close

News WrapGet Handpicked Stories from our editors directly to your mailbox

ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ ಉದಿತ್ ರಾಜ್

ಬಿಜೆಪಿ ಸಂಸದ ಉದಿತ್ ರಾಜ್ ಬಿಜೆಪಿ ತೊರೆದು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Updated: Apr 24, 2019 , 02:00 PM IST
ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ ಉದಿತ್ ರಾಜ್

ನವದೆಹಲಿ: ಬಿಜೆಪಿ ಸಂಸದ ಉದಿತ್ ರಾಜ್ ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸದಸ್ಯತ್ವವನ್ನು ಪಡೆದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

ಪ್ರಸ್ತುತ ವಾಯುವ್ಯ ದೆಹಲಿಯ ಬಿಜೆಪಿ ಸಂಸದರಾಗಿರುವ ಉದಿತ್ ರಾಜ್ ಅವರಿಗೆ ಈ ಬಾರಿ ಬಿಜೆಪಿಗೆ ಟಿಕೆಟ್ ನೀಡಿಲ್ಲ. ಅವರ ಸ್ಥಾನದಲ್ಲಿ, ಬಿಜೆಪಿ ಪ್ರಸಿದ್ಧ ಗಾಯಕಿ ಹನ್ಸ್ ರಾಜ್ ಹನ್ಸ್ ಅವರಿಗೆ ಟಿಕೆಟ್ ನೀಡಿತು. ಬಿಜೆಪಿಯ ನಿಷ್ಟಾವಂತ ನಾಯಕನಾಗಿ ಸೇವೆ ಸಲ್ಲಿಸಿದ್ದರು ಲೋಕಸಭೆ ಟಿಕೆಟ್ ನಿರಾಕರಿಸಿದ್ದು ಬೇಸರ ತಂದಿದೆ ಎಂದು ಅವರು ತಮ್ಮ ಅಸಮಾಧನಾ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ತನಗೆ ಟಿಕೆಟ್ ನೀಡದಿದ್ದಲ್ಲಿ ತಾನು ಪಕ್ಷದಿಂದ ರಾಜೀನಾಮೆ ನೀಡುತ್ತೇನೆ ಎಂದು ಸಂಸದ ಉದಿತ್ ರಾಜ್ ಮಂಗಳವಾರ ಸರಣಿ ಟ್ವೀಟ್ ಮಾಡಿದ್ದರು. ಅದರಲ್ಲಿ "ನಾನು ಟಿಕೆಟ್ಗಾಗಿ ಕಾಯುತ್ತಿದ್ದೇನೆ. ನಾನು ಟಿಕೆಟ್ ಪಡೆಯದಿದ್ದಲ್ಲಿ, ಪಕ್ಷಕ್ಕೆ ವಿದಾಯ ಹೇಳುತ್ತೇನೆ" ಎಂದು ತಿಳಿಸಿದ್ದರು.