Ajmer dargah clash : ಅಜ್ಮೀರ್ ದರ್ಗಾದಲ್ಲಿ ಉರುಸ್ ಸಮಯದಲ್ಲಿ ಹೊಡೆದಾಟ ನಡೆದಿದೆ. ಮಾಹಿತಿ ಪ್ರಕಾರ, ವಿವಾದಾತ್ಮಕ ಘೋಷಣೆ ಕೂಗಿರುವ ಹಿನ್ನೆಲೆಯಲ್ಲಿ ಘರ್ಷಣೆ ಸಂಭವಿಸಿದೆ ಎನ್ನಲಾಗಿದೆ. ಖಾದೀಮ್ ಮತ್ತು ಜರೀನ್ ಗುಂಪುಗಳ ಮಧ್ಯೆ ಪರಸ್ಪರ ಘರ್ಷಣೆ ನಡೆದಿದೆ ಎನ್ನಲಾಗಿದೆ. ಈ ಘರ್ಷಣೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಖ್ವಾಜಾ ಮೊಯಿನುದ್ದೀನ್ ಚಿಶ್ತಿಯ ದರ್ಗಾದಲ್ಲಿ 811 ನೇ ಉರುಸ್ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಬರೇಲ್ವಿ ಸಮುದಾಯದ ಕೆಲವರು ಅಜ್ಮೀರ್ ಷರೀಫ್ ದರ್ಗಾದೊಳಗೆ ಘೋಷಣೆಗಳನ್ನು ಕೂಗಿದರು ಎನ್ನಲಾಗಿದೆ. ಇದು ದರ್ಗಾದ ಖಾದೀಮ್ ಗಳ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮ ಘೋಷಣೆ ಕೂಗುತ್ತಿದ್ದವರೊಂದಿಗೆ ವಾಗ್ವಾದ ನಡೆದಿದೆ ಎಂದು ಹೇಳಲಾಗುತ್ತಿದೆ. ಸಿದರು. ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಳಿಸಲಾಯಿತು.
ಬರೇಲ್ವಿ ಸಮುದಾಯದವರು ದರ್ಗಾದಲ್ಲಿ ಘೋಷಣೆಗಳನ್ನು ಕೂಗುತ್ತಿದ್ದರು. ಈ ಘೋಷಣೆಯನ್ನು ನಾವು ವಿರೋಧಿಸಿದ್ದೇವೆ ಎನ್ನುವುದು ಖಾದೀಮ್ ಗಳ ಆರೋಪ. ಇನ್ನೊಂದೆಡೆ, ದರ್ಗಾದ ಜನ್ನತಿ ದರ್ವಾಜಾ ಬಳಿ ಘೋಷಣೆ ಕೂಗುತ್ತಿದ್ದವರ ಜತೆ ಖಾದೀಮ್ ಗಳು ಘರ್ಷಣೆ ನಡೆಸಿದ್ದಾರೆ ಎಂದು ಕೂಡಾ ಹೇಳಲಾಗುತ್ತಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ರೀತಿಯ ದೂರು ದಾಖಲಾಗಿಲ್ಲ.
ಇದನ್ನೂ ಓದಿ : ಗಾಂಧೀಜಿ ಸ್ಮರಣೆ: 75 ವರ್ಷಗಳ ಬಳಿಕವೂ ಪ್ರಸ್ತುತವಾಗಿರುವ ಗಾಂಧೀಜಿಯವರ ಶಾಂತಿ ಮತ್ತು ನ್ಯಾಯದ ಬೋಧನೆಗಳು
ಘರ್ಷಣೆ ಆರಂಭವಾದ ತಕ್ಷಣ ದರ್ಗಾದ ಠಾಣಾಧಿಕಾರಿ ಅಮರ್ ಸಿಂಗ್ ಭಾಟಿ ಸ್ಥಳಕ್ಕೆ ಆಗಮಿಸಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಆದರೆ, ಈ ಹೊಡೆದಾಟದ ವಿಡಿಯೋ ಮಾತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ದೊಡ್ಡ ಸಂಖ್ಯೆಯ ಜನರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಪ್ರತಿ ವರ್ಷ ಪ್ರಸಿದ್ಧ ಸೂಫಿ ಸಂತರಲ್ಲಿ ಒಬ್ಬರಾದ ಚಿಶ್ತಿಯ ಪುಣ್ಯತಿಥಿಯಂದು ಉರುಸ್ ಆಯೋಜಿಸಲಾಗುತ್ತದೆ. ಚಿಶ್ತಿಯನ್ನು 'ಗರೀಬ್ ನವಾಜ್' ಎಂದೂ ಕರೆಯುತ್ತಾರೆ. ಉರುಸ್ ಸಮಯದಲ್ಲಿ, ಹೆಚ್ಚಿನ ಸಂಖ್ಯೆಯ ಜನರು ಅಜ್ಮೀರ್ ಶರೀಫ್ ದರ್ಗಾಕ್ಕೆಆಗಮಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಕೂಡಾ ಪ್ರತಿ ವರ್ಷವೂ ಉರುಸ್ ಸಮಯದಲ್ಲಿ ಈ ದರ್ಗಾಕ್ಕೆ ಚಾದರ್ ಕಳುಹಿಸುತ್ತಾರೆ. ಈ ವರ್ಷವೂ ಇಲ್ಲಿ ಮೋದಿ ಅವರು ಕಳುಹಿಸಿರುವ ಚಾದರ್ ಅರ್ಪಿಸಲಾಗಿದೆ.
ಇದನ್ನೂ ಓದಿ : Budget 2023: ಕೇಂದ್ರ ಬಜೆಟ್ ಗೆ ಸಂಬಂಧಿಸಿದ ಕೆಲವು ಕುತೂಹಲಕರ ಸಂಗತಿಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.