ಗೋಮಾಂಸ, ಹಂದಿಮಾಂಸ ತಿನ್ನುತ್ತಿದ್ದ ನೆಹರೂ ಪಂಡಿತರಾಗಲು ಹೇಗೆ ಸಾಧ್ಯ?

ರಾಜಸ್ಥಾನದ ಅಲ್ವಾರ್‌ ಕ್ಷೇತ್ರದ ಬಿಜೆಪಿ ಶಾಸಕ ಬಿಜೆಪಿ ಶಾಸಕ ಜ್ಞಾನ್‌ ದೇವ್‌ ಅಹುಜಾ ಪ್ರಶ್ನೆ.

Last Updated : Aug 11, 2018, 02:41 PM IST
ಗೋಮಾಂಸ, ಹಂದಿಮಾಂಸ ತಿನ್ನುತ್ತಿದ್ದ ನೆಹರೂ ಪಂಡಿತರಾಗಲು ಹೇಗೆ ಸಾಧ್ಯ? title=

ನವದೆಹಲಿ: ಗೋಮಾಂಸ ಮತ್ತು ಹಂದಿಮಾಂಸ ತಿನ್ನುತ್ತಿದ್ದ  ದೇಶದ ಪ್ರಥಮ ಪ್ರಧಾನಿ ಜವಹಾರ್‌ ಲಾಲ್‌ ನೆಹರು ಅವರು ಪಂಡಿತರಾಗಲು ಹೇಗೆ ಸಾಧ್ಯ ಎಂದು ರಾಜಸ್ಥಾನದ ಅಲ್ವಾರ್‌ ಕ್ಷೇತ್ರದ ಬಿಜೆಪಿ ಶಾಸಕ ಬಿಜೆಪಿ ಶಾಸಕ ಜ್ಞಾನ್‌ ದೇವ್‌ ಅಹುಜಾ ಪ್ರಶ್ನಿಸಿದ್ದಾರೆ.

ಶುಕ್ರವಾರ ಬಿಜೆಪಿ ಮುಖ್ಯ ಕಚೇರಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಜ್ಞಾನ್‌ ದೇವ್‌ ಅಹುಜಾ, ನೆರಹೂ ಅವರ ಹೆಸರಿನ ಜತೆ ಸೇರಿಸಲಾಗಿರುವ ಪಂಡಿತ್ ಪದವನ್ನು ಉಲ್ಲೇಖಿಸಿ- ಗೋಮಾಂಸ ಮತ್ತು ಹಂದಿ ಮಾಂಸ ತಿನ್ನುತ್ತಿದ್ದ 'ನೆಹರು ಪಂಡಿತರಲ್ಲವೇ ಅಲ್ಲ. ಆ ಪೂರ್ವ ಪ್ರತ್ಯಯವನ್ನು ಕಾಂಗ್ರೆಸ್‌ ಪಕ್ಷ ಅವರ ಹೆಸರಿನಲ್ಲಿ ಸೇರಿಸಿದ್ದು' ಎಂದಿದ್ದಾರೆ. 

ಇದೇ ವೇಳೆ ರಾಜಸ್ಥಾನದ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಚಿನ್ ಪೈಲೆತ್ಸ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಅಹುಜಾ, 'ರಾಹುಲ್‌ ಗಾಂಧಿ ಎಂದಿಗೂ ಅಜ್ಜಿ ಇಂದಿರಾ ಗಾಂಧಿ ಅವರೊಂದಿಗೆ ದೇಗುಲಗಳಿಗೆ ಭೇಟಿ ನೀಡಿಲ್ಲ. ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಹೇಳಿಕೆ ಸುಳ್ಳು . ಅದನ್ನು ನಿಜ ಮಾಡಿದಲ್ಲಿ ನಾನು ರಾಜಕೀಯ ಸನ್ಯಾಸ ಪಡೆಯುತ್ತೇನೆ, ನಿಜವಾಗಿದ್ದಲ್ಲಿ ಸಚಿನ್‌ ಪೈಲಟ್‌ ರಾಜಕೀಯ ಕ್ಷೇತ್ರ ಬಿಡಬೇಕು' ಎಂದು ಸವಾಲು ಎಸೆದಿದ್ದಾರೆ.
 

Trending News