'ಪದ್ಮಾವತಿ' ಅಲ್ಲ, 'ಪದ್ಮಾವತ್' : ಷರತ್ತುಬದ್ಧ ಯು/ಎ ಪ್ರಮಾಣಪತ್ರ ನೀಡಿದ ಸಿಬಿಎಫ್ಸಿ

ದೇಶದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದ `ಪದ್ಮಾವತಿ' ಚಿತ್ರ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದ್ದು, ಚಿತ್ರದ ಹೆಸರನ್ನು `ಪದ್ಮಾವತಿ'ಗೆ ಬದಲಾಗಿ `ಪದ್ಮಾವತ್' ಎಂದು ಬದಲಾಯಿಸುವಂತೆ ಸಲಹೆ ನೀಡಿದೆ. 

Last Updated : Dec 30, 2017, 05:38 PM IST
'ಪದ್ಮಾವತಿ' ಅಲ್ಲ, 'ಪದ್ಮಾವತ್' : ಷರತ್ತುಬದ್ಧ ಯು/ಎ ಪ್ರಮಾಣಪತ್ರ ನೀಡಿದ ಸಿಬಿಎಫ್ಸಿ title=

ನವದೆಹಲಿ : ದೇಶದಲ್ಲಿ ಭಾರಿ ವಿವಾದ ಹುಟ್ಟುಹಾಕಿದ್ದ `ಪದ್ಮಾವತಿ' ಚಿತ್ರ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದ್ದು, ಚಿತ್ರದ ಹೆಸರನ್ನು `ಪದ್ಮಾವತಿ'ಗೆ ಬದಲಾಗಿ `ಪದ್ಮಾವತ್' ಎಂದು ಬದಲಾಯಿಸುವಂತೆ ಸಲಹೆ ನೀಡಿದೆ. 

ಈ ಚಿತ್ರದಲ್ಲಿ ಅಭಿನಯಿಸಿದ ನಂತರ ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅವರೂ ಈ ವಿವಾದದ ಸುಳಿಯಲ್ಲಿ ಸಿಲುಕಿದ್ದರು. ಸಂಜಯ್ ಲೀಲಾ ಬನ್ಸಾಲಿಯವರ ನಿರ್ದೇಶನದ ಈ ಚಲನಚಿತ್ರವು ಡಿಸೆಂಬರ್ 1, 2017 ರಂದು ಆರಂಭದ ಬಿಡುಗಡೆ ದಿನಾಂಕವನ್ನು ಹೊಂದಿತ್ತು. ಆದರೆ ಸಿಬಿಎಫ್ಸಿಯಿಂದ ಕ್ಲಿಯರೆನ್ಸ್ ಪಡೆಯಲು ವಿಫಲವಾದ ಕಾರಣ ಬಿಡುಗಡೆ ವಿಳಂಬವಾಗಿತ್ತು. 

ವರದಿಗಳ ಪ್ರಕಾರ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಡಿಸೆಂಬರ್ 28 ರಂದು ಪರೀಕ್ಷಾ ಸಮಿತಿ ಸಭೆಯನ್ನು ನಡೆಸಿತ್ತು. ಅದರಂತೆ ಚಿತ್ರದ ನಿರ್ಮಾಪಕರು ಸಮಿತಿಯ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡು ಚಿತ್ರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ಸೂಚನೆ ನೀಡಿ ಚಲನಚಿತ್ರಕ್ಕೆ U / A ಪ್ರಮಾಣೀಕರಣವನ್ನು ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಚಿತ್ರದ ನಿರ್ಮಾಪಕರು ಮತ್ತು ಸಮಾಜದ ಸ್ವಾಸ್ಥವನ್ನು ಗಮನದಲ್ಲಿಟ್ಟುಕೊಂಡು ಸಮತೋಲನವನ್ನು ಕಾಯ್ದುಕೊಳ್ಳಲಾಗಿದೆ. ಚಿತ್ರದ ಸುತ್ತಲಿನ ಸಂಕೀರ್ಣತೆಗಳು ಮತ್ತು ಕಳವಳಗಳನ್ನು ಪರಿಗಣಿಸಿ ನಾವು ಈ ಚಿತ್ರದ ಸೆನ್ಸಾರ್ ಗಾಗಿ ಸಮಿತಿಯೊಂದನ್ನು ರಚಿಸಿದ್ದೆವು ಮತ್ತು ಹಲವು ಬದಲಾವಣೆಗಳಿಗೆ ಸಮಿತಿ ಶಿಫಾರಸು ಮಾಡಿದೆ ಎಂದು ಸೆನ್ಸಾರ್ ಬೋರ್ಡ್ ತಿಳಿಸಿದೆ. 

ಈ ಹಿಂದೆ ಪದ್ಮಾವತಿ ಚಿತ್ರದಲ್ಲಿ ರಾಜಪೂತರ ರಾಣಿಯನ್ನು ಅವಮಾನಿಸಲಾಗಿದೆ, ಇತಿಹಾಸವನ್ನು ತಿರುಚಲಾಗಿದೆ ಎಂದು ಕರಣಿ ಸೇನಾ ಸಮಿತಿ, ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ತಡೆ ಹಿಡಿಯಲಾಗಿತ್ತು. 

Trending News