ನೌಕರ ವರ್ಗಕ್ಕೆ ಬಜೆಟ್‌ನಿಂದ ಹೆಚ್ಚಿನ ನಿರೀಕ್ಷೆ, 5 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತ ಸಾಧ್ಯತೆ!

ಇಂದು ದೇಶದಲ್ಲಿ ಎಲ್ಲರ ಚಿತ್ತ ಕೇಂದ್ರ ಬಜೆಟ್ ನತ್ತ ನೆಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ತೆರಿಗೆದಾರರಿಗೆ ಈ ಬಾರಿ ಬಜೆಟ್‌ನಿಂದ ದೊಡ್ಡ ಪರಿಹಾರ ಪಡೆಯುವ ನಿರೀಕ್ಷೆಯಿದೆ.

Last Updated : Jul 5, 2019, 09:05 AM IST
ನೌಕರ ವರ್ಗಕ್ಕೆ ಬಜೆಟ್‌ನಿಂದ ಹೆಚ್ಚಿನ ನಿರೀಕ್ಷೆ, 5 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತ ಸಾಧ್ಯತೆ! title=

ನವದೆಹಲಿ: 2019 ರ ಬಜೆಟ್:ಇಂದು ದೇಶದಲ್ಲಿ ಎಲ್ಲರ ಚಿತ್ತ ಕೇಂದ್ರ ಬಜೆಟ್ ನತ್ತ ನೆಟ್ಟಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಪೂರ್ಣ ಬಜೆಟ್ ಮಂಡಿಸಲಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ತೆರಿಗೆದಾರರಿಗೆ ಈ ಬಾರಿ ಬಜೆಟ್‌ನಿಂದ ದೊಡ್ಡ ಪರಿಹಾರ ಪಡೆಯುವ ನಿರೀಕ್ಷೆಯಿದೆ.

ಮೂಲಗಳ ಪ್ರಕಾರ, ಸರ್ಕಾರವು 80 ಸಿ ಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು 1.5 ಲಕ್ಷ ರೂ.ಗಳಿಂದ 2 ಲಕ್ಷ ರೂ.ಗೆ ಹೆಚ್ಚಿಸಬಹುದು.  ಬಜೆಟ್‌ನಲ್ಲಿ ಸರ್ಕಾರ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಿದರೆ, ಸೇವಾ ವರ್ಗಕ್ಕೆ ಗರಿಷ್ಠ ಲಾಭವಾಗುತ್ತದೆ. ಫೆಬ್ರವರಿ 1 ರಂದು ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಸರ್ಕಾರದಿಂದ 5 ಲಕ್ಷದವರೆಗೆ ಆದಾಯ ಹೊಂದಿರುವ ಜನರಿಗೆ ರಿಯಾಯಿತಿ ಘೋಷಿಸಲಾಯಿತು. ಆದರೆ ಈ ಬಾರಿ, ದೊಡ್ಡ ರಿಯಾಯಿತಿ ಬಗ್ಗೆ ಭರವಸೆ ಇದೆ.

ಸರ್ಕಾರದಿಂದ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಸಾಧ್ಯತೆ: 
ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರವು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ 1.5 ಲಕ್ಷ ರೂ. ಇರುವ ತೆರಿಗೆ ಮಿತಿಯನ್ನು 2 ಲಕ್ಷ ರೂಪಾಯಿಗೆ ಹೆಚ್ಚಿಸಬಹುದು ಎನ್ನಲಾಗುತ್ತಿದೆ.

ಹೊಸ ತೆರಿಗೆ ಸ್ಲ್ಯಾಬ್:
ಆದಾಯ ತೆರಿಗೆ ನಿಯಮಗಳ ಪ್ರಕಾರ, ತೆರಿಗೆದಾರರು 2 ಲಕ್ಷ 50 ಸಾವಿರ ರೂಪಾಯಿಗಳ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ. ಆದರೆ, ಈಗ ಇದನ್ನು ನೇರವಾಗಿ 3 ಲಕ್ಷ ರೂ.ಗೆ ಹೆಚ್ಚಿಸಬಹುದು. ಇದು ಸಂಭವಿಸಿದಲ್ಲಿ, ಸೆಕ್ಷನ್ 80 ಸಿ ಯಲ್ಲಿ ಹೂಡಿಕೆಯೊಂದಿಗೆ ತೆರಿಗೆದಾರರು 5 ಲಕ್ಷ ರೂ.ಗಳವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ, 

ಗೃಹ ಸಾಲ ಬಡ್ಡಿ ದರದಲ್ಲಿ ರಿಯಾಯಿತಿ ಸಾಧ್ಯತೆ:
ಗೃಹ ಸಾಲದ ಮೇಲಿನ ಬಡ್ಡಿ ವಿನಾಯಿತಿ 2.5 ಲಕ್ಷಕ್ಕೆ ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ 2 ಲಕ್ಷ ರೂಪಾಯಿ ಇರುವ ವಿನಾಯಿತಿಯನ್ನು 2.5 ಲಕ್ಷಕ್ಕೆ ಹೆಚ್ಚಿಸುವ ನಿರೀಕ್ಷೆಯಿದೆ. 

ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ: 
ಉದ್ಯೋಗದಾತರಿಂದ ಕಳೆದ ಹಲವಾರು ವರ್ಷಗಳಿಂದ ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆ ಮಾಡುವ ಬೇಡಿಕೆ ಇದೆ. ಇದಕ್ಕೆ ಮತ್ತೊಂದು ಕಾರಣವೆಂದರೆ ಜಿಡಿಪಿ ಬೆಳವಣಿಗೆ ಕಳೆದ ಐದು ವರ್ಷಗಳ ಕೆಳಮಟ್ಟದಲ್ಲಿದೆ. ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 5.8 ರಷ್ಟಿತ್ತು. ಮುಂದಿನ ಹಣಕಾಸು ವರ್ಷದಲ್ಲಿ ಶೇ 7 ರಷ್ಟು ತಲುಪುವ ಭರವಸೆಯನ್ನು ಸರ್ಕಾರ ವ್ಯಕ್ತಪಡಿಸಿದೆ. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವುದರಿಂದ ಆರ್ಥಿಕತೆಗೆ ಉತ್ತೇಜನ ಸಿಗುತ್ತದೆ. ಆದರೆ ಸರ್ಕಾರದ ಮೇಲೆ ಹೊರೆ ಹೆಚ್ಚಾಗುತ್ತದೆ.
 

Trending News