ಸಂಸತ್ತಿನಲ್ಲಿ ಭದ್ರತಾ ಸಿಬ್ಬಂದಿಯಿಂದ ಮಹಿಳಾ ಸಂಸದರ ಮೇಲೆ ಹಲ್ಲೆ: ಕಾಂಗ್ರೆಸ್ ಆರೋಪ

ಈವರೆಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಸದನದೊಳಗಿನ ಭದ್ರತಾ ಸಿಬ್ಬಂದಿ ಮಹಿಳಾ ಸಂಸದರೊಂದಿಗೆ ಈ ರೀತಿ ವರ್ತಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಲೋಕಸಭೆಯಲ್ಲಿ ಹೇಳಿದರು.

Last Updated : Nov 25, 2019, 03:47 PM IST
ಸಂಸತ್ತಿನಲ್ಲಿ ಭದ್ರತಾ ಸಿಬ್ಬಂದಿಯಿಂದ ಮಹಿಳಾ ಸಂಸದರ ಮೇಲೆ ಹಲ್ಲೆ: ಕಾಂಗ್ರೆಸ್ ಆರೋಪ title=

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುವ ವೇಳೆ ಕಾಂಗ್ರೆಸ್ ಪಕ್ಷದ ಮಹಿಳಾ ಸಂಸದೆಯರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ  (Adhir Ranjan Chowdhury) ಆರೋಪಿಸಿದ್ದಾರೆ.

ಸೋಮವಾರ (ನವೆಂಬರ್ 25) ಲೋಕಸಭೆಯಲ್ಲಿ ಮಹಿಳಾ ಸಂಸದರನ್ನು ಸದನದೊಳಗೆ ಮಾರ್ಷಲ್‌ಗಳು ತಳ್ಳಿದ್ದಾರೆ ಎಂದು ಆರೋಪಿಸಿರುವ  ಅಧೀರ್ ರಂಜನ್ ಚೌಧರಿ,  ಪುರುಷ ಸಂಸದರನ್ನು ತಳ್ಳುವುದನ್ನು ಸಹ ಸಹಿಸಬಹುದು. ಆದರೆ, ಈವರೆಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಸದನದೊಳಗಿನ ಭದ್ರತಾ ಸಿಬ್ಬಂದಿ ಮಹಿಳಾ ಸಂಸದರೊಂದಿಗೆ ಈ ರೀತಿ ವರ್ತಿಸಿದ್ದಾರೆ ಎಂದು ಅವರು ಹೇಳಿದರು.

ಸಂಸತ್ತಿನಲ್ಲಿ ಮಾತನಾಡುವುದು ನಮ್ಮ ಹಕ್ಕು. ಅದರಿಂದ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ ಅಧೀರ್ ರಂಜನ್ ಚೌಧರಿ ಮಹಿಳಾ ಸಂಸದರನ್ನು ತಳ್ಳಿದ ಭದ್ರತಾ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದರು. 

ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರ ರಚನೆಯ ವಿರುದ್ಧ ಸೋಮವಾರ ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಕಾಂಗ್ರೆಸ್ ಸಂಸದರು ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಜಮಾಯಿಸಿ 'ಮೋದಿ ಸರ್ಕಾರ್ ಶೆಮ್ ಶೆಮ್' ಮತ್ತು 'ಪ್ರಜಾಪ್ರಭುತ್ವವನ್ನು ಉಳಿಸಿ' ಎಂಬ ಘೋಷಣೆಗಳನ್ನು ಕೂಗಿದರು.. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಸದನದ ಒಳಗೆ ಇಬ್ಬರು ಕಾಂಗ್ರೆಸ್ ಸಂಸದರು, ಟಿ.ಎನ್ ಪ್ರತಾಪನ್ ಮತ್ತು ಹಿಬಿ ಈಡನ್ ದೊಡ್ಡ ಬ್ಯಾನರ್ ಬೀಸಿದರು, ಮತ್ತು ಇತರ ಸಂಸದರು ಸಹ ಫಲಕಗಳನ್ನು ಎತ್ತಿ ಮೋದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸಂಸದರು "ಮಹಾರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗಿದೆ" ಎಂದು ಕೂಗಿದರು.

ಈ ಸಂಪೂರ್ಣ ಬೆಳವಣಿಗೆಯ ಸಮಯದಲ್ಲಿ, ಅಲ್ಲಿ ಕಾಂಗ್ರೆಸ್ ಸಂಸದರು ಮತ್ತು ಮಾರ್ಷಲ್ಗಳ ನಡುವೆ ಕಾದಾಟ ಆರಂಭವಾಯಿತು. ನಂತರ ಆಧಿರ್ ರಂಜನ್ ಚೌಧರಿ ಅವರು ಸಂಸತ್ತಿನಲ್ಲಿ ಹಾಜರಿದ್ದ ಮಾರ್ಷಲ್‌ಗಳು ಮಹಿಳಾ ಸಂಸದರನ್ನು ತಳ್ಳಿದ್ದಾರೆ ಎಂದು ಆರೋಪಿಸಿದರು.
 

Trending News