G20 meeting in Kashmir: ದೇಶದ ಮುಕುಟ ಕಾಶ್ಮೀರ ಕಣಿವೆಯು ಮೇ 22-25ರ ನಡುವೆ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕುರಿತ ಜಿ-20 ಸಭೆಯನ್ನು ಆಯೋಜಿಸಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು 100 ಗಂಟೆಗಳ ನಂತರ ಜಿ20 ಸಭೆ ಆರಂಭವಾಗಲಿದೆ. ಈ ಸಂಬಂಧ ಶ್ರೀನಗರದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
G20 ಪ್ರತಿನಿಧಿಗಳು ಭೇಟಿ ನೀಡುವ ಸ್ಥಳಗಳಲ್ಲಿ ಹಗಲು ರಾತ್ರಿ ಕೆಲಸ ನಡೆಯುತ್ತಿದೆ. ಜಿ20 ಸಭೆಗೂ ಮುನ್ನ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಆದರೆ ಇಸ್ಲಾಮಾಬಾದ್ ಕಾಶ್ಮೀರದ ಪ್ರಗತಿಯ ಈ ಚಿತ್ರಣವನ್ನು ಇಷ್ಟಪಡುತ್ತಿಲ್ಲ.
ಇದನ್ನೂ ಓದಿ: Horoscope: ಇಂದು ಈ ರಾಶಿಗಳ ಮೇಲೆ ಗುರುವಿನ ದಯೆ; ವ್ಯಾಪಾರದಲ್ಲಿ ಭಾರೀ ವೃದ್ಧಿ; ಧನಲಾಭ ಖಚಿತ!
ಇನ್ನು ಜಿ-20 ಸಭೆಯು ಕಾಶ್ಮೀರದ ಅಭಿವೃದ್ಧಿಗೆ ಮುಂದುವರಿಯಲು ದಾರಿ ಮಾಡಿಕೊಡುತ್ತದೆ. ಜಾಗತಿಕ ಪ್ರವಾಸಿ ತಾಣಗಳ ಪಟ್ಟಿಗೆ ಕಾಶ್ಮೀರವನ್ನೂ ಸೇರಿಸಲಾಗುತ್ತದೆ. ಹೀಗಾದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಪ್ರತಿಯೊಂದು ಷಡ್ಯಂತ್ರವೂ ಅಂತ್ಯಗೊಳ್ಳಲಿದೆ.
ಪ್ರಚಾರ ನಡೆಸಲು ಪಾಕಿಸ್ತಾನದ ಸಂಚು ವಿಫಲ!
ಶ್ರೀನಗರದಲ್ಲಿ ಜಿ20 ಸಭೆ ನಡೆಯಲಿದೆ. ಗುಲ್ಮಾರ್ಗ್‌ನ ವಿಶ್ವಪ್ರಸಿದ್ಧ ಸ್ಕೀ ರೆಸಾರ್ಟ್ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧವಾಗಿದೆ. ಜಿ20ಯ ಪ್ರತಿನಿಧಿ ಕಾಶ್ಮೀರಕ್ಕೆ ಬಂದರೆ ಪ್ರವಾಸೋದ್ಯಮ ಹೆಚ್ಚುತ್ತದೆ ಎಂಬುದು ಎಲ್ಲರ ಭಾವನೆ. ಆದರೆ ಇದಕ್ಕೂ ಮುನ್ನ ಪಾಕಿಸ್ತಾನ ಅಪಪ್ರಚಾರ ಮಾಡಲು ಯತ್ನಿಸಿದ್ದು, ಅದರ ಪ್ರಯತ್ನ ವಿಫಲವಾಗಿದೆ.
ಪಾಕಿಸ್ತಾನದಲ್ಲಿ ಭಯದ ವಾತಾವರಣ!
ಗುಲ್ಮಾರ್ಗ್ ನ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ವರ್ಷವಿಡೀ ಪ್ರವಾಸಿಗರಿಂದ ತುಂಬಿರುತ್ತವೆ. ಈಗ ಜಿ-20 ಪ್ರತಿನಿಧಿಯ ಭೇಟಿಯ ನಂತರ, ಇದು ವಿದೇಶಿಯರಿಗೂ ನೆಚ್ಚಿನ ತಾಣವಾಗಬಹುದು. ಜಿ 20 ರಿಂದ, ಕಾಶ್ಮೀರವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಪ್ರಚಾರ ನಡೆಯಲಿದೆ. ಹೀಗಾದರೆ ಪಾಕಿಸ್ತಾನದ ಷಡ್ಯಂತ್ರ ಅಂತ್ಯಗೊಳ್ಳಲಿದೆ. ಅಷ್ಟೇ ಅಲ್ಲದೆ, ಈ ಬಳಿಕ ಕಾಶ್ಮೀರ ಉನ್ನತಿ ಕಾಣಲಿದೆ. ಶ್ರೀನಗರ ಮತ್ತು ಗುಲ್ಮಾರ್ಗ್‌ನ ಈ ಚಿತ್ರಣವು ಪಾಕಿಸ್ತಾನಕ್ಕೆ ಭಯಾನಕ ಚಿತ್ರದಂತಿದೆ.
