close

News WrapGet Handpicked Stories from our editors directly to your mailbox

ಕೈಗಾರಿಕಾ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.75 ರಷ್ಟು ಆದ್ಯತೆ ನೀಡಲು ಮುಂದಾದ ಆಂಧ್ರ ಸಿಎಂ

ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಕೈಗಾರಿಕಾ ಸಂಬಂಧಿತ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಶೇ.75 ರಷ್ಟು ಆದ್ಯತೆ ಪ್ರಸ್ತಾಪಕ್ಕೆ ಮುಂದಾಗಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

Updated: Jul 22, 2019 , 08:34 PM IST
ಕೈಗಾರಿಕಾ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ.75 ರಷ್ಟು ಆದ್ಯತೆ ನೀಡಲು ಮುಂದಾದ ಆಂಧ್ರ ಸಿಎಂ
file photo

ನವದೆಹಲಿ: ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಕೈಗಾರಿಕಾ ಸಂಬಂಧಿತ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಆಧ್ಯತೆ ಕಲ್ಪಿಸುವ ನಿಟ್ಟಿನಲ್ಲಿ ಶೇ.75 ರಷ್ಟು ಆದ್ಯತೆ ಪ್ರಸ್ತಾಪಕ್ಕೆ ಮುಂದಾಗಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.

ರಾಜ್ಯದಲ್ಲಿನ ನಿರುದ್ಯೋಗಕ್ಕೆ ಇತಿಶ್ರೀ ಹಾಡುವ ನಿಟ್ಟಿನಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ಪ್ರಸ್ತಾವನೆಯನ್ನು ಅವರು ಇಟ್ಟಿದ್ದಾರೆ. ಇದಕ್ಕೆ ಸಚಿವ ಸಂಪುಟ ಕೂಡ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಈಗ ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕೈಗಾರಿಕೆಗಳ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಕೈಗಾರಿಕಾ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಕೈಗಾರಿಕೆಗಳಲ್ಲಿ ಸ್ಥಳಿಯರಿಗೆ ಶೇ 75 ರಷ್ಟು ಆದ್ಯತೆ ನೀಡುವ ಭರವಸೆಯನ್ನು ಅವರು ಪಾದಯಾತ್ರೆ ಸಂದರ್ಭದಲ್ಲಿ ಮತ್ತು ಚುನಾವಣಾ ಪ್ರಚಾರದ ವೇಳೆ ನೀಡಿದ್ದರು ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಭರವಸೆಯನ್ನು ಈಡೇರಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಜಗನ್ ಮೋಹನ್ ರೆಡ್ಡಿ ಅವರು 1.33 ಲಕ್ಷ ಸ್ವಯಂಕೃತ ಉದ್ಯೋಗಗಳನ್ನು ಗ್ರಾಮಗಳಲ್ಲಿ ನಿರುದ್ಯೋಗಿಗಾಗಿ ಘೋಷಿಸಿದ್ದಾರೆ.