ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ 10 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಭಾನುವಾರ ಸಂಜೆ ಬಿಡುಗಡೆ ಮಾಡಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿ.ಕೆ.ಹರಿಪ್ರಸಾದ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದೆ.
ಕರ್ನಾಟಕದ 18 ಲೋಕಸಭಾ ಕ್ಷೇತ್ರಗಳಿಗೆ ಶನಿವಾರ ತಡರಾತ್ರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದ ಕಾಂಗ್ರೆಸ್, ಬೆಂಗಳೂರು ದಕ್ಷಿಣ ಹಾಗೂ ಧಾರವಾಡ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರಲಿಲ್ಲ. ಇಂದು ಬಿಡುಗಡೆ ಮಾಡಿರುವ 10 ಅಭ್ಯರ್ಥಿಗಳ ಪಟ್ಟಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಘೋಷಿಸಿದ್ದು, ಧಾರವಾಡ ಕ್ಷೇತ್ರದ ಅಭ್ಯರ್ಥಿ ಹೆಸರು ಇನ್ನೂ ಘೋಷಣೆಯಾಗಬೇಕಿದೆ.
ಉಳಿದಂತೆ, ಬಿಹಾರದ ಕಿಶನ್ ಗಂಜ್ ಕ್ಷೇತ್ರದಿಂದ ಜಾವೇದ್, ಕಟಿಹಾರ್ ಕ್ಷೇತ್ರದಿಂದ ತಾರಿಕ್ ಅನ್ವರ್, ಪುರ್ನಿಯಾ ಕ್ಷೇತ್ರದಿಂದ ಉದಯ್ ಸಿಂಗ್, ಬಾರಾಮುಲ್ಲಾ ಕ್ಷೇತ್ರದಿಂದ ಹಾಜು ಫಾರುಕ್ ಮಿರ್, ಮಹಾರಾಷ್ಟ್ರದ ಅಕೋಲಾದಿಂದ ಹಿದಯತ್ ಪಟೇಲ್, ರಾಮ್ಟೆಕ್ ಕ್ಷೇತ್ರದಿಂದ ಕಿಶೋರ್ ಉತ್ತಮರಾವ್, ಚಂದ್ರಾಪುರ್ ಕ್ಷೇತ್ರದಿಂದ ಸುರೇಶ ಧನೋರ್ಕರ್, ಹಿಂಗೋಲಿ ಕ್ಷೇತ್ರದಿಂದ ಸುಭಾಷ್ ವಾಂಖೆಡೆ ಮತ್ತು ತಮಿಳುನಾಡಿನ ಶಿವಗಂಗಾ ಕ್ಷೇತ್ರದಿಂದ ಕಾರ್ತಿ ಚಿದಂಬರಂಗೆ ಟಿಕೆಟ್ ನೀಡಿ ಘೋಷಣೆ ಮಾಡಿದೆ.
Congress releases list of 10 candidates-Tariq Anwar to contest from Bihar's Katihar,BK Hariprasad to contest from Bengaluru South, Karti Chidambaram to contest from Tamil Nadu's Sivaganga & Suresh Dhanorkar to contest from Chandrapur in Maharashtra #LokSabhaElections2019 pic.twitter.com/9RUbnkBQ2I
— ANI (@ANI) March 24, 2019