Rahul Gandhi Sprint: ಭಾರತ ಜೋಡೋ ಯಾತ್ರೆಗೆ ಏಕಾಏಕಿ ಬಂದ ಮಕ್ಕಳು: ಆಗ ರಾಹುಲ್ ಗಾಂಧಿ ಮಾಡಿದ್ದೇನು ನೋಡಿ

ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಭಾನುವಾರ ಬೆಳಗ್ಗೆ ಜಡಚರ್ಲಾದಿಂದ ಪಾದಯಾತ್ರೆ ಆರಂಭಿಸಿದ್ದು, 22 ಕಿ.ಮೀ ದೂರ ಕ್ರಮಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದು ತೆಲಂಗಾಣದಲ್ಲಿ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'ಯ ಐದನೇ ದಿನವಾಗಿದೆ.

Written by - Bhavishya Shetty | Last Updated : Oct 30, 2022, 01:01 PM IST
    • ಭಾರತ್ ಜೋಡೋ ಯಾತ್ರೆ’ಯಲ್ಲಿ ಭಾನುವಾರ ಕುತೂಹಲಕಾರಿ ದೃಶ್ಯ ಕಂಡುಬಂತು
    • ರಾಹುಲ್ ಗಾಂಧಿ ಕೆಲವು ಶಾಲಾ ವಿದ್ಯಾರ್ಥಿಗಳೊಂದಿಗೆ ಇದ್ದಕ್ಕಿದ್ದಂತೆ ಓಡಲು ಪ್ರಾರಂಭಿಸಿದರು
    • ರಾಹುಲ್ ಗಾಂಧಿಯ ಈ ರೂಪವನ್ನು ನೋಡಿ ಕೆಲವರು ಆಶ್ಚರ್ಯ ಪಟ್ಟಿದ್ದಾರೆ
Rahul Gandhi Sprint: ಭಾರತ ಜೋಡೋ ಯಾತ್ರೆಗೆ ಏಕಾಏಕಿ ಬಂದ ಮಕ್ಕಳು: ಆಗ ರಾಹುಲ್ ಗಾಂಧಿ ಮಾಡಿದ್ದೇನು ನೋಡಿ title=
Rahul Gandhi

Congress Bharat Jodo Yatra in Telangana: ಕಾಂಗ್ರೆಸ್ ನ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಭಾನುವಾರ ಕುತೂಹಲಕಾರಿ ದೃಶ್ಯ ಕಂಡುಬಂತು. ವಾಸ್ತವವಾಗಿ, ಈ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿ ಭಾನುವಾರದ ಪಾದಯಾತ್ರೆಯಲ್ಲಿ ಕೆಲವು ಶಾಲಾ ವಿದ್ಯಾರ್ಥಿಗಳೊಂದಿಗೆ ಇದ್ದಕ್ಕಿದ್ದಂತೆ ಓಡಲು ಪ್ರಾರಂಭಿಸಿದರು. ರಾಹುಲ್ ಗಾಂಧಿ ಅವರ ದಿಢೀರ್ ಓಟದಿಂದಾಗಿ ಅವರ ಭದ್ರತಾ ಸಿಬ್ಬಂದಿ, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತಿತರರು ಓಡಲಾರಂಭಿಸಿದರು. ರಾಹುಲ್ ಗಾಂಧಿಯ ಈ ರೂಪವನ್ನು ನೋಡಿ ಕೆಲವರು ಆಶ್ಚರ್ಯ ಪಟ್ಟಿದ್ದಾರೆ.

