ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ವಾರಣಾಸಿಯಿಂದ ಕಣಕ್ಕೆ ಇಳಿಸುವ ಮೂಲಕ ದಲಿತರ ಮತಗಳನ್ನು ವಿಭಜನೆ ಮಾಡಲು ಮುಂದಾಗಿದ್ದಾರೆ ಎಂದು ಬಿಎಸ್ಪಿ ಮಾಯಾವತಿ ಆರೋಪಿಸಿದ್ದಾರೆ.
With the ill-intention of dividing Dalit votes & taking advantage, the BJP has conspired to field Bhim Army chief Chandrasekhar from Varanasi LS seat. This organisation was formed under BJP conspiracy & with its anti-Dalit mindset, it is now indulging in despicable politics.
— Mayawati (@Mayawati) March 31, 2019
ಗುರುವಾರದಂದು ಚಂದ್ರಶೇಖರ್ ಆಜಾದ್ ಅವರು ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲೇ ಮಾಯಾವತಿಯವರ ಈ ಹೇಳಿಕೆ ಬಂದಿದೆ.ಈಗ ಟ್ವಿಟ್ಟರ್ ಮೂಲಕ ಕಿಡಿ ಕಾರಿರುವ ಮಾಯಾವತಿ " ದಲಿತರ ಮತಗಳನ್ನು ವಿಭಜನೆ ಮಾಡುವ ಉದ್ದೇಶದಿಂದ ಮತ್ತು ಅದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಬಿಜೆಪಿ ವಾರಣಾಸಿಯಿಂದ ಭೀಮ್ ಆರ್ಮಿಯ ಚಂದ್ರಶೇಖರ್ ಅಜಾದ್ ರನ್ನು ಕಣಕ್ಕೆ ಇಳಿಸುವ ಮೂಲಕ ಪಿತೂರಿಗೆ ಮುಂದಾಗಿದೆ.ಈ ಸಂಘಟನೆ ಬಿಜೆಪಿ ದಲಿತ ವಿರೋಧಿ ಮನಸ್ಥಿತಿ ಹಾಗೂ ಪಿತೂರಿಯಿಂದ ಸ್ಥಾಪಿತವಾಗಿದೆ.ಈಗ ಅದು ತುಚ್ಚ ರಾಜಕೀಯದಲ್ಲಿ ತೊಡಗಿದೆ" ಎಂದು ಮಾಯಾವತಿ ಕಿಡಿ ಕಾರಿದ್ದಾರೆ.
The BJP tried hard to help Bhim Army chief Chandrasekhar join the BSP as its mole but failed in its conspiracy. It is very imperative in the national interest to dislodge autocratic, despotic anti-Dalit, OBC & minorities BJP from power. Pls ensure no vote goes waste. My Appeal.
— Mayawati (@Mayawati) March 31, 2019
ಗುರುವಾರದಂದು ಚಂದ್ರಶೇಖರ್ ಆಜಾದ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ " ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ, ಉತ್ತರ ಪ್ರದೇಶದಿಂದ ಯಾರೋ ಗೆಲ್ಲುವುದರ ಮೂಲಕ ಈ ದೇಶವನ್ನು ದುರ್ಬಲಗೊಳಿಸುವುದಕ್ಕೆ ನಾನು ಇಚ್ಚಿಸುವುದಿಲ್ಲ.ಈಗಾಗಲೇ ನಾನು ಮಾಯಾವತಿಗೆ ಅಖಿಲೇಶ್ ಬಾಯಿ ಗೆ ಹೇಳಿದ್ದೇನೆ. ಈ ಕ್ಷೇತ್ರದಲ್ಲಿ ಯಾರಾದರೂ ಸ್ಪರ್ಧಿಸದೆ ಹೋದಲ್ಲಿ ನಾನು ವಾರಣಾಸಿಯಿಂದ ಸ್ಪರ್ಧಿಸುತ್ತೇನೆ. ಮೋದಿ ವಿರುದ್ಧ ಪ್ರಬಲ ಅಭ್ಯರ್ಥಿಯ ಅಗತ್ಯವಿದೆ. ಆದರೆ ಅದು ಈಗ ಸಾಧ್ಯವಿಲ್ಲ. ಆದ್ದರಿಂದ ನಾನು ಮೋದಿ ಸುಲಭವಾಗಿ ಗೆಲ್ಲುವುದಕ್ಕೆ ಇಚ್ಚಿಸುವುದಿಲ್ಲ" ಎಂದು ಅಜಾದ್ ಹೇಳಿದ್ದರು.