Mysore Crime News: ಎಲ್ಐಸಿ ಹಣದ ಆಸೆಗಾಗಿ ಹೆತ್ತ ಅಪ್ಪನನ್ನೇ ಕೊಂದ ಆರೋಪದ ಮೇರೆಗೆ ಮಗನನ್ನು ಪೊಲೀಸರು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ಡೋಂಗ್ರಿ ಗೇರಾಸಿ ಕಾಲೊನಿ ನಿವಾಸಿ ಅಣ್ಣಪ್ಪ (55) ಕೊಲೆಯಾದವರು. ಅವರ ಪುತ್ರ ಪಾಂಡು ಆರೋಪಿ.
ತಂದೆಯ ಸಾವಿನ ಹಿನ್ನಲೆ ಬೇಸತ್ತ ಸಹೋದರನೂ ನೇಣಿಗೆ ಶರಣಾಗಿದ್ದಾನೆ. ಅಪ್ಪ ಹಾಗೂ ಅಣ್ಣನ ಹೆಸರಲ್ಲಿ ಪಾಂಡು ವಿಮೆ ಮಾಡಿಸಿದ್ದ. ಇನ್ಶುರೆನ್ಸ್ ಹಣಕ್ಕಾಗಿ ದೊಣ್ಣೆಯಿಂದ ಹೊಡೆದು ಅಪ್ಪನನ್ನು ಕೊಲೆ ಮಾಡಿದ್ದಾನೆ. ಟಿಬೇಟಿಯನ್ ಕ್ಯಾಂಪಿನಲ್ಲಿ ಕೆಲಸ ಇದೆ ಹೋಗು ಅಂತಾ ಹೇಳಿ ಆರೋಪಿ ಪಾಂಡು ತನ್ನ ಅಪ್ಪನನ್ನು ಕಳುಹಿಸಿದ್ದ. ನಂತರ ಹಿಂಬದಿಯಿಂದ ಹಿಂಬಾಲಿಸಿ ದೊಣ್ಣೆಯಿಂದ ತಲೆಗೆ ಹೊಡೆದು ಅಪಘಾತವೆಂಬಂತೆ ಬಿಂಬಿಸಿ ಬಿಎಂ ರಸ್ತೆಯ ಮಂಚ ದೇವನಹಳ್ಳಿ ಸಮೀಪ ಶವ ಬಿಸಾಡಿದ್ದ.
ಇದನ್ನೂ ಓದಿ: ಶೂಟಿಂಗ್ ವೇಳೆ ಖ್ಯಾತ ನಟಿಯ ಮೇಲೆ ಲೈಂಗಿಕ ದೌರ್ಜನ್ಯ..! ಸಹ ನಟರ ವಿರುದ್ಧ ದೂರು ದಾಖಲು
ಡಿ.25ರಂದು ಆರೋಪಿ ಪಾಂಡು ಬೈಲುಕುಪ್ಪೆ ಪೊಲೀಸರಿಗೆ ಕರೆ ಮಾಡಿ, ನಮ್ಮ ತಂದೆ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದ. ಸ್ಥಳಕ್ಕೆ ತೆರಳಿದಾಗ ಬೈಲಕುಪ್ಪೆ ಸಮೀಪದ ಗುಳ್ಳೆದಳ್ಳ ಅರಣ್ಯ ಪ್ರದೇಶ ಪಕ್ಕದ ರಸ್ತೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿದಾಗ ಕೊಲೆ ಎಂಬುದು ಗೊತ್ತಾಗಿತ್ತು.
ಈ ಘಟನೆಯ ಬಗ್ಗೆ ಅನುಮಾನಗೊಂಡು ಸಬ್ ಇನ್ಸ್ಪೆಕ್ಟರ್ ಅಜಯ್ ಕುಮಾರ್ ಮತ್ತು ತಂಡವು ತನಿಖೆ ನಡೆಸಿದ ಪಾಂಡುವಿನ ಕೊಲೆ ಸಂಚು ಬಯಲಾಗಿದೆ. ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆರೋಪಿ ಪಾಂಡುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ತಾನು ಮಾಡಿರುವ ಕೊಲೆ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಖ್ಯಾತ ನಟಿ ಉರ್ಮಿಳಾ ಕಾರು ಅಪಘಾತ : ಓರ್ವ ಮೆಟ್ರೋ ಕಾರ್ಮಿಕ ಸಾವು ಮತ್ತೋರ್ವ ಗಂಭೀರ..
ʼತಂದೆಯ ಹೆಸರಿನಲ್ಲಿ ಎಲ್ಐಸಿಯಲ್ಲಿ ₹30 ಲಕ್ಷ ಪಾಲಿಸಿ ಮಾಡಿಸಿದ್ದೆ. ಅವರು ಮೃತಪಟ್ಟರೆ ಡಬಲ್ ಹಣ ಬರುತ್ತದೆಂಬ ಆಸೆಯಿಂದ ಅವರನ್ನ ಹೊಲಕ್ಕೆ ಕರೆದೊಯ್ದು ಕೋಲಿನಿಂದ ತಲೆಗೆ ಹೊಡೆದೆʼ ಅಂತಾ ಆರೋಪಿ ತಿಳಿಸಿದ್ದಾನೆ' ಎಂದು ಬೈಲುಕೊಪ್ಪೆ ಪೊಲೀಸರು ಮಾಹಿತಿ ನೀಡಿದರು.
ತಂದೆ ಸಾವನ್ನಪ್ಪಿದ ಸುದ್ದಿ ತಿಳಿದು ಪಾಂಡುವಿನ ಅಣ್ಣ ಧರ್ಮ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆರೋಪಿಯನ್ನ ವಶಪಡಿಸಿಕೊಂಡಿರುವ ಬೈಲುಕೊಪ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.