ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2047ರ ವರೆಗೂ ಅಧಿಕಾರದಲ್ಲಿ ಇರಲಿದ್ದು, ಕಾಂಗ್ರೆಸ್ ಸರ್ಕಾರದ ದೀರ್ಘಾವಧಿ ಆಡಳಿತದ ದಾಖಲೆ ಮುರಿಯಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಅಗರ್ತಲಾ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ಅಗರ್ತಲಾದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರೀಯತೆ ಎಂಬುದು ಬಿಜೆಪಿಯ ಡಿಎನ್ಎ ಅಲ್ಲಿಯೇ ಇದೆ. ಅದೇ ಬಿಜೆಪಿ ಪಕ್ಷದ ಹೆಗ್ಗುರುತು. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಜನ ಭರವಸೆ ಇರಿಸಿದ್ದಾರೆ. ಇದೇ ಕಾರಣಕ್ಕೆ ಸತತ 2ನೇ ಬಾರಿಗೂ ಭರ್ಜರಿ ಗೆಲುವು ನೀಡಿದ್ದಾರೆ. ಮೋದಿ ಸರ್ಕಾರ ದೇಶದಲ್ಲಿನ ಕೋಮು ಸಂಘರ್ಷ, ಭ್ರಷ್ಟಾಚಾರ ನಿಯಂತ್ರಿಸಿದ್ದು, ಬಲಿಷ್ಠ ಭಾರತದ ನಿರ್ಮಾಣ ಮಾಡುತ್ತಿದೆ. ವಿತ್ತೀಯ ಸ್ಥಿರತೆ ಸಾಧಿಸಿದೆ ಎಂದು ಮಾಧವ್ ಹೇಳಿದ್ದಾರೆ.
Ram Madhav, BJP in Tripura: If there's any party which has been in power for longest duration, it's Congress - from 1950 to 1977. I assure you that Modi ji is going to break that record...There will be BJP in power till the time we enter 100th yr of independence in 2047. (07.06) pic.twitter.com/deWi8s8FjB
— ANI (@ANI) June 8, 2019
ಮುಂದುವರೆದು ಮಾತನಾಡುತ್ತಾ, ಕಾಂಗ್ರೆಸ್ ನ 27 ವರ್ಷಗಳ ಕಾಲ ಸುದೀರ್ಘ ಸರ್ಕಾರದ ದಾಖಲೆಯನ್ನು ಬಿಜೆಪಿ ಖಂಡಿತಾ ಮುರಿಯಲಿದೆ. 1950 ರಿಂದ 1977 ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ದಾಖಲೆಯನ್ನು ಬಿಜೆಪಿ ಮುರಿಯಲಿದ್ದು, 2047ರಲ್ಲಿ ಬಿಜೆಪಿ ಸರ್ಕಾರವೇ ಸ್ವಾತಂತ್ರ್ಯ ದಿನಾಚರಣೆಯ ಶತಮಾನೋತ್ಸವ ಆಚರಣೆ ಮಾಡಲಿದೆ. ಆ ಮೂಲಕ ಅತೀ ಹೆಚ್ಚು ಸಮಯ ದೇಶದಲ್ಲಿ ಸರ್ಕಾರ ನಡೆಸಿದ ಮೊದಲ ಪಕ್ಷ ಎಂಬ ದಾಖಲೆ ಬರೆಯಲಿದೆ ಎಂದು ರಾಮ್ ಮಾಧವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.