ಇವೆಲ್ಲದಕ್ಕೂ ಮುನ್ನ ಜಿ20 ಸಭೆಯ ಕುರಿತು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬ ಹೇಳಿಕೆಯೊಂದನ್ನು ನೀಡಿದ್ದರು. ಕಾಶ್ಮೀರ ಕಣಿವೆಯಲ್ಲಿರುವ ಅಲ್ಪಸಂಖ್ಯಾತರ ಬಗ್ಗೆ ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದರು. ಅದರಕ್ಕೆ ಪ್ರತ್ಯುತ್ತರ ನೀಡಿದ ಭಾರತ, ಜಿ-20 ಅಧ್ಯಕ್ಷರಾಗಿ ದೇಶದ ಯಾವುದೇ ಭಾಗದಲ್ಲಿ ಸಭೆ ಆಯೋಜಿಸುವ ಹಕ್ಕು ತನಗಿದೆ ಎಂದು ಹೇಳಿದೆ.
ಜಿ20 ಶೃಂಗಸಭೆಗೂ ಮುನ್ನ ಜಮ್ಮು ಮತ್ತು ಕಾಶ್ಮೀರದಲ್ಲಿ ಹೈ ಅಲರ್ಟ್:
ಭಾರತದ ಉತ್ತರ ಕೇಳಿ ಪಾಕಿಸ್ತಾನದ ಉದ್ವಿಗ್ನತೆಯೂ ಹೆಚ್ಚಿದೆ. ಭಯೋತ್ಪಾದಕರ ನೆರವಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಹಾಳು ಮಾಡಲು ಪಾಕಿಸ್ತಾನ ನಿರಂತರವಾಗಿ ಪ್ರಯತ್ನಿಸುತ್ತಿದೆ. ಜಿ20 ಶೃಂಗಸಭೆಗೂ ಮುನ್ನ ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ 42 ಗಡಿ ಪೊಲೀಸ್ ಠಾಣೆಗಳನ್ನು ರಚಿಸುವ ಮೂಲಕ ಭಯೋತ್ಪಾದಕರ ಒಳನುಸುಳುವಿಕೆಯನ್ನು ತಡೆಯಲು ಹೊಸ ಗೋಡೆಯನ್ನು ನಿರ್ಮಿಸಲಾಗಿದೆ. ಇದು ಪಾಕಿಸ್ತಾನದ ಭಯೋತ್ಪಾದಕ ಉದ್ದೇಶಗಳನ್ನು ವಿಫಲಗೊಳಿಸುತ್ತಿದೆ.
ಮೇ 23 ರಂದು ಶ್ರೀನಗರದಲ್ಲಿ ಪ್ರವಾಸೋದ್ಯಮ ಕುರಿತು ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಎಲ್ಲಾ ಜಿ 20 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಜಿ20 ಪ್ರತಿನಿಧಿಗಳು ಮೇ 22ರಂದು ಶ್ರೀನಗರ ತಲುಪಲಿದ್ದು, ಮೇ 23ರಂದು ಸಭೆ ನಡೆಯಲಿದೆ. ಮೇ 24 ರಂದು ಪ್ರತಿನಿಧಿಗಳನ್ನು ಪ್ರಮುಖ ಪ್ರವಾಸಿ ಸ್ಥಳಗಳ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ.
ಇದನ್ನೂ ಓದಿ: ದೇಶದ ಈ ಭಾಗಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ: ಗುಡುಗು ಸಹಿತ ವರುಣಾರ್ಭಟದ ಎಚ್ಚರಿಕೆ ಕೊಟ್ಟ ಇಲಾಖೆ
ಆದರೆ ಈ ಬೆನ್ನಲ್ಲೇ ಪಿಒಕೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಆ ಜನರು “ಕಾರ್ಗಿಲ್-ಸ್ಕರ್ದು ಖೋಲ್ ದೋ, ಟೂಟೇ ರಿಷ್ತೆ ಜೋಡ್ ದೋ” ಎಂಬ ಘೋಷಣೆಗಳನ್ನು ಕೇಳಿಬರುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.