Maharashtra : 'ಅರೆರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು' : ಶಿಂಧೆ ಬಣಕ್ಕೆ ತಿವಿದ ಆದಿತ್ಯ ಠಾಕ್ರೆ 

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವೀಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಶಾಸಕಾಂಗ ಅಧಿವೇಶನವನ್ನು ಎದುರಿಸುತ್ತಿದೆ.

Written by - Channabasava A Kashinakunti | Last Updated : Aug 17, 2022, 08:53 PM IST
  • 'ಅರೆರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು'
  • ‘ಇದೊಂದು ದೇಶದ್ರೋಹಿ ಸರ್ಕಾರ’
  • ಶಿಂಧೆ ಬಣದಲ್ಲಿ ಮೇಲೆ ಆದಿತ್ಯ ಠಾಕ್ರೆ ವಾಗ್ದಾಳಿ
Maharashtra : 'ಅರೆರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು' : ಶಿಂಧೆ ಬಣಕ್ಕೆ ತಿವಿದ ಆದಿತ್ಯ ಠಾಕ್ರೆ  title=

Maharashtra Politics : ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ರಾಜಕೀಯ ಕದನ ಆರಂಭವಾಗಿದ್ದು, ಪ್ರಸ್ತುತ ಈಗ ಅಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು. ಅಧಿವೇಶನದಲ್ಲಿ ಶಿವಸೇನೆಯ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಶಿವಸೇನೆ ಮತ್ತು ವಿರೋಧ ಪಕ್ಷಗಳ ಮುಖಂಡರು ಶಿಂಧೆ ಬಣದ ಶಾಸಕರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗಿದರು. ಶಿಂಧೆ ಬಣದ ಶಾಸಕರು ವಿಧಾನ ಭವನಕ್ಕೆ ಬರುತ್ತಿದ್ದ ವೇಳೆ ‘ಅರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು’ ಎಂದು ಘೋಷಣೆ ಕೂಗಿದರು. ವಿಧಾನಸಭೆಯ ಅಧಿವೇಶನದ ಮೊದಲ ದಿನ ವಿಧಾನಸಭೆಯ ಹೊರಗೆ ಪ್ರತಿಪಕ್ಷಗಳು ಕೋಪಿಷ್ಠರಾಗಿ ಕಂಡುಬಂದರು. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವೀಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಶಾಸಕಾಂಗ ಅಧಿವೇಶನವನ್ನು ಎದುರಿಸುತ್ತಿದೆ

ಅಧಿವೇಶನದಲ್ಲಿ ಶಿವಸೇನೆ ಮತ್ತು ವಿರೋಧ ಪಕ್ಷಗಳ ಮುಖಂಡರು ಶಿಂಧೆ ಬಣದ ಶಾಸಕರನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗಿದರು. ಶಿಂಧೆ ಬಣದ ಶಾಸಕರು ವಿಧಾನ ಭವನಕ್ಕೆ ಬರುತ್ತಿದ್ದ ವೇಳೆ ‘ಅರೆರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು’ ಎಂದು ಘೋಷಣೆ ಕೂಗಿದರು. ವಿಧಾನಸಭೆಯ ಅಧಿವೇಶನದ ಮೊದಲ ದಿನ ವಿಧಾನಸಭೆಯ ಹೊರಗೆ ಪ್ರತಿಪಕ್ಷಗಳು ಆಕ್ರಮಣಕಾರಿಯಾಗಿ ಕಂಡುಬಂದವು. ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ-ದೇವೇಂದ್ರ ಫಡ್ನವೀಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಬಾರಿಗೆ ಶಾಸಕಾಂಗ ಅಧಿವೇಶನವನ್ನು ಎದುರಿಸುತ್ತಿದೆ.

ಇದನ್ನೂ ಓದಿ : Ajit Doval : NSA ಅಜಿತ್ ದೋವಲ್ ಭದ್ರತಾ ಲೋಪ : ಮೂವರು CISF ಕಮಾಂಡೋಗಳು ವಜಾ!

'ಅರೆರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು'

ಈ ವೇಳೆ ಪ್ರತಿಪಕ್ಷಗಳು ವಿಧಾನ ಭವನದ ಮೆಟ್ಟಿಲು ಹತ್ತಿ ಘೋಷಣೆಗಳನ್ನು ಕೂಗಿದರು. ಪ್ರತಿಪಕ್ಷಗಳು ರೈತರಿಗೆ ಪರಿಹಾರ ನೀಡಬೇಕು ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದವು. ಈ ಘೋಷಣೆಗಳಿಗೆ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಶಾಸಕರು ಧ್ವನಿ ಗುಡಿಸಿದರು. ಇದೇ ವೇಳೆ ಶಿಂಧೆ ಬಣದ ಶಾಸಕರು ವಿಧಾನ ಭವನಕ್ಕೆ ತೆರಳುತ್ತಿದ್ದರು. ಅವರನ್ನು ನೋಡಿದ ಪ್ರತಿಪಕ್ಷಗಳು ‘ಅರೆರೆ ಬಂದ್ರು ನೋಡಿ, ಬಂದ್ರು ನೋಡಿ ದೇಶದ್ರೋಹಿಗಳು’ ಎಂದು ಘೋಷಣೆಗಳನ್ನು ಕೂಗತೊಡಗಿದರು

‘ಇದೊಂದು ದೇಶದ್ರೋಹಿ ಸರ್ಕಾರ’

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಸೇನೆ ಶಾಸಕ ಆದಿತ್ಯ ಠಾಕ್ರೆ, ಪ್ರಜಾಪ್ರಭುತ್ವದ ಹಂತಕರ ವಿರುದ್ಧ ನಾವು ನಿಲ್ಲುತ್ತೇವೆ. ಇದು ದೇಶದ್ರೋಹಿ ಸರ್ಕಾರ, ಬೀಳುವುದು ಖಚಿತ. ನಮ್ಮಲ್ಲಿ ಮಂತ್ರಿಯಾಗಿದ್ದವರು ಅಲ್ಲಿಗೆ ಹೋಗಿ ಮಂತ್ರಿಯಾದರು ಎಂದು ಹೇಳಿಕೊಳ್ಳುತ್ತಾರೆ. ಕೆಲವರಿಗೆ ಮೊದಲಿಗಿಂತ ಕಡಿಮೆ ಪ್ರಾಮುಖ್ಯತೆಯ ಖಾತೆ ಸಿಕ್ಕಿದೆ. ಅವರಿಗೆ ನಿಷ್ಠರಾಗಿದ್ದವರು, ಮೊದಲ ಪಕ್ಷಕ್ಕೆ ಹೋದವರು ಏನೂ ಸಿಗಲಿಲ್ಲ ಎಂದು ಕ್ಯಾಬಿನೆಟ್ ಖಾತೆ ಹಂಚಿಕೆಯನ್ನು ಟೀಕಿಸಿದರು. 

ಶಿಂಧೆ ಬಣದಲ್ಲಿ ಮೇಲೆ ಆದಿತ್ಯ ಠಾಕ್ರೆ ವಾಗ್ದಾಳಿ

ಈ ದೇಶದ್ರೋಹಿಗಳು (ಶಿಂಧೆ ಬಣ) ನಿಷ್ಠೆಗೆ ಸ್ಥಾನವಿಲ್ಲ, ಸ್ವತಂತ್ರರಿಗೆ ಸ್ಥಾನವಿಲ್ಲ, ಮಹಿಳೆಯರಿಗೆ ಸ್ಥಾನವಿಲ್ಲ ಮತ್ತು ಮುಂಬೈಕರ್‌ಗಳಿಗೆ ಸ್ಥಾನವಿಲ್ಲ ಎಂಬುದನ್ನು ಮತ್ತೊಮ್ಮೆ ತೋರಿಸಿದ್ದಾರೆ. ಒಬ್ಬ ವ್ಯಕ್ತಿಯೊಂದಿಗೆ ನಿಷ್ಠೆ ಇಲ್ಲದ ಜನರು, ಒಂದು ಪಕ್ಷದ ಜೊತೆ ಉಳಿಯುವುದಿಲ್ಲ, ಅಂತಹ ಜನರೊಂದಿಗೆ ಅವರು ಹೇಗೆ ಬದುಕುತ್ತಾರೆ, ಅಲ್ಲಿಗೆ ಹೋಗಿ ಏನನ್ನೂ ಪಡೆಯಲಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ : BJP : ಬಿಜೆಪಿ ಚುನಾವಣಾ ಪ್ಲಾನ್ ಶುರು : ಪಕ್ಷದಲ್ಲಿ ಹೆಚ್ಚಿದ ಈ 6 ನಾಯಕರ ವರ್ಚಸ್ಸು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News