ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಅಂತಿಮ ತೀರ್ಪು ಪ್ರಕಟಣೆಗೆ ಕ್ಷಣಗಣನೆ, ಕೋರ್ಟ್ ರೂಮ್ ತಲುಪಿದ 26 ಆರೋಪಿಗಳು

ವಿವಾದಾತ್ಮಕ ಬಾಬರಿ ಮಸೀದಿ ಧ್ವಂಸಗೊಳಿಸಿದ 28 ವರ್ಷಗಳ ಬಳಿಕ ಇಂದು CBI ವಿಶೇಷ ನ್ಯಾಯಾಲಯ (Special CBI Court) ಇಂದು ತನ್ನ ತೀರ್ಪು ಪ್ರಕಟಿಸಲಿದೆ. 

Last Updated : Sep 30, 2020, 12:17 PM IST
  • ಬಾಬರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ಇಂದು ಪ್ರಕಟವಾಗಲಿದೆ.
  • ಪ್ರಕರಣದ ಉಳಿದ 32 ಆರೋಪಿಗಳ ಪೈಕಿ ವಿಶೇಷ ಸಿಬಿಐ ನ್ಯಾಯಾಲಯ ತಲುಪಿದ ಪ್ರಕರಣದ 26 ಆರೋಪಿಗಳು.
  • ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಮಹಂತ್ ನೃತ್ಯಗೋಪಾಲ್ ಮತ್ತು ಇತರೆ ಮೂವರಿಗೆ ಕೋರ್ಟ್ ಹಾಜರಾತಿಯಿಂದ ವಿನಾಯಿತಿ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಅಂತಿಮ ತೀರ್ಪು ಪ್ರಕಟಣೆಗೆ ಕ್ಷಣಗಣನೆ, ಕೋರ್ಟ್ ರೂಮ್ ತಲುಪಿದ 26 ಆರೋಪಿಗಳು title=

ಲಖನೌ: ವಿವಾದಾತ್ಮಕ ಬಾಬರಿ ಮಸೀದಿ ಧ್ವಂಸಗೊಳಿಸಿದ 28 ವರ್ಷಗಳ ಬಳಿಕ ಇಂದು CBI ವಿಶೇಷ ನ್ಯಾಯಾಲಯ (Special CBI Court) ಇಂದು ತನ್ನ ತೀರ್ಪು ಪ್ರಕಟಿಸಲಿದೆ. ವಿಶೇಷ ಸಿಬಿಐ ನ್ಯಾಯಾಧೀಶ ಸುರೇಂದ್ರ ಯಾದವ್ ಅವರು ಕೋರ್ಟ್ ತಲುಪಿದ್ದಾರೆ. ಪ್ರಮುಖ ಆರೋಪಿಗಳಾಗಿರುವ ಚಂಪತ್ ರಾಯ್ ಹಾಗೂ ಬಜರಂಗ್ ದಳದ ಪ್ರಕಾಶ ಶರ್ಮಾ ಕೂಡ ನ್ಯಾಯಾಲಯಕ್ಕೆ ತಲುಪಿದ್ದಾರೆ.

- ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ, ಮಹಂತ್ ನೃತ್ಯಗೋಪಾಲ್ ದಾಸ್, ಸತೀಶ್ ಪ್ರಧಾನ ಹವರನು ಹೊರತುಪಡಿಸಿ ಉಳಿದ 26 ಆರೋಪಿಗಳು ನ್ಯಾಯಾಲಯದಲ್ಲಿ ಉಪಸ್ಥಿತರಿದ್ದಾರೆ.
- ಲಾಲ್ ಕೃಷ್ಣ ಅಡ್ವಾಣಿ ಪರ ಅಕೀಲ ಮಹಿಪಾಲ್ ಜೀ ಅವರು ಅಡ್ವಾಣಿ ಅವರ ನಿವಾಸ 30 ಪ್ರಿಥ್ವಿರಾಜ್ ಮಾರ್ಗ್ ತಲುಪಿದ್ದಾರೆ. 
- ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ನೃತ್ಯ ಗೋಪಾಲ್ ದಾಸ್, ಕಲ್ಯಾಣ್ ಸಿಂಗ್ ಕೋರ್ಟ್ ಗೆ ಬರುತ್ತಿಲ್ಲ.
-ರಾಮ್ ವಿಲಾಸ್ ವೇದಾಂತಿ ಕೂಡ ಕೋರ್ಟ್ ತಲುಪಿದ್ದಾರೆ. ಬಿಜೆಪಿ ಸಂಸದ ಲಲ್ಲೂ ಸಿಂಗ್, ಪವನ್ ಪಾಂಡೆ ಕೂಡ ಕೋರ್ಟ್ ತಲುಪಿದ್ದಾರೆ. ಸಾಧ್ವಿ ರಿತಂಬರಾ  ಕೂಡ ಕೋರ್ಟ್ ನಲ್ಲಿ ಉಪಸ್ಥಿತರಿದ್ದಾರೆ.

ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಒಂದು ಸುನಿಯೋಜಿತ ಕೃತ್ಯ ಎಂದಿದ್ದ CBI
ವಿವಾದಿತ ಬಾಬ್ರಿ ರಚನೆಯನ್ನು 1992 ರ ಡಿಸೆಂಬರ್ 6 ರಂದು ಅಯೋಧ್ಯೆಯಲ್ಲಿ ನೆಲಸಮ ಮಾಡಲಾಗಿತ್ತು. ಬಾಬ್ರಿ ಉರುಳಿಸುವಿಕೆಯ ಪ್ರಕರಣದಲ್ಲಿ, ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಾಲಾ ಸಾಹೇಬ್ ಠಾಕ್ರೆ, ರಾಮ್ ವಿಲಾಸ್ ವೇದಾಂತಿ ಮತ್ತು ಉಮಾ ಭಾರತಿ ಸೇರಿದಂತೆ 49 ಆರೋಪಿಗಳನ್ನು ಮಾಡಲಾಗಿದ್ದು, ಈ ಪೈಕಿ ಕೇವಲ 32 ಮಂದಿ ಮಾತ್ರ ಜೀವಂತವಾಗಿದ್ದಾರೆ. ಬಾಬ್ರಿ ಉರುಳಿಸುವಿಕೆಯ ಪ್ರಕರಣದ ಆರೋಪಿ ಡಾ.ರಾಮ್ ವಿಶಾಲ್ ವೇದಾಂತಿ ಅವರು ಈ ಪ್ರಕರಣದಲ್ಲಿ ತಮಗೆ ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆಯಾದರೆ, ಅದು ತಮ್ಮ ಅದೃಷ್ಟ ಎಂದು ಹೇಳಿದ್ದಾರೆ.

27 ಆಗಸ್ಟ್ 1993ರಿಂದ ಸಿಬಿಐ ತನಿಖೆ ನಡೆಸಿದೆ
ಬಾಬ್ರಿ ಮಸೀದಿ ಧ್ವಂಸ  ಪ್ರಕರಣದ ತನಿಖೆಯನ್ನು 1993 ರ ಆಗಸ್ಟ್ 27 ರಂದು ಸಿಬಿಐಗೆ ಹಸ್ತಾಂತರಿಸಲಾಯಿತು. ಈ ಪ್ರಕರಣದಲ್ಲಿ ಕಳೆದ 26 ವರ್ಷಗಳಿಂದ ವಿಳಂಬವಾಗುತ್ತಲೇ ಇದೆ.  ಆದರೆ ಏಪ್ರಿಲ್ 19, 2017 ರಂದು ಸುಪ್ರೀಂ ಕೋರ್ಟ್ ಈ ವಿಷಯದ ವಿಚಾರಣೆಯನ್ನು ಆಲಿಸುವಂತೆ ಆದೇಶಿಸಿತ್ತು ಮತ್ತು ವಿಷಯವು ನಡೆಯುವವರೆಗೂ ಪ್ರಕರಣದ ನ್ಯಾಯಾಧೀಶರನ್ನು ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಬಾಬರಿ ಧ್ವಂಸ ಪ್ರಕರಣದ ಉಳಿದ 32 ಆರೋಪಿಗಳಲ್ಲಿ ಈ ಐವರು ಪ್ರಮುಖರು
ಲಾಲಕೃಷ್ಣ ಅಡ್ವಾಣಿ: 1990 ರಲ್ಲಿ ರಾಮ ಮಂದಿರ ಆಂದೋಲನವನ್ನು ಮುನ್ನಡೆಸಿದ್ದು ಲಾಲ್ ಕೃಷ್ಣ ಅಡ್ವಾಣಿ. ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾರಥಿಯಾಗಿದ್ದರು. ಸಿಬಿಐ ಚಾರ್ಜ್‌ಶೀಟ್‌ನ ಪ್ರಕಾರ ಬಾಬರಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿ ಅಡ್ವಾಣಿ.

ಮುರಳಿ ಮನೋಹರ್ ಜೋಷಿ: ಸಿಬಿಐ ಚಾರ್ಜ್‌ಶೀಟ್‌ನ ಪ್ರಕಾರ, ಡಿಸೆಂಬರ್ 6 ರಂದು ಬಾಬ್ರಿ ರಚನೆಯ ಬಳಿ ಜೋಶಿ ಕೂಡ ಹಾಜರಿದ್ದರು ಮತ್ತು ಧ್ವಂಸವಾಗುವವರೆಗೆ ಅಲ್ಲಿಯೇ ಇದ್ದರು.

ಉಮಾ ಭಾರತಿ: ಸಿಬಿಐ ಚಾರ್ಜ್‌ಶೀಟ್‌ನ ಪ್ರಕಾರ, ಉಮಾ ಭಾರತಿ ಜನಸಮೂಹವನ್ನು ಪ್ರಚೋದಿಸಿದ ಆರೋಪವಿದೆ. ಲಿಬರ್ಹಾನ್ ಆಯೋಗದ ವರದಿಯಲ್ಲಿ, ಉಮಾ ತಪ್ಪಿತಸ್ಥರೆಂದು ಘೋಷಿಸಲಾಗಿದೆ.

ಕಲ್ಯಾಣ್ ಸಿಂಗ್: ಬಾಬ್ರಿ ಧ್ವಂಸವನ್ನು ತಡೆಯಲು ಅಂದಿನ ಉತ್ತರ ಪ್ರದೇಶ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ. ಇದು ಧ್ವಂಸಕ್ಕೆ ನೀಡಿದ ಪ್ರಚೋದನೆ ಎಂದು ಪರಿಗಣಿಸಲಾಗಿದೆ.

ವಿನಯ್ ಕಟಿಯಾರ್: ವಿನಯ್ ಕಟಿಯಾರ್ ಸಾವಿರಾರು ಕರಸೇವಕರೊಂದಿಗೆ ಅಯೋಧ್ಯೆಯನ್ನು ತಲುಪಿದ್ದರು ಹಾಗೂ ಬಜರಂಗ ದಳದ ಕಾರ್ಯಕರ್ತರನ್ನು ಕೂಡ ಬಾಬ್ರಿ ಮಸೀದಿ ಧ್ವಂಸಗೊಳಿಸಲು ಪ್ರಚೋದಿಸಿದರು ಎಂದು ಆರೋಪಿಸಲಾಗಿದೆ.

Trending News