Big Incident In Saryu River: ಸರಯೂ ನದಿಯಲ್ಲಿ ಸ್ನಾನದ ವೇಳೆ ನೀರಿನಲ್ಲಿ ಮುಳುಗಿದ ಒಂದೇ ಕುಟುಂಬದ 12 ಜನ

Big Incident In Saryu River - ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ (Ayodhya News) ಸರಯೂ ನದಿಯಲ್ಲಿ 12 ಜನರು ಮುಳುಗಿ ಹೋದ ವರದಿಯಾಗಿದೆ.

Written by - Nitin Tabib | Last Updated : Jul 9, 2021, 05:13 PM IST
  • ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದುರಂತ.
  • ಸ್ನಾನದ ವೇಳೆ ಸರಯೂ ನೀರಿನಲ್ಲಿ ಮುಳುಗಿಹೋದ ಒಂದೇ ಕುಟುಂಬದ 12 ಜನ,
  • ಆರು ಜನರನ್ನು ಹೊರತೆಗೆಯಲಾಗಿದ್ದು, 6 ಜನ ಇದುವರೆಗೂ ನಾಪತ್ತೆ.
Big Incident In Saryu River: ಸರಯೂ ನದಿಯಲ್ಲಿ ಸ್ನಾನದ ವೇಳೆ ನೀರಿನಲ್ಲಿ ಮುಳುಗಿದ ಒಂದೇ ಕುಟುಂಬದ 12 ಜನ  title=
Big Incident In Saryu River (File Photo)

ಅಯೋಧ್ಯಾ: Big Incident In Saryu River - ಉತ್ತರ ಪ್ರದೇಶದ (Uttar Pradesh) ಅಯೋಧ್ಯೆಯಲ್ಲಿ (Ayodhya News) ಸರಯೂ ನದಿಯಲ್ಲಿ 12 ಜನರು ಮುಳುಗಿ ಹೋದ ವರದಿಯಾಗಿದೆ. ಇಲ್ಲಿನ ಗುಪ್ತಾರ ಘಾಟ್ (Guptar Ghat) ನಲ್ಲಿ ಒಂದೇ ಕುಟುಂಬದ 12 ಜನರು ಸ್ನಾನಕ್ಕಿಳಿದ ವೇಳೆ ಘಟನೆ ಸಂಭವಿಸಿದೆ. ಘಟನೆಯ ಕುರಿತು ಮಾಹಿತಿ ಪಡೆದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (CM Yodi Aditya Nath) ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ಆದೇಶ ನೀಡಿದ್ದಾರೆ. ರಕ್ಷಣಾ ಕಾರ್ಯಕ್ಕೆ PAC ಪಡೆಯನ್ನು ನಿಯೋಜಿಸಲಾಗಿದೆ.

ತಾಜಾ ವರದಿಗಳ ಪ್ರಕಾರ ಸರಯೂ (Saryu River) ತೀರದಲ್ಲಿ ನಡೆದ ಘಟನೆಯಲ್ಲಿ ಇದುವರೆಗೆ ಸುಮಾರು 6 ಜನರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಮೂವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 6 ಜನ ಇದುವರೆಗೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ- Zomato App ನಲ್ಲಿ ಈ ವಸ್ತುವನ್ನು ಹುಡುಕಿದರೆ ಲಕ್ಷಾಧಿಪತಿಯಾಗುವ ಅವಕಾಶ..!

ಮಳೆಗಾಲದಲ್ಲಿ ಪ್ರತಿವರ್ಷ ಪ್ರವಾಹವನ್ನು ಎದುರಿಸುವ ಯುಪಿ, ಈ ಬಾರಿ ಕಡಿಮೆ ಪ್ರಭಾವಕ್ಕೆ ಒಳಗಾಗಿದೆ. ಆದರೆ ಮಳೆಗಾಲದಲ್ಲಿ ನದಿಗಳ ನೀರಿನ ಮಟ್ಟ ಗಮನಾರ್ಹವಾಗಿ ಹೆಚ್ಚಾಗಿದೆ. ಹೆಚ್ಚಿನ ನದಿಗಳಲ್ಲಿ ಹರಿವು ಕೂಡ ತುಂಬಾ ಜೋರಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸ್ವಲ್ಪ ಅಜಾಗರೂಕತೆಯು ಕೂಡ ದೊಡ್ಡ ಅಪಘಾತಕ್ಕೆ ಕಾರಣವಾಗುತ್ತದೆ.

ಇದನ್ನೂ ಓದಿ- Coronavirus 3rd Wave ತಡೆಗೆ ಸಿದ್ಧತೆ: 1500 ಆಕ್ಸಿಜನ್ ಸ್ಥಾವರ ಸ್ಥಾಪಿಸಲು ಮೋದಿ ಸರ್ಕಾರದ ಆದೇಶ

15 ಜನರಲ್ಲಿ ಒಟ್ಟು 12 ಜನ ಮುಳುಗಿದ್ದಾರೆ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಸ್ನಾನದ ವೇಳೆ ನದಿಯಲ್ಲಿ ಒಟ್ಟು 15 ಜನರಿದ್ದರು ಎನ್ನಲಾಗಿದೆ. ಅವರ ಪೈಕಿ ಒಟ್ಟು 12 ಜನರು ನೀರಿನಲ್ಲಿ ಮುಳುಗಿದ್ದಾರೆ. ಆದರೆ, ಅಲ್ಲಿಯೇ ಇದ್ದ ಸ್ಥಳೀಯ ಜನರು ತಕ್ಷಣ ನೀರಿಗಿಳಿದು ಮೂವರನ್ನು ರಕ್ಷಿಸಿದ್ದಾರೆ.  ಮುಳುಗಿ ಹೋದವರಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಈ ಕುಟುಂಬ ಆಗ್ರಾದ ಸಿಕಿಂದರಾಬಾದ್ ನಿಂದ ಅಯೋಧ್ಯಾಗೆ (Ayodhya) ಆಗಮಿಸಿತ್ತು ಎನ್ನಲಾಗಿದೆ.

ಇದನ್ನೂ ಓದಿ- ಜುಲೈ 11 ರಂದು ಜನಸಂಖ್ಯಾ ನಿಯಂತ್ರಣಕ್ಕಾಗಿ ಹೊಸ ಕಾಯ್ದೆ ತರಲಿದೆ ಈ ರಾಜ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News