ಶ್ರೀಕಾಕುಲಂ (ಆಂಧ್ರಪ್ರದೇಶ): ಕಳಿಂಗಪಟ್ಟಣ ಸಮುದ್ರದಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ಬೀಚ್ನಲ್ಲಿದ್ದ ಪ್ರಾಣಿಗಳ ಪ್ರತಿಮೆಗಳು ಸಮುದ್ರದಲ್ಲಿ ಕೊಚ್ಚಿ ಹೋಗಿರುವ ಘಟನೆ ಗುರುವಾರ ಸಂಭವಿಸಿದೆ.
ಒಡಿಶಾದಲ್ಲಿ ನೆಲೆಗೊಂಡಿರುವ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಿಂದಾಗಿ ಶ್ರೀಕಾಕುಲಂ ಜಿಲ್ಲೆಯ ವಂಶಧಾರ ಮತ್ತು ನಾಗಾವಳಿ ನದಿಗಳು ತುಂಬಿ ಹರಿಯುತ್ತಿವೆ.
Andhra Pradesh: Animal statues on the Kalingapatnam beach got washed away in the sea following a rise in the water level, yesterday. pic.twitter.com/4ppW3Z6X9M
— ANI (@ANI) August 9, 2019
ವಂಶಧಾರ ನದಿಯಲ್ಲಿ ಸುಮಾರು 1 ಲಕ್ಷ ಕ್ಯೂಸೆಕ್ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಬಂಗಾಳಕೊಲ್ಲಿಯ ತೀರದಲ್ಲಿರುವ ಕಳಿಂಗಪಟ್ಟಣಂ ಪ್ರವಾಹಕ್ಕೆ ತುತ್ತಾಗಿದೆ.