್ಲಿ ಗರ್ಭಿಣಿ ನಾಯಿಗೆ ಗಾಯಗಳಾಗಿದ್ದು, ಆರೋಪಿಯ ಕೃತ್ಯದಿಂದ ಬಹಳ ಗಾಬರಿಗೊಂಡಿದ್ದ ಶ್ವಾನವನ್ನು ಸ್ಥಳೀಯರು ಆರೈಕೆ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 

ಇದನ್ನೂ ಓದಿ: ಕಂಠಪೂರ್ತಿ ಕುಡಿದು ಫ್ಯಾಶನ್ ಡಿಸೈನರ್ ಪುತ್ರನ ರಂಪಾಟ : ಪೊಲೀಸರಿಗೆ ಆ್ಯಡಂ‌ ಬಿದ್ದಪ್ಪ ಅವಾಜ್ 

ಆರೋಪಿಯು ಗರ್ಭಿಣಿ ನಾಯಿಯ ಮೇಲೆ ಅತ್ಯಾಚಾರ ಎಸಗುತ್ತಿದ್ದಾಗ, ನೆರೆಹೊರೆಯವರು ಗಮನಕ್ಕೆ ಬಂದಿದೆ. ಇದನ್ನು ಅರಿತ ಕಾಮುಕ, ತನ್ನ ಮನೆಯ ಮೂರನೇ ಮಹಡಿಯ ಬಾಲ್ಕನಿಯಿಂದ ಶ್ವಾನವನ್ನು ಎಸೆದಿದ್ದಾನೆ. ಗ್ರೇಟರ್ ನೋಯ್ಡಾದ ಆಲ್ಫಾ 2 ಪ್ರದೇಶದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ನಾಯಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಆರೈಕೆ ಮಾಡುತ್ತಿದ್ದಾರೆ.

ನೆರೆಹೊರೆಯವರ ಕಿರುಚಾಟವನ್ನು ಕೇಳಿದ ಆರೋಪಿ ಹೆಣ್ಣು ನಾಯಿಯನ್ನು ಬಾಲ್ಕನಿಯಿಂದ ಬೀದಿಗೆ ಎಸೆದಿದ್ದಾನೆ. ನಾಯಿ ಗಾಯಗೊಂಡಿದೆ. ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಿದ ನಂತರ ಇಂದು ಸಂಜೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಬೀಟಾ 2 ಪೊಲೀಸ್ ಠಾಣೆಯ ಉಸ್ತುವಾರಿ ವಿನೋದ್ ಕುಮಾರ್ ಮಿಶ್ರಾ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಇದನ್ನೂ ಓದಿ:ಸರ್ವಾಧಿಕಾರದಲ್ಲಿ ಮೋದಿ ಹಿಟ್ಲರ್‌ನನ್ನೂ ಮೀರಿಸಲು ಹೊರಟಿದ್ದಾರೆ: ಕಾಂಗ್ರೆಸ್ ಟೀಕೆ

ಆರೋಪಿಯು ಖಾಸಗಿ ಕಂಪನಿಯ ಉದ್ಯೋಗಿ ಎಂದು ತಿಳಿದು ಬಂದಿದೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 377 (ಯಾವುದೇ ಪುರುಷ, ಮಹಿಳೆ ಅಥವಾ ಪ್ರಾಣಿಯೊಂದಿಗೆ ಪ್ರಕೃತಿ ವಿರುದ್ಧ ದೈಹಿಕ ಸಂಭೋಗ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, 1960 ಸಹ ಅನ್ವಯಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News