ನವದೆಹಲಿ: ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಮುಂದಿನ ವಾಯುಪಡೆಯ ಮುಖ್ಯಸ್ಥರಾಗಲಿದ್ದಾರೆ ಎಂದು ಸರ್ಕಾರ ಗುರುವಾರ ಪ್ರಕಟಿಸಿದೆ.
ಈ ವರ್ಷದ ಮೇ ತಿಂಗಳಲ್ಲಿ ಭಾರತೀಯ ವಾಯುಸೇನೆಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಭದೌರಿಯಾ, ಸೆಪ್ಟೆಂಬರ್ 30 ರಂದು ಹಾಲಿ ಮುಖ್ಯಸ್ಥ ಬಿ ಎಸ್ ಧನೋವಾ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಧಾನ ವಕ್ತಾರರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿರುವ ಭದೌರಿಯಾ ಜೂನ್ 1980 ರಲ್ಲಿ ಐಎಎಫ್ನ ಫೈಟರ್ ಸ್ಟ್ರೀಮ್ಗೆ ನಿಯೋಜಿಸಲಾಯಿತು ಮತ್ತು ಅರ್ಹತೆಯ ಒಟ್ಟಾರೆ ಕ್ರಮದಲ್ಲಿ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ 'ಸ್ವೋರ್ಡ್ ಆಫ್ ಹಾನರ್' ಗೆದ್ದಿದ್ದರು. ವಾಯುಪಡೆ ಮುಖ್ಯಸ್ಥರಾಗಿ ನೇಮಕವಾಗುವ ಮೊದಲು ಅವರು ವಿವಿಧ ಹಂತಗಳಲ್ಲಿ ಮತ್ತು ಕಮಾಂಡ್ ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಸುಮಾರು ನಾಲ್ಕು ದಶಕಗಳ ವೃತ್ತಿಜೀವನದ ಅವಧಿಯಲ್ಲಿ ಭದೌರಿಯಾ ಜಾಗ್ವಾರ್ ಸ್ಕ್ವಾಡ್ರನ್ ಮತ್ತು ಪ್ರಧಾನ ವಾಯುಪಡೆಯ ಕೇಂದ್ರದ ನೇತೃತ್ವವನ್ನು ವಹಿಸಿದ್ದರು. ಅವರು ಮುಖ್ಯ ಟೆಸ್ಟ್ ಪೈಲಟ್ ಮತ್ತು ಲೈಟ್ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಲ್ಸಿಎ) ಯೋಜನೆಯ ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದರು.ಮಾಸ್ಕೋದ ಭಾರತೀಯ ರಾಯಭಾರ ಕಚೇರಿಯಲ್ಲಿ ಏರ್ ಅಟ್ಯಾಚ್, ಏರ್ ಸ್ಟಾಫ್ (ಪ್ರಾಜೆಕ್ಟ್ಸ್) ನ ಸಹಾಯಕ ಮುಖ್ಯಸ್ಥರು, ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಕಮಾಂಡೆಂಟ್, ಏರ್ ಹೆಡ್ ಕ್ವಾರ್ಟರ್ನಲ್ಲಿ ಏರ್ ಸ್ಟಾಫ್ನ ಉಪ ಮುಖ್ಯಸ್ಥರು ಮತ್ತು ದಕ್ಷಿಣ ಏರ್ನ ವಾಯು ಅಧಿಕಾರಿ ಕಮಾಂಡಿಂಗ್-ಇನ್-ಚೀಫ್ ಆಗಿ ಇದುವರೆಗೆ ಕಾರ್ಯ ನಿರ್ವಹಿಸಿದ್ದಾರೆ.