ಸಹೋದರಿಯಬ್ಬರ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಮ್ ಬಾಪು ಪುತ್ರ ಆರೋಪಿ

ಸೂರತ್ ನಲ್ಲಿ ಸಹೋದರಿಯರಿಬ್ಬರನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಅವರಿಗೆ ಸೂರತ್ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 

Updated: Apr 26, 2019 , 02:26 PM IST
ಸಹೋದರಿಯಬ್ಬರ ಅತ್ಯಾಚಾರ ಪ್ರಕರಣದಲ್ಲಿ ಅಸಾರಾಮ್ ಬಾಪು ಪುತ್ರ ಆರೋಪಿ
photo:ANI

ನವದೆಹಲಿ: ಸೂರತ್ ನಲ್ಲಿ ಸಹೋದರಿಯರಿಬ್ಬರನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಪುತ್ರ ನಾರಾಯಣ ಸಾಯಿ ಅವರಿಗೆ ಸೂರತ್ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. 

ನಾರಾಯಣ ಸಾಯಿ ಅವರ ಸಹಚರರಾದ ಗಂಗಾ, ಜಮುನಾ ಮತ್ತು ಹನುಮಾನ್ ಅವರಿಗೂ ಕೂಡ ನ್ಯಾಯಾಲಯ ಶಿಕ್ಷೆ ನೀಡಿದೆ.ಇನ್ನು ಮೋನಿಕಾ ಎಂದು ಗುರುತಿಸಲ್ಪಡುವ ಮಹಿಳೆಯನ್ನು ಮುಗ್ದಳು ಕೋರ್ಟ್ ಎಂದು ತೀರ್ಪು ನೀಡಿದೆ. ಏಪ್ರಿಲ್ 30 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗುತ್ತದೆ ಎನ್ನಲಾಗಿದೆ.

ನಾರಾಯಣ ಸಾಯಿ ಅವರು ಡಿಸೆಂಬರ್ 4, 2013 ರಂದು ದೆಹಲಿ ಗಡಿಯನ್ನು ದಾಟಲು ಪ್ರಯತ್ನಿಸುವಾಗ ದೆಹಲಿ ಪೊಲೀಸರು ಬಂಧಿಸಿದ್ದರು. ಪೊಲೀಸರು ಅವರನ್ನು ಬಂಧಿಸಿದಾಗ ಅವರು ವೇಷದಲ್ಲಿದ್ದರು ಎನ್ನಲಾಗಿದೆ. ಅವರು ಮತ್ತು ಅವರ ತಂದೆ ಇಬ್ಬರೂ ಕೂಡ ಸಹೋದರಿಯರ ಅತ್ಯಾಚಾರ ಮಾಡಿರುವ ಆರೋಪವನ್ನು ಹೊತ್ತಿದ್ದರು. 2013ರಲ್ಲಿ ಈ ಪ್ರಕರಣವನ್ನು ನೋಂದಾಯಿಸಲಾಗಿತ್ತು ಎನ್ನಲಾಗಿದೆ.