ಮಂಗಳವಾರ Meat Shop ಬಂದ್ ನಿರ್ಣಯದ ವಿರುದ್ಧ ಸಿಡಿದೆದ್ದ ಒವೈಸಿ ಹೇಳಿದ್ದೇನು?

ಮಂಗಳವಾರ ಗುರುಗ್ರಾಮ್ (Gurgaon)  ನಲ್ಲಿ ಮಾಂಸದ ಅಂಗಡಿ ಬಂದ್ ಆದೇಶಕ್ಕೆ ಟೀಕೆ ವ್ಯಕ್ತಪಡಿಸಿರುವ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ, ತೀಕ್ಷ್ಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿರುವ ಒವೈಸಿ, ಯಾವುದೇ ವ್ಯಕ್ತಿ ತಮ್ಮ ಖಾಸಗಿ ಜೀವನದಲ್ಲಿ ಏನು ಮಾಡುತ್ತಾನೆ ಇದರಿಂದ ಬೇರೊಬ್ಬರ ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆ ಬರಲಿದೆ ಎಂದು ಪ್ರಶ್ನಿಸಿದ್ದಾರೆ.

Written by - Nitin Tabib | Last Updated : Mar 19, 2021, 09:21 PM IST
  • ಮಾಂಸದ ಅಂಗಡಿ ಬಂದ್ ಮಾಡುವ ಆದೇಶಕ್ಕೆ ಒವೈಸಿ ಕಿಡಿ.
  • ಇದರಿಂದ ಯಾರೊಬ್ಬರ ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆಯಾಗಲಿದೆ.
  • ಹಾಗಾದ್ರೆ ಶುಕ್ರವಾರ ಮದ್ಯದ ಅಂಗಡಿಗಳನ್ನು ಯಾಕೆ ಬಂದ್ ಮಾಡಬಾರದು?
ಮಂಗಳವಾರ Meat Shop ಬಂದ್ ನಿರ್ಣಯದ ವಿರುದ್ಧ ಸಿಡಿದೆದ್ದ ಒವೈಸಿ ಹೇಳಿದ್ದೇನು? title=

ಹೈದರಾಬಾದ್: ಹರ್ಯಾಣಾದ (Haryana) ಗುರುಗ್ರಾಮ್ ನಲ್ಲಿ ಪ್ರತಿ ಮಂಗಳವಾರ ಮಾಂಸದ ಅಂಗಡಿಗಳನ್ನು(Meat Shop) ಬಂದ್ ಇದುವ ಆದೇಶದ ವಿರುದ್ಧ ಕಿಡಿಕಾರಿರುವ AIMIM ಮುಖ್ಯಸ್ಥ ಅಸದುದ್ದೀನ್ ಒವೈಸಿ (Asaduddin Owaisi), ಸಾರಾಯಿ ಜೊತೆಗೆ ಅದನ್ನು ಹೋಲಿಕೆ ಮಾಡಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದ್ದಾರೆ.

ಇದನ್ನೂ ಓದಿ-'ಬಿಜೆಪಿಗೆ ಬಂಗಾಳ ಮತ್ತು ಯುಪಿಯಲ್ಲಿ ಅಸಾದುದ್ದೀನ್ ಓವೈಸಿ ಸಹಾಯ ಮಾಡಲಿದ್ದಾರೆ'

ಸಾರಾಯಿ ಜೊತೆಗೆ ಹೋಲಿಕೆ
ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಒವೈಸಿ, 'ಯಾವುದೇ ವ್ಯಕ್ತಿ ತಮ್ಮ ಖಾಸಗಿ ಜೀವನದಲ್ಲಿ ಏನು ಮಾಡುತ್ತಾನೆ ಇದರಿಂದ ಬೇರೊಬ್ಬರ ಧಾರ್ಮಿಕ ಭಾವನೆಗೆ ಹೇಗೆ ಧಕ್ಕೆ ಬರಲಿದೆ ? ಜನರು ಮಾಂಸ ಖರೀದಿಸುತ್ತಿದ್ದಾರೆ. ಮಾರಾಟ ಮಾಡುತ್ತಿದ್ದಾರೆ. ಆದರೆ, ಅವರು ನಿಮಗೆ ಅದನ್ನು ತಿನ್ನಲು ಒತ್ತಾಯಿಸುತ್ತಿಲ್ಲ. ಈ ಆಧಾರದ ಮೇಲೆ ಶುಕ್ರವಾರ ಏಕೆ ಸಾರಾಯಿ ಅಂಗಡಿ (Liquor Shop)ಗಳನ್ನು ಬಂದ್ ಇಡಬಾರದು? ಮಾಂಸ ಲಕ್ಷಾಂತರ ಭಾರತೀಯರ ಆಹಾರವಾಗಿದೆ. ಅದನ್ನು ಅಶುದ್ಧ ರೀತಿಯಲ್ಲಿ ಭಾವಿಸಬಾರದು' ಎಂದಿದ್ದಾರೆ.

ಇದನ್ನೂ ಓದಿ-ಹಿಂದುತ್ವದ ಕುರಿತು Asaduddin Owaisi ವಿವಾದಾತ್ಮಕ ಟಿಪ್ಪಣಿ

ಸಂಪೂರ್ಣ ಪ್ರಕರಣ ಏನು?
ಈ ಕುರಿತು ಗುರುವಾರ ಆದೇಶ ಹೊರಡಿಸಿರುವ ಗುರುಗ್ರಾಮದ ನಗರಪಾಲಿಕೆ (Gurugram Municipal Corporation) ಎಲ್ಲ ಮಾಂಸ ಮಾರಾಟ ಮಾಡುವ ಅಂಗಡಿಗಳನ್ನು ಮಂಗಳವಾರದ ದಿನ ಬಂದ್ ಇಡಲು ಆದೇಶಿಸಿದೆ. ಇದಲ್ಲದೆ ಮಾಂಸದ ಅಂಗಡಿಗಳ ಲೈಸನ್ಸ್ ಫೀಸ್ ಅನ್ನು 5 ಸಾವಿರ ರೂಗಳಿಂದ 10 ಸಾವಿರ ರೂ.ಗಳಿಗೆ ಹೆಚ್ಚಿಸಿದೆ. ಇದಲ್ಲದೆ ನಿಯಮ ಉಲ್ಲಂಘಿಸಿದವರ ಮೇಲೆ ವಿಧಿಸಲಾಗುವ ದಂಡವನ್ನು 500 ರೂ.ಗಳಿಂದ 5 ಸಾವಿರ ರೂ.ಗಳಿಗೆ ಹೆಚ್ಚಿಸಿದೆ.

ಇದನ್ನೂ ಓದಿ-Babri Masjid Demolition ತೀರ್ಪಿನ ಕುರಿತು ಅಸದುದ್ದೀನ್ ಒವೈಸಿ ಹೇಳಿದ್ದೇನು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News