ಚಂದ್ರಶೇಖರ್ ಆಜಾದ್ ಅವರ ಶೌರ್ಯ ಯುವಕರಿಗೆ ಸ್ಫೂರ್ತಿ- ಪ್ರಧಾನಿ ಮೋದಿ

     

Last Updated : Jul 29, 2018, 04:39 PM IST
ಚಂದ್ರಶೇಖರ್ ಆಜಾದ್ ಅವರ ಶೌರ್ಯ ಯುವಕರಿಗೆ ಸ್ಫೂರ್ತಿ- ಪ್ರಧಾನಿ ಮೋದಿ  title=
photo:ani

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾತನಾಡುತ್ತಾ, ಸ್ವಾತಂತ್ರ್ಯ ಹೋರಾಟಕ್ಕಾಗಿ  ಅವರ ಶೌರ್ಯ ಮತ್ತು ಉತ್ಸಾಹ ಯುವಕರಿಗೆ ಸ್ಫೂರ್ತಿ ಎಂದರು.

ಮಾನ್ ಕಿ ಬಾತ್ ಅವರ 46 ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನ ಮಂತ್ರಿ, "ಚಂದ್ರಶೇಖರ್ ಆಜಾದ್ರ ಶೌರ್ಯ ಮತ್ತು ಸ್ವಾತಂತ್ರ್ಯದ ಉತ್ಸಾಹ ಅನೇಕ ಯುವಜನರಿಗೆ ಸ್ಫೂರ್ತಿ ನೀಡಿದೆ. ಆಜಾದ್ ರು ತನ್ನ ಜೀವನವನ್ನು ತ್ಯಾಗ ಮಾಡಿದರೆ ಹೊರತು ವಿದೇಶಿಯರಿಗೆ ಶರಣಾಗಲಿಲ್ಲ ಎಂದರು. 

ಆಜಾದ್ ಭಾರತದಲ್ಲಿ ಬ್ರಿಟೀಷರ ವಿರುದ್ಧದ ಹೋರಾಟಕ್ಕೆ ಹೆಸರು ವಾಸಿಯಾಗಿದ್ದರು. ಆಜಾದ್ 1925 ರ ಆಗಸ್ಟ್ನಲ್ಲಿ ಷಹಜಹಾನ್ಪುರದಿಂದ ಲಕ್ನೌಗೆ  ಸಾಗುತ್ತಿದ್ದ ರೈಲನ್ನು ತಡೆ ಹಿಡಿದು ಹಣವನ್ನು ಲೂಟಿ ಮಾಡಿದ್ದರು.ಅಲ್ಲದೆ ಅವರು  ಬ್ರಿಟೀಷ್ ಅಧಿಕಾರಿಗಳ ವಿರುದ್ಧ ಕ್ರಾಂತಿಕಾರಿ ಚಟುವಟಿಕೆ ಹೊಸ ಹಂತಗಳಿಗೆ ಹೆಸರಾಗಿದ್ದರು.1906 ರ ಜುಲೈ 23 ರಂದು ಮಧ್ಯಪ್ರದೇಶದಲ್ಲಿ ಜನಿಸಿದ ಆಜಾದ್ ಅಲಹಾಬಾದ್ನಲ್ಲಿ ಫೆಬ್ರವರಿ 27, 1931 ರಂದು ಪೊಲೀಸ್ ಎನ್ಕೌಂಟರ್ನಲ್ಲಿ ಕೊಲ್ಲಲ್ಪಟ್ಟರು.

ಚಂದ್ರಶೇಖರ್ ಅವರ ಅಜಾದ್ ರ  112 ನೆಯ ಜನ್ಮ ವಾರ್ಷಿಕೋತ್ಸವವನ್ನು ಜುಲೈ 23 ರಂದು ಆಚರಿಸಲಾಯಿತು.

Trending News