ಚೆನ್ನೈ: ದೇಶದ 35ನೇ ಸಂವಹನ ಉಪಗ್ರಹ ಜಿಸ್ಯಾಟ್ -7ಎ ಬುಧವಾರ ಸಂಜೆ 4.10ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಮಂಗಳವಾರ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ತಿಳಿಸಿದೆ.
ಇಸ್ರೋ ಅಭಿವೃದ್ಧಿಪಡಿಸಿರುವ GSAT-7A ಉಪಗ್ರಹವು 2,250 ಕೆ.ಜಿ ತೂಕವಿದ್ದು, ಜಿಎಸ್‌ಎಲ್‌ವಿ-ಎಫ್11 ರಾಕೆಟ್ ಮೂಲಕ ಇದನ್ನು ಅಂತರಿಕ್ಷಕ್ಕೆ ಸೇರಿಸಲಾಗುವುದು.
GSAT-11: ಈಗ ಭಾರತದ ಮೂಲ ಮೂಲೆಯಲ್ಲೂ ಸಿಗಲಿದೆ ಇಂಟರ್ನೆಟ್
ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸುವ ಈ ಉಪಗ್ರಹವು ಭಾರತೀಯ ಭೂ ಪ್ರದೇಶದಲ್ಲಿ ಗ್ರಾಹಕರಿಗೆ ಕ್ಯು-ಬ್ಯಾಂಡ್ ಸೇವೆಯನ್ನು ಕಲ್ಪಿಸುವಲ್ಲಿ ನೆರವಾಗಲಿದೆ. ಅಲ್ಲದೆ ಈ ಉಪಗ್ರಹವು ಕೆ-ಯು ಬ್ಯಾಂಡ್ ಸಂವಹನ ಸಾಮರ್ಥ್ಯಗಳನ್ನು ಒದಗಿಸುತ್ತದೆ.
GSAT-7A ಏರ್ ಫೋರ್ಸ್ (ಐಎಎಫ್) ಗೆ ಸಮರ್ಪಿತವಾಗಿದೆ. ರೇಡಾರ್ ಸ್ಟೇಷನ್ಸ್ ಗಳ, ಏರ್ ಬೊರ್ನ್ ವಾರ್ನಿಂಗ್ ಅಂಡ್ ಕಂಟ್ರೋಲ್ ಏರ್ ಕ್ರಾಫ್ಟ್ ಮತ್ತು ವಾಯುನೆಲೆಗಳ ಮಧ್ಯೆ ಸುಧಾರಿತ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲಿದೆ ಎಂದು ಇಸ್ರೋ ತಿಳಿಸಿದೆ.