ನಾಪತ್ತೆಯಾಗಿದ್ದ ಬಾಲಕಿ ದೇಹ ಅಸಾರಾಂ ಬಾಪು ಆಶ್ರಮದಲ್ಲಿ ಪತ್ತೆ

ಉತ್ತರ ಪ್ರದೇಶದ ಗೊಂಡಾದಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದೊಳಗೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಹದಿಹರೆಯದ ಯುವತಿಯ ಮೃತದೇಹ ಪತ್ತೆಯಾದ ಬೆನ್ನಲ್ಲೇ ಈಗ ಸ್ಥಳದಲ್ಲಿ ನೂರಾರು ಜನರು ಸೇರಿದ್ದಾರೆ.

Last Updated : Apr 8, 2022, 06:48 PM IST
  • ಮೃತದೇಹದ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
  • ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ನಾಪತ್ತೆಯಾಗಿದ್ದ ಬಾಲಕಿ ದೇಹ ಅಸಾರಾಂ ಬಾಪು ಆಶ್ರಮದಲ್ಲಿ ಪತ್ತೆ  title=

ನವದೆಹಲಿ: ಉತ್ತರ ಪ್ರದೇಶದ ಗೊಂಡಾದಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದೊಳಗೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಹದಿಹರೆಯದ ಯುವತಿಯ ಮೃತದೇಹ ಪತ್ತೆಯಾದ ಬೆನ್ನಲ್ಲೇ ಈಗ ಸ್ಥಳದಲ್ಲಿ ನೂರಾರು ಜನರು ಸೇರಿದ್ದಾರೆ.

ಮೃತದೇಹದ ಬಗ್ಗೆ ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ-Viral Vido : ಅಬ್ಬಬ್ಬಾ..! ಎಮ್ಮೆಗೆ ಹೆದರಿ ಓಡಿ ಹೋದ ಸಿಂಹಗಳ ಹಿಂಡು

4 ದಿನಗಳಿಂದ ಬಾಲಕಿ ನಾಪತ್ತೆ.!

ಸುದ್ದಿ ವರದಿಗಳ ಪ್ರಕಾರ, ನಾಲ್ಕು ದಿನಗಳ ಹಿಂದೆ ಬಾಲಕಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು ಮತ್ತು ಈಗ ಆಕೆಯ ದೇಹವು ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಕಾರಿನೊಳಗೆ ಪತ್ತೆಯಾಗಿದೆ.ದುರ್ವಾಸನೆ ಬಂದ ಆಶ್ರಮದ ಸಿಬ್ಬಂದಿ ಕಾರಿನ ಬಾಗಿಲು ತೆರೆದಾಗ ಶವ ಪತ್ತೆಯಾಗಿದೆ.ಮೃತದೇಹ ಪತ್ತೆಯಾದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: Career: ಅಮೃತ್ ಮುನ್ನಡೆ ಯೋಜನೆಯಡಿ ಉಚಿತ ಕೋರ್ಸ್ : ಅರ್ಜಿ ಆಹ್ವಾನ

ಇದೇ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಕಾರಿನ ಸಮೇತ ಇಡೀ ಆಶ್ರಮವನ್ನು ಸೀಲ್ ಮಾಡಿ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಿಂದ ಬಾಲಕಿಯನ್ನು ಕೊಂದು ಶವವನ್ನು ಮರೆಮಾಚಲು ಯತ್ನಿಸಿದ ಪ್ರಕರಣ ತೋರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಕೊತ್ವಾಲಿ ಪ್ರದೇಶದ ಬಿಮಾರ್ ಗ್ರಾಮದಲ್ಲಿರುವ ಅಸಾರಾಂ ಬಾಪು ಅವರ ಆಶ್ರಮದಲ್ಲಿ ಕಳೆದ ಹಲವು ದಿನಗಳಿಂದ ಈ ಕಾರನ್ನು ನಿಲ್ಲಿಸಲಾಗಿದ್ದ ಘಟನೆ ವರದಿಯಾಗಿದೆ.

ದುರ್ವಾಸನೆ ಬಂದ ಆಶ್ರಮದ ಕಾವಲುಗಾರ ಕಾರನ್ನು ತೆರೆದು ಶವವನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಮತ್ತು ವಿಧಿವಿಜ್ಞಾನ ತಂಡವು ಆಶ್ರಮ ಮತ್ತು ವಾಹನವನ್ನು ತನಿಖೆ ನಡೆಸುತ್ತಿದೆ.

2018 ರಲ್ಲಿ, ಜೋಧ್‌ಪುರದ ವಿಶೇಷ ನ್ಯಾಯಾಲಯವು ಅಸಾರಾಂ ಬಾಪುಗೆ ಅತ್ಯಾಚಾರದ ಅಪರಾಧಿ ಎಂದು ಘೋಷಿಸಿದ ನಂತರ ಜೀವಾವಧಿ ಶಿಕ್ಷೆ ವಿಧಿಸಲಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News