ಇದನ್ನೂ ಓದಿ: ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಬೆಂಕಿ ತಗುಲಿ 4 ಸಾವು, 10 ಮಂದಿಗೆ ಗಾಯ

ತೆಲಂಗಾಣದಲ್ಲಿ 375 ಕಿ.ಮೀ ಪ್ರಯಾಣ:

ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಭಾನುವಾರ ಬೆಳಗ್ಗೆ ಜಡಚರ್ಲಾದಿಂದ ಪಾದಯಾತ್ರೆ ಆರಂಭಿಸಿದ್ದು, 22 ಕಿ.ಮೀ ದೂರ ಕ್ರಮಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ಇದು ತೆಲಂಗಾಣದಲ್ಲಿ ಕಾಂಗ್ರೆಸ್‌ನ 'ಭಾರತ್ ಜೋಡೋ ಯಾತ್ರೆ'ಯ ಐದನೇ ದಿನವಾಗಿದೆ. ಭಾನುವಾರದ ಪಾದಯಾತ್ರೆಯನ್ನು ಮುಕ್ತಾಯಗೊಳಿಸುವ ಮುನ್ನ ಸಂಜೆ ಶಾದ್‌ನಗರದ ಸೋಲಿಪುರ ಜಂಕ್ಷನ್‌ನಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತೆಲಂಗಾಣದ ಏಳು ಲೋಕಸಭೆ ಮತ್ತು 19 ವಿಧಾನಸಭಾ ಕ್ಷೇತ್ರಗಳಲ್ಲಿ ಹಾದು ಹೋಗುವ ಯಾತ್ರೆಯು ಒಟ್ಟು 375 ಕಿ.ಮೀ ದೂರ ಕ್ರಮಿಸಲಿದ್ದು, ಬಳಿಕ ನವೆಂಬರ್ 7ರಂದು ಮಹಾರಾಷ್ಟ್ರ ಪ್ರವೇಶಿಸಲಿದೆ. ನವೆಂಬರ್ 4 ರಂದು ಯಾತ್ರೆಗೆ ಒಂದು ದಿನದ ವಿರಾಮ ಸಿಗಲಿದೆ.

 

 

ಇದನ್ನೂ ಓದಿ: ಅಯೋಧ್ಯೆಗೆ ಬಂದ NRI ಮಹಿಳೆಯ ಪಾಸ್ ಪೋರ್ಟ್-ಹಣ ಕಳವು

ಸೆಪ್ಟೆಂಬರ್ 7 ರಂದು ತಮಿಳುನಾಡಿನಿಂದ ಯಾತ್ರೆ ಆರಂಭ

ವಯನಾಡ್ ಸಂಸದ ರಾಹುಲ್ ಅವರು 'ಭಾರತ್ ಜೋಡೋ ಯಾತ್ರೆ'ಯಲ್ಲಿ ಕ್ರೀಡೆ, ವ್ಯಾಪಾರ ಮತ್ತು ಮನರಂಜನಾ ಕ್ಷೇತ್ರದ ವ್ಯಕ್ತಿಗಳು ಮತ್ತು ವಿವಿಧ ಸಮುದಾಯಗಳ ಬುದ್ಧಿಜೀವಿಗಳು ಮತ್ತು ಮುಖಂಡರನ್ನು ಭೇಟಿ ಮಾಡಲಿದ್ದಾರೆ. ತೆಲಂಗಾಣದಾದ್ಯಂತ ಇರುವ ಪ್ರಾರ್ಥನಾ ಸ್ಥಳಗಳು, ಮಸೀದಿಗಳು ಮತ್ತು ದೇವಾಲಯಗಳಿಗೂ ರಾಹುಲ್ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರು ತಿಳಿಸಿದ್ದಾರೆ. 'ಭಾರತ್ ಜೋಡೋ ಯಾತ್ರೆ' ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ತೆಲಂಗಾಣ ಯಾತ್ರೆ ಆರಂಭಿಸುವ ಮುನ್ನ ರಾಹುಲ್ ಕೇರಳ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಪಾದಯಾತ್ರೆ ಕೈಗೊಂಡಿದ್ದರು. ತೆಲಂಗಾಣ ಪ್ರದೇಶ ಕಾಂಗ್ರೆಸ್ ಯಾತ್ರೆಯನ್ನು ಸಂಘಟಿಸಲು 10 ವಿಶೇಷ ಸಮಿತಿಗಳನ್ನು ರಚಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News