ಪ್ರಧಾನಿಗಳೇ ರಾಜಕೀಯ ಭಾಷಣ ಮಾಡುವುದಕ್ಕೆ ಸಂಸತ್ತು ಸಾರ್ವಜನಿಕ ವೇದಿಕೆಯಲ್ಲ -ರಾಹುಲ್ ಗಾಂಧಿ

    

Last Updated : Feb 7, 2018, 04:39 PM IST
ಪ್ರಧಾನಿಗಳೇ ರಾಜಕೀಯ ಭಾಷಣ ಮಾಡುವುದಕ್ಕೆ ಸಂಸತ್ತು ಸಾರ್ವಜನಿಕ ವೇದಿಕೆಯಲ್ಲ -ರಾಹುಲ್ ಗಾಂಧಿ title=

ನವದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಾಡಿದ ಭಾಷಣಕ್ಕೆ ಖಾರವಾಗಿ ಪ್ರತಿಕ್ರಯಿಸಿರುವ ರಾಹುಲ್ ಗಾಂಧಿ,ಮೋದಿಯವರು ದೇಶಕ್ಕೆ ರಾಪೆಲ್ ಜೆಟ್ ಒಪ್ಪಂದ,ರೈತರ ಸಮಸ್ಯೆಗಳು, ಹಾಗೂ ಉದ್ಯೋಗ ಸೃಷ್ಟಿಯ ಪ್ರಶ್ನೆಗಳಿಗೆ ಸಂಸತ್ತಿನಲ್ಲಿ ಉತ್ತರಿಸಬೇಕೆ ಹೊರತು ಆರೋಪ ಮಾಡುವುದಲ್ಲ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ಅವರು ಆರೋಪ ಮಾಡುತ್ತಿರುವ ಮೋದಿಜಿಯವರು ಈ ದೇಶದ ಪ್ರಧಾನಮಂತ್ರಿ ಹೊರತು ವಿರೋಧ ಪಕ್ಷದ ನಾಯಕರಲ್ಲ, ಬೇಕಾದರೆ ಅವರು ಸಾರ್ವಜನಿಕ ವೇದಿಕೆಗಳಲ್ಲಿ ಬೇಕಾದರೆ ಕಾಂಗ್ರೇಸ್ ಬಗ್ಗೆ ಮಾತನಾಡಲಿ ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಆದರೆ ಅದರ ಬಗ್ಗೆ  ಸಂಸತ್ತಿನಲ್ಲಿ ಮಾತನಾಡಲು ಸರಿಯಾದ ವೇದಿಕೆಯಲ್ಲ  ಎಂದು ತಿಳಿಸಿದರು. ಸಂಸತ್ತಿನಲ್ಲಿ ಪ್ರಧಾನಿಗಳು ಈ ದೇಶದ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಹೊರತು ಆರೋಪ ಮಾಡುವುದಲ್ಲ ಎಂದು ರಾಹುಲ್ ತಿಳಿಸಿದ್ದಾರೆ.

Trending News