ನರೇಂದ್ರ ಮೋದಿಗಿಂತ ಅಮಿತಾಬ್ ಬಚ್ಚನ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ!

ಮೋದಿಗಿಂತ ಪ್ರಧಾನಿ ಹುದ್ದೆಗೆ ಅಮಿತಾಬ್ ಬಚ್ಚನ್ ಆಯ್ಕೆ ಮಾಡಬಹುದಿತ್ತು ಎಂದು ಪ್ರಿಯಾಂಕಾ ಹೇಳಿದ್ದಾರೆ. 

Last Updated : May 17, 2019, 04:12 PM IST
ನರೇಂದ್ರ ಮೋದಿಗಿಂತ ಅಮಿತಾಬ್ ಬಚ್ಚನ್ ಪ್ರಧಾನಿ ಹುದ್ದೆಗೆ ಉತ್ತಮ ಆಯ್ಕೆ!

ಮಿರ್ಜಾಪುರ್: ಲೋಕಸಭಾ ಚುನಾವಣೆ 2019ರ ಕಡೆಯ ಹಂತದ ಮತದಾನ ಮೇ 19ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮಿರ್ಜಾಪುರದಲ್ಲಿ ರೋಡ್ ಶೋ ನಡೆಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿಯನ್ನು "ಎಲ್ಲರಿಗಿಂತ ದೊಡ್ಡ ಕಲಾವಿದ" ಎಂದು ಕರೆಯುವ ಮೂಲಕ ವಾಗ್ದಾಳಿ ನಡೆಸಿದರು.

"ದೇಶದ ಪ್ರಧಾನಿಯಾಗಿ ಪ್ರಪಂಚದ ಒಬ್ಬ ದೊಡ್ಡ ಕಲಾವಿದ(ನರೇಂದ್ರ ಮೋದಿ)ನನ್ನು ನೀವು ಆಯ್ಕೆ  ಮಾಡಿದ್ದೀರಿ. ಆದರೆ ಮೋದಿಗಿಂತ ಪ್ರಧಾನಿ ಹುದ್ದೆಗೆ ಅಮಿತಾಬ್ ಬಚ್ಚನ್ ಆಯ್ಕೆ ಮಾಡಬಹುದಿತ್ತು" ಎಂದು ಪ್ರಿಯಾಂಕಾ ಹೇಳಿದ್ದಾರೆ. 

ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರೂ ಸಹ ರಾಜಕೀಯದಲ್ಲಿ ಅನುಭವ ಹೊಂದಿದವರು. 1984 ರಲ್ಲಿ ಅವರ ಹುಟ್ಟೂರಾದ ಅಲಹಾಬಾದ್ ನಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಮೊದಲ ಬಾರಿ ಸುನವನೆಯಲ್ಲಿ ಸ್ಪರ್ದಿಸಿದ್ದರು. ಸದ್ಯ ಅಮಿತಾಬ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷದಿಂದ ರಾಜ್ಯಸಭೆಯಲ್ಲಿ ಸಂಸದರಾಗಿದ್ದಾರೆ. 
 

More Stories

Trending News